ಕೊಪ್ಪಳ ಜಿಲ್ಲಾಸ್ಪತ್ರೆ ಲಂಚದ ಕೂಪ

koppal-governement-hospital-doctors-asking-bribe-for-operation-koppal-hospital_xvid

ನಮ್ಮೂರಿಗೆ ದೊಡ್ಡಾಸ್ಪತ್ರೆ ಬಂತು ಅಂತಾ ಜನ ಸಂತೋಷ ಪಟ್ಟಿದ್ರು ಬೇರೆ ಬೇರೆ ಊರಿಗೆ ಹೋಗೋದು ತಪ್ತು ಸಣ್ಣ ಪುಟ್ಟ ರೋಗಕ್ಕೂ ಸಾಯುವುದು ತಪ್ತು ಅಂತಾ ಅಂದ್ಕೊಡಿದ್ರು ಜನ. ಆದರೆ ದೊಡ್ಡ ಕಟ್ಟಡವಷ್ಟೇ ಆಗಿರೋದು ಬಿಟ್ಟರೆ ಬೇರೆನೂ ಉಪಯೋಗವಾಗಲಿಲ್ಲ. ಲಂಚ ಕೊಡದೇ ಸಿರಿಂಜೇ ಮುಟ್ಟಲ್ಲಾ ಎನ್ನುತ್ತಿದ್ದಾರೆ ಇಲ್ಲಿಯ ವೈದ್ಯರು  ಕೊಪ್ಪಳ ಜಿಲ್ಲಾಸ್ಪತ್ರೆ ರೋಗಿಗಳ ಪಾಲಿಗೆ ನಿತ್ಯನರಕವಾಗುತ್ತಿದೆ. ಅಷ್ಟೇ ಅಲ್ಲ koppal-governement-hospital-doctors-asking-bribe-for-operation-koppal-hospital_xvidವಾಗುತ್ತಿದೆ. ದುಡ್ಡು ಕೊಟ್ಟರಷ್ಟೇ ನಿಮಗೆ ಸಿಜೆರಿಯನ್ ಎನ್ನುತ್ತಿದ್ದಾರೆ ವೈದ್ಯರು ಆದರೆ ದುಡ್ಡು ಕೊಟ್ಟಮೇಲೂ ಸಹ ಕೇರ್ ಮಾಡ್ತಾರಾ ? ಇಲ್ಲವೇ ಇಲ್ಲ ಎನ್ನುತ್ತಿದ್ದಾರೆ ರೋಗಿಗಳು. ಅಗಳಕೇರಾದ ಪ್ರೀಯಾ ಇದೇ ಸೋಮವಾರ ಹೆರಿಗೆಗಾಗಿ ಬಂದು ಆಸ್ಪತ್ರೆಗೆ ದಾಖಲಾಗಿದ್ದಳು. ಅವಳನ್ನು ಪರೀಕ್ಷೆ ಮಾಡಿದ ವೈದ್ಯ ಡಾ.ಬಸವರಾಜ್ ಸಜ್ಜನ್  ಕಂಡಿಷನ್ ಬಹಳ ಸಿರಿಯಸ್ ಇದೆ. ನಾರ್ಮಲ್ ಡೆಲಿವರಿ ಆಗೋಲ್ಲ ಬೇಗನೆ ಸಿಜೆರಿಯನ್ ಮಾಡ್ಬೇಕು ಅಂದಿದ್ದಾನೆ. ಮಗಳ ನೋವು ನೋಡಲಾರದೇ ತಾಯಿ ಶಿವಲೀಲಾ ಆಯ್ತು ಮಾಡಿ ಸಾರ್ ಎಂದಿದ್ದಾಳೆ. 3 ಸಾವಿರ ರೂಪಾಯಿ ಆಗುತ್ತೆ ಕೊಟ್ಟರಷ್ಟೇ ಮಾಡೋದು ಇಲ್ಲಾಂದ್ರೆ ಬೇರೆ ಕಡೆ ಹೋಗಿ ಅಂದಿದ್ದಕ್ಕೆ ತಾಯಿ ದುಡ್ಡು ತಂದು ಕೊಟ್ಟಿದ್ದಾಳೆ. ಆನಂತರವೇ ಸಿಜೆರಿಯನ್ ಆಗಿದೆ. ಸಿಜೆರಿಯನ್ ಆದ ಮೇಲೆ ಔಷದಿಗಳನ್ನೆಲ್ಲಾ  ಖಾಸಗಿ ಅಂಗಡಿಯವರಲ್ಲಿ ಖರೀದಿಸಲು ಹೇಳಿದ್ಧಾರೆ. ಅದರಂತೆ ಸಾವಿರಾರು ರೂಪಾಯಿಗಳ ಔಷದಿಯನ್ನು ತಂದಿದ್ದಾಳೆ ತಾಯಿ. ಮರುದಿನವೇ ಮಗುವಿಗೆ ವಿಪರೀತ ಜ್ವರ ಕಾಡಿದೆ . ನರ್ಸಗಳಿಗೆ ಹೇಳಿದರೆ ಯಾರೂ ಬಂದು ನೋಡಿಲ್ಲ. ಡಾಕ್ಟರ್ ಸಹ ಬಂದು ನೋಡಿಲ್ಲ. ಈಗ ಬರ್ತಾರೆ ಆಗ ಬರ್ತಾರೆ ಅಂತಾ ಕಾಯೋದು ಆಗಿದೆ. ಕೊನೆಗೆ ಮರುದಿನ ಖಾಸಗಿ ಆಸ್ಪತ್ರೆಗೆ ಹೋಗಿ ತೋರಿಸಿದರೆ ಮಗುವಿನ ಕಂಡಿಷನ್ ಬಹಳ ಕ್ಷಿಣಿಸಿದೆ ಗದಗಿಗೆ ಹೋಗಿ ಅಂತಾ ಹೇಳಿದ್ದಾರೆ. ಮಗು ಉಳಿದರೆ ಸಾಕೆಂದು ಪ್ರಿಯಾಳ ತಾಯಿ ಶಿವಲೀಲಾ ಮಗುವನ್ನು ಗದಗಿನ ಜರ್ಮನ್ ಆಸ್ಪತ್ರಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾಳೆ. ವಾಪಸ್ ಆಸ್ಪತ್ರೆಗೆ ಬಂದು ನೋಡಿದರೆ ಮಗಳಿಗೆ ನರ್ಸ್ ಗಳು  ಹೊಡೆದಿದ್ದಾರೆ. ದಿನಗಳೇ ಕಳೆದರೂ ಯಾವುದೇ ಡಾಕ್ಟರ್ ಬಂದು ನೋಡಿಲ್ಲ.  ಸಿಜೆರಿಯನ್ ಆಗಿ ವಾರವಾದರೂ ಸಹ ಯಾವುದೇ ವೈದ್ಯರು ಬಂದು ನೋಡಿಲ್ಲ. ಕಂಗಾಲಾಗಿರುವ ತಾಯಿ  ಕೇಳಲು ಹೋದರೆ ನರ್ಸ್ ಗಳು ಮತ್ತು ಸೆಕ್ಯೂರಿಟಿ ಗಾರ್ಡ್ ಗಳು ಧಮಕಿಹಾಕಿದ್ಧಾರೆ. ಯಾರನ್ನು ಕೇಳಿದರೂ ಸಹಾಯಕ್ಕೆ ಬರುತ್ತಿಲ್ಲ.ತಾಯಿ ಮತ್ತು ಮಗು ಬದುಕಿ ಉಳಿದರೆ ಸಾಕು,ಆರೋಗ್ಯವಾದರೆ ಸಾಕು ಎಂದು ಸಾಲಸೋಲ ಮಾಡಿ ತಂದು ಡಾಕ್ಟರ್ ಗೆ ಲಂಚ ಕೊಟ್ಟರೂ ಸಹ  ಇದುವರೆಗಗೆ ಪೇಷಂಟ್ ನೋಡುವುದಕ್ಕೆ ಬಂದಿಲ್ಲ. ವೈದ್ಯರಂತೂ ರೌಂಡ್ಸ್ ಗೂ ಬರುತ್ತಿಲ್ಲ. ನೂರಾರು ಜನ ಹೆರಿಗೆಗೆ ಬಂದವರು , ಹೆರಿಗೆಯಾದವರು, ಸಿಜೆರಿಯನ್ ಗೆ ಒಳಗಾದವರು ಸಂಪೂರ್ಣ ಹದಗೆಟ್ಟಿರುವ ಕೊಳಕು ವಾತಾವರಣದಲ್ಲಿ ಇರಬೇಕಾಗಿದೆ. ಖಾಸಗಿ ಆಸ್ಪತ್ರೆಗಳು ಸುಲಿಗೆ ಮಾಢುತ್ತವೆ ಎನ್ನುವ ಕಾರಣಕ್ಕೆ ಸರಕಾರಿ ಆಸ್ಪತ್ರೆಗೆ ಬಂದರೆ ಇಲ್ಲಿಯೂ ಸಹ ಜನರನ್ನು ಸುಲಿಯುತ್ತಿದ್ದಾರೆ. ವೈದ್ಯರಿಗೆ ದುಡ್ಡು ಕೊಟ್ಟ ಮೇಲೂ ಸಹ  ನಿಷ್ಕಾಳಜಿ ತೋರುತ್ತಿದ್ದಾರೆ. ನಾವೇನೋ ದುಡ್ಡು ಕೊಟ್ಟು ಮಾಡಿಸಿಕೊಂಡೆವು ಆದರೂ ಈ ದುಸ್ಥಿತಿ ಇದೆ ಇನ್ನು ನಮಗಿಂತ ಬಡವರ ಪಾಡೇನು ? ಇವರ ಮೇಲೆ ಕ್ರಮ ಏಕೆಕೈಗೊಳ್ಳುತ್ತಿಲ್ಲ ಎಂದು ತಾಯಿ ಆಕ್ರೋಶವ್ಯಕ್ತಪಡಿಸಿದ್ದಾಳೆ. ಸಂಬಂಧಪಟ್ಟವರು ಇನ್ನಾದರೂ ಇತ್ತ ಗಮನಹರಿಸುತ್ತಾರಾ

Leave a Reply