ಕೊಪ್ಪಳ ಎಪಿಎಎಮ್‌ಸಿ ಕಾಂಗ್ರೆಸ್ ಮಡಿಲಿಗೆ – ಶಾಸಕ ಕೆ.ರಾಘವೇಂದ್ರ ಹಿಟ್ನಾಳ

ಕೊಪ್ಪಳ:೧೦, ಮುದ್ದಾಬಳ್ಳಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಅಭ್ಯರ್ಥಿಯಾದ ಜಡಿಯಪ್ಪ ಬಂಗಾಳಿಪುರ ಚುನಾವಣಾ ಪ್ರಚಾರ ಹಾಗೂ ಮತಯಾಚನೆ ಮಾಡಿದ ಶಾಸಕ ರಾಘವೇಂದ್ರ ಹಿಟ್ನಾಳ ಅವರು ಕ್ಷೇತ್ರದಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳ ವಿರುದ್ಧ ಬಿಜೆಪಿ ಪಕ್ಷಕ್ಕೆ ಸೂಕ್ತ ಅಭ್ಯರ್ಥಿಗಳೇ ಲಭ್ಯವಿಲ್ಲ. ಆದರೂ ಬಿಜೆಪಿ ನಾಯಕರು ಜಿಲ್ಲೆಗೆ ಕಾಂಗ್ರೆಸ್ ಕೊಡುಗೆ ಏನೆಂದು ಕೇಳುತ್ತಿರುವುದು ಹಾಸ್ಯಸ್ಪದ. ಈ ನಾಲ್ಕು ವರ್ಷದ ಅವಧಿಯಲ್ಲಿ ಕೊಪ್ಪಳ ಕ್ಷೇತ್ರವು ಸರ್ವಾಂಗೀಣ ಅಭಿವೃದ್ಧಿ ಹೊಂದುತ್ತಿದ್ದು ಇದಕ್ಕೆ ಮೂಕ ಸಾಕ್ಷಿಯಾಗಿ ಅನೇಕ ಕಾಮಗಾರಿಗಳು ತಲೆ ಎತ್ತಿವೆ. ಕಾಂಗ್ರೆಸ್ಸಿನ ಅಭಿವೃದ್ಧಿ ಕಾಮಗಾರಿಗಳನ್ನು ಸಹಿಸದ ಬಿಜೆಪಿ ನಾಯಕರು ವಿನಾ ಕಾರಣ ಕಾಂಗ್ರೆಸ್ ಬಗ್ಗೆ ಆರೋಪ ಮಾಡುತ್ತಿದ್ದಾರೆ. ಬರುವ ಚುನಾವಣೆಯಲ್ಲಿ ರೈತರು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಿಗೆ ಭರ್ಜರಿ ಗೆಲುವು ಸಾಧಿಸಿ ಬಿಜೆಪಿ ಪಕ್ಷಕ್ಕೆ ಹಾಗೂ ಅವರ ನಾಯಕರಿಗೆ ತಕ್ಕ ಉತ್ತರ ನೀಡಲಿದ್ದಾರೆ. ಸಾಧನೆ ಹಾಗೂ ಅಭಿವೃದ್ಧಿಯ ಪರಿಕಲ್ಪ ಹೊಂದಿರುವ ಕಾಂಗ್ರೆಸ್ ಪಕ್ಷದ ಜನಪರ ಯೋಜನೆಗಳನ್ನು ನೋಡಿ ಮತದಾರರು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಿಗೆ ಗೆಲುವು ಒದಗಿಸಿಕೊಡಲಿದ್ದಾರೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಜಿ.ಪಂ.ಅಧ್ಯಕ್ಷ ಎಸ್.ಬಿ.ನಾಗರಳ್ಳಿ, ತಾ.ಪಂ.ಅಧ್ಯಕ್ಷ ಬಾಲಚಂದ್ರನ್, ಜಿ.ಪಂ.ಸದಸ್ಯ ಗೂಳಪ್ಪ ಹಲಗೇರಿ, ಮುಖಂಡರಾದ ಕರಿಯಪ್ಪ ಮೇಟಿ, ನಾಗರಾಜ ಚಳ್ಳೊಳ್ಳಿ, ಭರಮಪ್ಪ ನಗರ, ಅಡಿವೆಪ್ಪ ರಾಟಿ, ಹೊನ್ನಪ್ಪ ಗೌಡ್ರ, ಸುರೇಶ ರಡ್ಡಿ ಮಾದಿನೂರ, ನವೋದಯ ವಿರುಪಣ್ಣ, ಶರಣಪ್ಪ ಸಜ್ಜನ್, ಪ್ರಧಾನಪ್ಪ, ಚಾಂದಸಾಬ ಕಿಲ್ಲೇದಾರ, ಹನುಮೇಶ ಹೊಸಳ್ಳಿ, ವಕ್ತಾರ್ ಅಕ್ಬರಪಾಷಾ ಪಲ್ಟನ್ ಉಪಸ್ಥಿತರಿದ್ದರು.

Leave a Reply