ಕೊಪ್ಪಳ ಜಿಲ್ಲಾ ಜೆ.ಡಿ.ಎಸ್. ಪಕ್ಷದ ವತಿಯಿಂದ ಮುಖ್ಯಮಂತ್ರಿಗಳಿಗೆ ಮನವಿ

ಕೊಪ್ಪಳ: ಜಿಲ್ಲೆಯಾದ್ಯಂತ ಬೀಕರ ಬರಗಾಲವಿದ್ದು, ಕುಡಿಯುವ ನೀರಿನ ಸಮಸ್ಯೆ ಹಾಗೂ ಇನ್ನೀತರ ಹಲವಾರು ಸಮಸ್ಯೆಗಳನ್ನು ವಿಶೇಷ ಕಾಳಜಿ ವಹಿಸಿ ಪರಿಹಾರವನ್ನು ಮಾಡಬೇಕೇಂದು ಒತ್ತಾಯಿಸಿದರು.

ಬೇಡಿಕೆಗಳು:

೧. ಕೊಪ್ಪಳ ಜಿಲ್ಲೆಯಲ್ಲಿ ಸುಮಾರು ೩,೫೦,೦೦೦ ಧನ ಕರುಗಳಿದ್ದು, ಗೋಶಾಲೆಗಳನ್ನು ಹೆಚ್ಚುಮಾಡಬೇಕೆ.
೨. ಕುಡಿಯುವ ನೀರಿನ ಸಮಸ್ಯೆಯನ್ನು ಶಾಶ್ವತವಾಗಿ ಬಗೆಹರಿಸಬೇಕು.
೩. ಕಾರ್ಮಿಕರು ಗುಳೆ ಹೋಗುವುದನ್ನು ತಡೆಯಬೇಕು.
೪. ರೈತರ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು.
೫. ಕೇಂದ್ರ ಸರ್ಕಾರದ ಇನ್‌ಫುಟ್ ಸಬ್‌ಸಿಡಿ ಬಿಡುಗಡೆಗೆ ಒತ್ತಾಯಮಾಡಬೇಕು.
೬. ಉದ್ಯೋಗಖಾತ್ರಿ ವೈಜ್ಞಾನಿಕ ಅನುಷ್ಠಾನ ಮಾಡಬೇಕು.
ಕೊಪ್ಪಳ ತಾಲೂಕಿನಲ್ಲಿ ಉರ್ದು ಪಿ.ಯು ಹಾಗೂ ಡಿ.ಎಡ್ ಕಾಲೇಜು ಸ್ಥಾಪನೆ ಮಾಡಬೇಕು. ಈ ಎಲ್ಲಾ ಬೇಡಿಕೆಗಳನ್ನು ಆದಷ್ಟು ಬೇಗನೆ ವಿಶೇಷ ಕಾಳಜಿ ವಹಿಸಿ ಜಾರಿಗೆ ತರಬೆಕೇಂದು ಕೊಪ್ಪಳ ಜಿಲ್ಲಾ ಜೆ.ಡಿ.ಎಸ್.ನ ಮುಖಂಡ ವಿರೇಶ ಮಹಾಂತಯ್ಯಮಠ, ಜಿಲ್ಲಾ ವಕ್ತಾರ ಮೌನೇಶ ಎಸ್ ವಡ್ಡಟ್ಟಿ, ವೆಂಕಟೇಶ ಬೆಲ್ಲದ, ಶಂಕರನಾಯಕ್, ಜಿಲಾನ್, ಗೌಸ್, ಮೋಹಿನ್, ಮೋಹಿಜ್ ಜಾಲಿಹಾಳ, ಒತ್ತಾಯಿಸಿದರು.

Leave a Reply