ಮಹಿಬೂಬ ಕೆ ಮುಲ್ಲಾಗೆ ದತ್ತಿ ಪ್ರಶಸ್ತಿ ಪ್ರದಾನ


೧೭.೧೨.೨೦೧೬ರಂದು ಜರುಗಿದ ಕನ್ನಡ ಸಾಹಿತ್ಯ ಪರಿಷತ್ತು ಕೊಪ್ಪಳ ಜಿಲ್ಲಾ ಘಟಕದಿಂದ ಸಾಹಿತ್ಯ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ೨೦೧೫ನೇ ಸಾಲಿನ ದಿ.ಶ್ರೀ ಮರಿಗೌಡ ಮಲ್ಲನಗೌಡರ ಸ್ಮಾರಕ ದತ್ತಿ ಪ್ರಶಸ್ತಿಯನ್ನು ಕುಷ್ಟಗಿ ತಾಲೂಕಿನ ಗುಮಗೇರಾ ಗ್ರಾಮದ ಯುವಕವಿ ಮಹಿಬೂಬ ಮುಲ್ಲಾ ಇವರ ತುಂತುರು ಹನಿಗವನ ಸಂಕಲನಕ್ಕೆ ದತ್ತಿ ದಾನಿಗಳಾದ ಡಾ.ಮಹಾಂತೇಶ ಮಲ್ಲನಗೌಡರ ಹಿರಿಯ ಸಾಹಿತಿಗಳು ಕೊಪ್ಪಳ ಇವರು ಪ್ರಶಸ್ತಿ ಪ್ರದಾನ ಮಾಡಿದರು. ಈ ಸಂದರ್ಭದಲ್ಲಿ ಎ.ವಾಯ್. ನವಲಗುಂದ ನಿವೃತ್ತ ಉಪನ್ಯಾಸಕರು ಮುಂಡರಗಿ, ಎಸ್.ಡಿ.ಡಂಬಳ, ರಾಮಚಂದ್ರಪ್ಪ ಗೊಂಡಬಾಳ, ಶಿವಕುಮಾರ ಕುಕನೂರ, ನೀಲಕಂಠಯ್ಯ ಹಿರೇಮಠ, ರವೀಂದ್ರ ಬಾಕಳೆ, ಉಮೇಶ ಹಿರೇಮಠರವರು,ಕೊಪ್ಪಳ ತಾಕಸಾಪ ಅಧ್ಯಕ್ಷರಾದ ಗಿರೀಶ್ ಪಾನಘಂಟಿ ಉಪಸ್ಥಿರಿದ್ದು, ಜಿಲ್ಲಾ ಕಸಾಪ ಅಧ್ಯಕ್ಷರಾದ ರಾಜಶೇಖರ ಅಂಗಡಿಯವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದru.

Please follow and like us:
error