ಕೊಪ್ಪಳ ತಾಲೂಕ ಯುವ ಒಕ್ಕೂಟ ರಚನೆ ಪೂರ್ವಭಾವಿ ಸಭೆ.

ಕೊಪ್ಪಳ ೨೬: ಕೊಪ್ಪಳ ಜಿಲ್ಲಾ ಯುವ ಒಕ್ಕೂಟದಿಂದ ಜಿಲ್ಲೆಯ ಕೊಪ್ಪಳ ತಾಲೂಕು ಯುವ ಒಕ್ಕೂಟ ರಚನೆ ಮಾಡಲು ದಿನಾಂಕ ೨೭ ರಂದು ಬೆಳ್ಳಿಗೆ ೧೧ ಗಂಟೆಗೆ ಕೊಪ್ಪಳ ನಗರದ ಅಚಿವ್ ಕೌಶಲ್ಯ ತರಬೇತಿ ಸಂಸ್ಥೆ ಶ್ರೀರಾಘವೇಂದ್ರ ಸ್ವಾಮೀ ಮಠದ ಹತ್ತಿರ ಸಭೆಯನ್ನು ಕರೆಯಲಾಗಿದೆ ಎಂದು ಸ್ವಾಮಿ ವಿವೇಕಾನಂದ ರಾಜ್ಯ ಯುವ ಪ್ರಶಸ್ತಿ ಪುರಸ್ಕೃತರಾದ ರಾಕೇಶ ಕಾಂಬ್ಳೇಕರ್ ತಿಳಿಸಿದ್ದಾರೆ.

ಯುವಕ/ಯುವತಿ/ಮಹಿಳಾ ಕಲಾ ಸಾಂಸ್ಕೃತಿಕ ಕ್ರೀಡೆ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಈ ಒಂದು ಸಭೆಗೆ ಆಗಮಿಸಿ ತಮ್ಮ ಸಲಹೆ ಸೂಚನೆ ನೀಡಬೇಕು. ಸಭೆಗೆ ಸಂಘದ ಅಧ್ಯಕ್ಷರು ಕಾರ್ಯದರ್ಶಿಗಳು ಮತ್ತು ೩ ಜನ ಸದಸ್ಯರು ಕಡ್ಡಾಯವಾಗಿ ಭಾಗವಹಿಸಿ ತಮ್ಮ ಸಲಹೆ ಸೂಚನೆಯಿಂದ ಕೊಪ್ಪಳ ತಾಲೂಕು ಯುವ ಒಕ್ಕೂಟ ರಚನೆ ಮಾಡೋಣ ಹಾಗೂ ಸಭೆಗೆ ಬರುವಾಗ ಸಂಘದ ನೊಂದಣಿ ಪ್ರಮಾಣ ಪತ್ರ ನವೀಕರಣ ಪತ್ರ ಸಂಘದ ಲೆಟರ್ ಪ್ಯಾಡ್ ಮತ್ತು ಸಿಲು ತಪ್ಪದೆ ತೆಗೆದುಕೊಂಡು ಬರಬೇಕು. ಹೆಚ್ಚಿನ ಮಾಹಿತಿಗಾಗಿ ರಾಜ್ಯ ಯುವ ಪ್ರಶಸ್ತಿ ಪುರಸ್ಕೃತರಾದ ಶ್ರೀ ಜಗದಯ್ಯ ಸಾಲಿಮಠ ೯೭೩೧೯೧೮೧೭೬ ಮತ್ತು ಸ್ವಾಮಿ ವಿವೇಕಾನಂದ ರಾಜ್ಯ ಯುವ ಪ್ರಶಸ್ತಿ ಪುರಸ್ಕೃತರಾದ ರಾಕೇಶ ಕಾಂಬ್ಳೆಕರ್ ಕೊಪ್ಪಳ ೯೮೮೬೮೨೯೦೫೨, ಇವರಿಗೆ ಸಂಪರ್ಕಿಸ ಬಹುದು .

Please follow and like us:
error