ಕೊಪ್ಪಳದ ಯೋಗೇಶ್ ಮತ್ತು ರವಿ -ನಿಸ್ವಾರ್ಥ ಸ್ನೇಹಕ್ಕೆ ಒಂದು ಸಲಾಂ

ಸ್ನೇಹ ಅನ್ನುವದು ಲಾಭನಷ್ಟಗಳ ಸಂಬಂಧವಾಗಿರುವ ದಿನಗಳಲ್ಲಿ ಇವರ ಸ್ನೇಹ ವಿಶ್ವಕ್ಕೆ ಮಾದರಿ ಎನ್ನಬಹುದು.  ಸ್ನೇಹಿತರ ದಿನಾಚರಣೆಯಂದು ಇಂತಹ ನಿಸ್ವಾರ್ಥ ಸ್ನೇಹಕ್ಕೆ ಒಂದು ಸಲಾಂ

koppal-friends

ಕೊಪ್ಪಳದ ಯೋಗೇಶ್ ಮತ್ತು ರವಿ ಬೆನಕ ದರ್ಶಿನಿ ಎನ್ನುವ ಪುಟ್ಟ ಸೆಲ್ಪ್ ಸರ್ವಿಸ್ ಹೋಟಲ್ ಇಟ್ಟುಕೊಂಡಿದ್ಧಾರೆ. ಹೋಟಲ್ ಗೆ ಅಟ್ಯಾಚ್ ಆಗಿ ಪಾನ್ ಶಾಪ್ ಇದೆ. ಇದೇನು ವಿಶೇಷ ಅಂತೀರಾ. ಹೌದು ಇದು ಇವರಿಬ್ಬರ ವಿಶೇಷ ಸ್ನೇಹದ ಸುದ್ದಿಯೇ ಹೌದು. ಯೋಗೇಶ್ ಮತ್ತು ರವಿ ಕಳೆದ ಮೂವತ್ತು ವರ್ಷಗಳಿಂದ ಸ್ನೇಹಿತರು. ಶಾಲೆಯಲ್ಲಿ ಓದುತ್ತಿರುವಾಗಲೇ ಸ್ನೇಹ ಆರಂಭವಾಗಿದ್ದು. ಬದುಕಿನ ನಾನಾಮಜಲುಗಳನ್ನು ದಾಟಿಕೊಂಡು ಇಂದು ಇಲ್ಲಿಯವರೆಗೆ ಬಂದು ನಿಂತಿದೆ. ಕಾಲೇಜು ಹಂತದಲ್ಲಿ, ನಂತರದ ದಿನಗಳಲ್ಲಿ ನಿರಂತರವಾಗಿ ಸ್ನೇಹವನ್ನು ಕಾಪಾಡಿಕೊಂಡು ಬಂದಿದ್ದಾರೆ ಇವರಿಬ್ಬರು. ಯೋಗೇಶ್ ಮತ್ತು ರವಿ ಕಳೆದ ಹತ್ತಾರು ವರ್ಷಗಳಿಂದ ಪುಟ್ಟ ಹೋಟಲ್ ಉದ್ಯಮವನ್ನು ನಡೆಸಿಕೊಂಡು ಬಂದಿದ್ಧಾರೆ. ಯೋಗೇಶ್ ಹೋಟಲ್ ಸಂಭಾಳಿಸಿದರೆ, ರವಿ ಪಾನ್ ಶಾಪ್ ನೋಡಿಕೊಳ್ಳುತ್ತಾನೆ. ಜೊತೆ ಜೊತೆಗೆ ಒಬ್ಬರಿಗೊಬ್ಬರು ಆಸರೆಯಾಗಿ ಕೆಲಸ ಮಾಡುತ್ತಾರೆ. ಅವಶ್ಯಕವೆನಿಸಿದಾಗ ಒಬ್ಬರು ಇನ್ನೊಬ್ಬರ ಕೆಲಸವನ್ನು ಮಾಡುತ್ತಾರೆ.  ಬೆಳಗಿನ ಜಾವದಿಂದಲೇ ಆರಂಭವಾಗಿ ತಡ ರಾತ್ರಿಯವರೆಗೆ ನಡೆಯುವ ಇವರ ಹೋಟಲ್ ನಲ್ಲಿ ಗಿರಾಕಿಗಳು ಜಾಸ್ತಿನೇ ಇರ್ತಾರೆ ಇಂತಹ ಸಂದರ್ಭಗಳಲ್ಲಿ ಒಬ್ಬರಿಗೊಬ್ಬರು ಸಹಾಯ ಮಾಡಿಕೊಳ್ಳುತ್ತಾರೆ.  ಮೇಲು ಕೀಳು ಭಾವವಿಲ್ಲದೇ ನಿರಂತರವಾಗಿ ಕೆಲಸದಲ್ಇ ತೊಡಗಿಕೊಳ್ಳುತ್ತಾರೆ. ಹೊಸಬರ್ಯಾರಾದರೂ ನೋಡಿದರೆ ಇವರನ್ನು ಸಹೋದರರು ಎಂದೇ ತಿಳಿಯುತ್ತಾರೆ. ಆದರೆ ಇವರು ಸಂಬಂಧಿಗಳಲ್ಲವಾರೂ ಅದನ್ನು ಮೀರಿ ಬದುಕುತ್ತಿದ್ದಾರೆ. ಇವರ ಸ್ನೇಹದ ಬಗ್ಗೆ ಗೊತ್ತಿರುವ ಜನ ಅಭಿನಂದಿಸುತ್ತಾರೆ. ವರ ಸ್ನೇಹ ಈಗ 30 ವರ್ಷ ತಲುಪಿದೆ.  ಹತ್ತಾರು ಸಲ ಇವರು ಜಗಳ ಮಾಡಿದ್ದಾರೆ. ಅಷ್ಟೇ ಬೇಗ ಅದನ್ನು ಮರೆತು ಒಂದಾಗಿ ಒಂದೇ ಕುಟುಂಬದವರಂತೆ ಕೆಲಸ ಮಾಡಿದ್ದಾರೆ .ಅದರೆ ಸ್ನೇಹ ಅನ್ನುವದು ಲಾಭನಷ್ಟಗಳ ಸಂಬಂಧವಾಗಿರುವ ದಿನಗಳಲ್ಲಿ ಇವರ ಸ್ನೇಹ ವಿಶ್ವಕ್ಕೆ ಮಾದರಿ ಎನ್ನಬಹುದು.  ಸ್ನೇಹಿತರ ದಿನಾಚರಣೆಯಂದು ಇಂತಹ ನಿಸ್ವಾರ್ಥ ಸ್ನೇಹಕ್ಕೆ ಒಂದು ಸಲಾಂ ಹೇಳೋಣವೇ

Please follow and like us:
error