ಕೊಪ್ಪಳ ತಾ/ಪಂ/ ಅಧ್ಯಕ್ಷ ಉಪಾಧ್ಯಕ್ಷ ಅವಿರೋದ ಆಯ್ಕೆ

taluka-panchayat-koppal-president-vice-president
ಕೊಪ್ಪಳ:೧೨, ಇಂದು ನಡೆದ ಕೊಪ್ಪಳ ತಾ.ಪಂ. ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆಗೆ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಬಾಲಚಂದ್ರ ಮುನಿರಾಬಾದ್ ಹಾಗೂ ಉಪಾಧ್ಯಕ್ಷರಾಗಿ ಶ್ರೀಮತಿ ಶಂಕರಮ್ಮ ಉಪಲಾಪುರ ಇವರು ಅವಿರೋದವಾಗಿ ಆಯ್ಕೆಯಾದರು. ೨೯ ಸದಸ್ಯರುಳ್ಳ ಕೊಪ್ಪಳ ತಾಲೂಕ ಪಂಚಾಯತಿಯಲ್ಲಿ ಕಾಂಗ್ರೆಸ್ ಪಕ್ಷವು ೨೧ ಸದಸ್ಯರುಹೊಂದಿ ಪಕ್ಷೇತರ ಹಾಗೂ ಜೆ.ಡಿ.ಎಸ್. ಅಭ್ಯರ್ಥಿಗಳು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡು ಕಾಂಗ್ರೆಸ್ ಸದಸ್ಯರಬಲ ೨೩ ಯಾಗಿದ್ದು ಬಿ.ಜೆ.ಪಿ. ಪಕ್ಷದವರು ಯಾರು ನಾಮಪತ್ರ ಸಲ್ಲಿಸದಕಾರಣ ಚುನಾವಣಾ ಅಧಿಕಾರಿ ಇಸ್ಮಾಹಿಲ್ ಶಿರಟ್ಟಿ ಆಯುಕ್ತರು ಕಾಂಗ್ರೆಸ್ ಅಭ್ಯರ್ಥಿಗಳು ಅವಿರೋದವಾಗಿ ಆಯ್ಕೆಯಾಗಿದ್ದಾರೆಂದು ಘೋಷಣೆ ಮಾಡಿದರು.

ಈ ಸಂದರ್ಭದಲ್ಲಿ ಶಾಸಕ ಕೆ.ರಾಘವೇಂದ್ರ ಹಿಟ್ನಾಳ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಹಿಟ್ನಾಳ, ಜಿ.ಪಂ.ಅಧ್ಯಕ್ಷ ಎಸ್.ಬಿ.ನಾಗರಳ್ಳಿ, ಪ್ರಾಧಿಕಾರದ ಅಧ್ಯಕ್ಷ ಜುಲ್ಲು ಖಾದ್ರಿ, ನಗರಸಭೆ ಅಧ್ಯಕ್ಷ ಮಹೇಂದ್ರ ಚೋಪ್ರಾ, ಪಕ್ಷದ ಮುಖಂಡರಾದ ಹೆಚ್.ಎಲ್. ಹಿರೇಗೌಡ್ರು, ಟಿ.ಜನಾರ್ಧನ ಹುಲಿಗಿ, ಹಟ್ಟಿ ಭರಮಪ್ಪ, ವೆಂಕನಗೌಡ್ರು, ಬಸವರೆಡ್ಡೆಪ್ಪ ಹಳ್ಳಿಕೇರಿ, ಹನುಮಂತಗೌಡ್ರು ಗಾಳಿ, ಭರಮಪ್ಪ ಬೆಲ್ಲದ್, ಅಜ್ಜಪ್ಪ ಸ್ವಾಮಿ, ಶಿವಾನಂದ ಹೂದ್ಲೂರು, ಮುನಿರ ಸಿದ್ದಕಿ, ವಕ್ತಾರ ಅಕ್ಬರಪಾಷಾ ಪಲ್ಟನ ಉಪಸ್ಥಿತರಿದ್ದರು.

Leave a Reply