ಕೊಪ್ಪಳ ಜಿಲ್ಲಾ ಚಿತ್ರಕಲಾವಿದರ ಸಂಘ ರಚನೆ

koppal-artist-association

ಸಾಲಿಮಠ ಅಧ್ಯಕ್ಷ, ಉಪಾಧ್ಯಕ್ಷ ಬದರಿ ಪುರೋಹಿತ್, ಫಕ್ರುದ್ದೀನ್ ಪ್ರ.ಕಾರ್ಯದರ್ಶಿಯಾಗಿ ಅವಿರೋಧ ಆಯ್ಕೆ
ಕೊಪ್ಪಳ : ನಗರದ ಕಾವ್ಯಾನಂದ ಪಾರ್ಕ(ಈಶ್ವರ ಪಾರ್ಕ)ದಲ್ಲಿ ದಿ.6ರ ರವಿವಾರ ಬೆಳಿಗ್ಗೆ 11ಕ್ಕೆ ಜರುಗಿದ ಜರುಗಿದ ಜಿಲ್ಲಾ ಚಿತ್ರಕಲಾವಿದರುಗಳ ಸಭೆಯಲ್ಲಿ ಹಿರಿಯ ಚಿತ್ರಕಲಾವಿದ ರಾಜು ತೇರದಾಳ ಅವರನ್ನು ಕೊಪ್ಪಳ ಜಿಲ್ಲಾ ಚಿತ್ರಕಲಾವಿದರ ಸಂಘದ ಜಿಲ್ಲಾ ಗೌರವಾಧ್ಯಕ್ಷರನ್ನಾಗಿ ಆಯ್ಕೆಮಾಡಲಾಯಿತು ಅದೇ ರೀತಿ ಅಧ್ಯಕ್ಷರಾಗಿ ಮಂಜುನಾಥ ಸಾಲಿಮಠ, ಉಪಾಧ್ಯಕ್ಷರಾಗಿ ಬದರಿ ಪುರೋಹಿತ್, ಪ್ರಧಾನ ಕಾರ್ಯದರ್ಶಿಯಾಗಿ ಫಕ್ರುದ್ದೀನ್ ತಳಕಲ್, ಸಹ ಕಾರ್ಯದರ್ಶಿಯಾಗಿ ಶಿವಶರಣಯ್ಯ ಮಾಗಳಮನಿ, ಖಜಾಂಚಿಯಾಗಿ ಮಹೇಶ್ ಬೆಳವಣಿಕಿ ನಿರ್ದೇಶಕರುಗಳಾಗಿ ಮನೋಜ್ ವಸ್ತ್ರದ್, ಕೃಷ್ಣಾ ಚಿತ್ರಗಾರ, ಮಾರುತಿ ಪೂಜಾರ್, ಹುಚ್ಚಿರಪ್ಪ ತಳವಾರ್, ಲಕ್ಕನಗೌಡರ್ ಗಳು ಆಯ್ಕೆಯಾಗಿದ್ದಾರೆ. ಈ ಸಂದರ್ಭದಲ್ಲಿ ಸದಸ್ಯರುಗಳಾದ ವೀರೇಶ್ ಮ್ಯಾಗಳೇಶಿ, ಬಸವರಾಜ್ ಹುಲ್ಲೂರ್, ಬೀರಪ್ಪ ಮಾಸ್ತರ ಹುಳ್ಕಿಹಾಳ, ಮಲ್ಲಿಕಾರ್ಜುನ ಸೊರತಾನಿ, ಸಿದ್ದಲಿಂಗೇಶ ತಮ್ಮಿಹಾಳ, ಶೇಖರಪ್ಪ ವೀರಾಪೂರ್, ಸುಧಾಕರ್ ಪತ್ತಾರ್, ವಿನಾಯಕ್ ಬಡಿಗೇರ, ಗುರುನಾಥ ಬಡಿಗೇರ, ಕಳಕೇಶ ಅರಕೇರಿ, ಬಸಯ್ಯ ಸಸಿಮಠ, ಶ್ರೀನಿವಾಸ ಏಣಿಗಿ, ಮಾಜಿದ್ ಖಾನ್ ಮುಸ್ತಫಾ ಹುಸೇನ್ ಬಾಗಲಿ, ಹನುಮೇಶ ತಳವಾರ್, ಹೆಚ್.ಡಿ.ತಳವಾರ್, ಚಂದ್ರಕಾಂತ ನಾಯಕ್, ವೆಂಕೋಬ ಕಗ್ಗಲ್ ಮುಂತಾದವರುಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Please follow and like us:
error