ಕೊಪ್ಪಳ ಅಂಗನವಾಡಿ ಕಟ್ಟಡಕ್ಕೆ ಭೇಟಿ ಪರಿಶೀಲನೆ

koppal_anganavadi
ಕೊಪ್ಪಳ, ನ. ೧೬- ನಗರದ ೧೮ನೇ ವಾರ್ಡಿನ ತೆಗ್ಗಿನಕೇರ ಓಣಿಯಲ್ಲಿ ೨೦೧೩-೧೪ನೇ ಸಾಲಿನ ಆರ್.ಐ.ಡಿ.ಎಫ್ ೧೯ ಯೋಜನೆಯಡಿ ೧೧.೯೫ ಲಕ್ಷ ರೂ.ಗಳಲ್ಲಿ ನಿರ್ಮಿತಿ ಕೇಂದ್ರದಿಂದ ನೂತನ ಅಂಗನವಾಡಿ ಕೇಂದ್ರದ ಕಟ್ಟಡ ನಿರ್ಮಿಸಿದ್ದು. ಇತ್ತೀಚಿಗೆ ಶಾಸಕ ರಾಘವೇಂದ್ರ ಹಿಟ್ನಾಳ ಅವರಿಂದ ಉದ್ಘಾಟನೆಯು ಆಗಿದೆ. ಆದರೆ ಮೂಲಭೂತ ಸೌಲಭ್ಯವಿಲ್ಲದರಿಂದ ಕಟ್ಟಡದ ಕಿಲಿ, ತೆರೆಯುತ್ತಿಲ್ಲದ್ದರಿಂದ ಸ್ಥಳೀಯರ ಒತ್ತಾಯಕ್ಕೆ ಅಂಗನವಾಡಿ ಮೇಲ್ವಿಚಾರಕಿ ಲಕ್ಷ್ಮೀದೇವಿರೆಡ್ಡಿ ಅವರು ನೂತನ ಅಂಗನವಾಡಿ ಕಟ್ಟಡಕ್ಕೆ ಭೇಟಿ ನೀಡಿ ಪರಿಶೀಲಿಸಿ ವಿದ್ಯುತ್ ಸಂಪರ್ಕ ಮತ್ತು ಕುಡಿಯುವ ನೀರಿನ ಸೌಲಭ್ಯವಿಲ್ಲದನ್ನು ಗಮನಿಸಿ ತಮ್ಮ ಮೇಲಾಧಿಕಾರಿಗಳಿಗೆ ವರದಿ ನೀಡಿ ತೀವ್ರದಲ್ಲಿ ಕ್ರಮ ಜರುಗಿಸಲು ಪ್ರಯತ್ನಿಸುತ್ತೇನೆ. ಅಲ್ಲಿಯವರೆಗೂ ಕೇಂದ್ರ ನಡೆಯುತ್ತಿರುವ ಕಟ್ಟಡದ ಬಾಡಿಗೆ ನಿಲ್ಲಿಸದಂತೆ ಕ್ರಮಕೈಗೊಳ್ಳಲು ತಿಳಿಸುತ್ತೇನೆ ಎಂದು ಹೇಳಿದರು.
ತೆಗ್ಗಿನಕೇರ ಮುಸ್ಲಿಂ ಪಂಚ ಕಮೀಟಿ ಅಧ್ಯಕ್ಷ ಸೈಯ್ಯದ್ ಅಫಜಲ್ ಪಟೇಲ್, ಮುಖಂಡ ವಿರುಪಾಕ್ಷಯ್ಯ ಸ್ವಾಮಿ ಗಂಧದಮಠ, ಕುಸ್ತಿ ಕ್ರೀಡಾಪಟುಗಳ ಸಂಘದ ಅಧ್ಯಕ್ಷ ಸಾಧಿಕ್ ದಫೇದಾರ್ ಪೈಲ್ವಾನ್, ಜನಪರ ಸಂಘಟನೆಗಳ ಒಕ್ಕೂಟದ ಜಿಲ್ಲಾ ಸಂಚಾಲಕ ಎಸ್.ಎ. ಗಫಾರ್, ಅಂಗನವಾಡಿ ಮೇಲ್ವಿಚಾರಕಿ ಲಕ್ಷ್ಮೀದೇವಿ ರೆಡ್ಡಿ, ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಶಾಹೆದಾ ಬೇಗಂ, ಸಹಾಯಕಿ ಅನಸವ್ವ ಅಂಗಡಿ

Please follow and like us:
error