ಕೊಪ್ಪಳ ತಾಲೂಕ ಜೆ.ಡಿ.ಎಸ್ ಕಾರ್ಯಕರ್ತರ ಸಭೆ

mounesh_vaddatti
ಕೊಪ್ಪಳ ಡಿ.೧೪: ನಗರದ ಮಹಾಂತಯ್ಯನಮಠ ಕಲ್ಯಾಣ ಮಂಟಪದಲ್ಲಿ ಡಿ.೧೫ ರ ಗುರುವಾರ ಮಧ್ಯಾಹ್ನ ೪.೦೦ ಗಂಟೆಗೆ ಜೆಡಿಎಸ್ ಕಾರ್ಯಕರ್ತರ ಸಭೆಯನ್ನು ಏರ್ಪಡಿಸಲಾಗಿದೆ ಎಂದು ಜಿಲ್ಲಾ ಜೆಡಿಎಸ್ ವಕ್ತಾರ ಮೌನೇಶ ಎಸ್.ವಡ್ಡಟ್ಟಿ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾಧ್ಯಕ್ಷ ಪ್ರದೀಪಗೌಡ ಮಾಲಿ ಪಾಟೀಲ್ ಅವರು ವಹಿಸಲಿದ್ದಾರೆ. ಕೊಪ್ಪಳ ತಾಲೂಕಿನ ಮುಖಂಡರು, ಪದಾಧಿಕಾರಿಗಳು ಹಾಗೂ ಎಲ್ಲಾ ಗ್ರಾಮದ ಜೆ.ಡಿ.ಎಸ್. ಕಾರ್ಯಾಕರ್ತರ ಸಭೆಗೆ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಜೆಡಿಎಸ್ ಜಿಲ್ಲಾ ವಕ್ತಾರ ಮೌನೇಶ ಎಸ್.ವಡ್ಡಟ್ಟಿ  ತಿಳಿಸಿದ್ದಾರೆ.

Leave a Reply