You are here
Home > Koppal News-1 > koppal news > ಕೊಪ್ಪಳದ ರಂಗ ಸಂಭ್ರಮದಲ್ಲಿ ವೀರಅಭಿಮನ್ಯು ಕಾಳಗ ಬಯಲಾಟ ಪ್ರದರ್ಶನ

ಕೊಪ್ಪಳದ ರಂಗ ಸಂಭ್ರಮದಲ್ಲಿ ವೀರಅಭಿಮನ್ಯು ಕಾಳಗ ಬಯಲಾಟ ಪ್ರದರ್ಶನ

bayalata-kannadaಕೊಪ್ಪಳ: ನಗರದ ಅಶೋಕ ವೃತ್ತದಲ್ಲಿರುವ ಸಾಹಿತ್ಯ ಭವನದಲ್ಲಿ ಜೂ. ೧೯ರ ಭಾನುವಾರ ಬೆಳಗ್ಗೆ ೧೦.೦೦ ಗಂಟೆಗೆ ಯಕ್ಷಗಾನ ಬಯಲಾಟ ಅಕಾಡೆಮಿ ಬೆಂಗಳೂರು ಇವರಿಂದ ಯಕ್ಷಗಾನ ಬಯಲಾಟ ರಂಗಸಂಭ್ರಮ ಕಾರ್ಯಕ್ರಮ ಜರುಗಲಿದ್ದು ನಂತರ ಮಧ್ಯಾಹ್ನ ೨.೦೦ ಗಂಟೆಗೆ ಗಂಗಾವತಿಯ ಶ್ರೀ ನೀಲಕಂಠೇಶ್ವರ ಸಾಂಸ್ಕೃತಿಕ ಕಲಾ ವೇದಿಕೆಯ ಕಲಾವಿದರಿಂದ ವೀರ ಅಭಿಮನ್ಯು ಕಾಳU ಬಯಲಾಟ ಪ್ರದರ್ಶನಗೊಳ್ಳಲಿದೆ ವೇದಿಕೆಯ ಅಧ್ಯಕ್ಷ ಶೆಡ್ಡಿ ರಮೇಶ್ ನೇತ್ರ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವೀರ ಅಭಿಮನ್ಯು ಕಾಳಗ ಬಯಲಾಟವನ್ನು ನುರಿತ ಕಲಾವಿದರು ಅಭಿನಯಿಸಲಿದ್ದು, ಐಲಿ ಮಾರುತಿ (ಶ್ರೀಕೃಷ್ಣ), ಕೆ.ಚನ್ನಪ್ಪ (ಸುಭದ್ರಾ), ಶಾವಿ ಮೈಲಾರಪ್ಪ (ಭೀಮ), ನೇತ್ರ ರಮೇಶ್ ಶೆಡ್ಡಿ (ಅರ್ಜುನ) ನಾಗರಾಜ್ ಇಂಗಳಗಿ (ಅಭಿಮನ್ಯು), ವಿರುಪಾಕ್ಷಪ್ಪ ಶಿರವಾರ (ದ್ರೋಣ), ಚಿದಾನಂದಪ್ಪ ವೀರಗಂಟಿ (ಕೌರವ), ಐಲಿ ರವಿ (ಕರ್ಣ), ಯಮನೂರಪ್ಪ ಪಾನಶಾಪ್ (ಸೈಂಧವ) ಚನ್ನಬಸವಸ್ವಾಮಿ (ಧರ್ಮರಾಯ) ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ. ಜಿ.ವೀರನಗೌಡ ಇವರ ನಿರ್ದೇಶನದಲ್ಲಿ ಪ್ರದರ್ಶನಗೊಳ್ಳಲಿರುವ ಕಾರ್ಯಕ್ರಮಕ್ಕೆ ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪ್ರೋತ್ಸಾಹಿಸಬೇಕೆಂದು ರಮೇಶ್ ಕೋರಿದ್ದಾರೆ.

Leave a Reply

Top