ಕೊಪ್ಪಳದಲ್ಲೊಂದು ಭಜರಂಗಿ ಬಾಯಿಜಾನ್ ಸಿನೆಮಾದಂತಹುದೇ ಪ್ರಕರಣ !!!

Bajrangi-Bhaijaan-koppal

ಕೊಪ್ಪಳದಲ್ಲೊಂದು ಭಜರಂಗಿ ಬಾಯಿಜಾನ್ ಸಿನೆಮಾದಂತಹುದೇ ಪ್ರಕರಣ ನಡೆದಿದೆ. ಇಲ್ಲಿ ಸಲ್ಮಾನಖಾನ್ ಪಾತ್ರ ವಹಿಸಿರುವುದು ಮಾತ್ರ ಪೊಲೀಸರು.ಹೌದು 6 ವರ್ಷಗಳ ಹಿಂದೆ ಕಾಣೆಯಾಗಿದ್ದ  ಕಿವುಡ ಮತ್ತು ಮೂಗ ಬಾಲಕನೋರ್ವ ಪೊಲೀಸರರ ಸತತ ಪರಿಶ್ರಮದಿಂದ ಮತ್ತೆ ತಾಯಿಯ ಮಡಿಲಿಗೆ ಸೇರಿದ್ದಾನೆ. ಸಿಂದನೂರು ತಾಲೂಕಿನ ರಾಮಯ್ಯ ಕ್ಯಾಂಪಿನ  ನಾರಾಯಣರಾವ್ ಎನ್ನುವವರ ಮಗ ಶ್ರೀನಿವಾಸ  ಗಂಗಾವತಿ ತಾಲೂಕಿನ ದಾಸನಾಳನದ ನಾದಬಿಂದು ಶಾಲೆಯಲ್ಲಿ ಕಲಿಯುತ್ತಿದ್ದ.  ಈ ಶಾಲೆ ಮೂಕ ಮತ್ತು ಕಿವುಡ ಮಕ್ಕಳಿಗಾಗಿಯೇ ಇರುವಂಥಹದ್ದು. 2010ರ ಜುಲೈ 21ರಂದು ಮದ್ಯಾಹ್ನ ಶಾಲೆಯಿಂದ ಕಾಣೆಯಾಗಿದ್ದ . 2 ದಿನಗಳ ನಂತರ  ತಂದೆ ತಾಯಿ ಶಾಲೆಯ ಮುಖ್ಯೋಪಾದ್ಯಯರ ಜೊತೆಗೆ ಬಂದು ಗಂಗಾವತಿಯ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದರು. ಮಾತನಾಡಲು ಬರದ, ಕಿವಿ ಕೇಳಿಸದ ಮಗುವೊಂದು ಏಕಾಏಕಿ ಕಾಣೆಯಾಗಿದ್ದು ಪೋಷಕರಲ್ಲಿ ಆತಂಕ ಮೂಡಿಸಿತ್ತು.  ಹುಡುಕಾಟ ನಡೆದೇ ಇತ್ತು. ವರ್ಷಾನುವರ್ಷ ಹುಡುಕಾಡಿದರೂ ಮಗು ಸಿಗಲೇ ಇಲ್ಲ. ಪೊಲೀಸರೂ ಸಹ  ಎಲ್ಲೆಡೆ ಹುಡುಕಾಡಿ ಕೈಚೆಲ್ಲಿ ಕುಳಿತಿದ್ದರು. ಮಗು ಬದುಕಿರುವುದೇ ಅನುಮಾನ ಎನ್ನುವಂತಾಗಿತ್ತು. ಪೋಷಕರು ಬಂಧುಗಳು ಮಗುವಿನ ಆಸೆಯನ್ನೇ ಬಿಟ್ಟಿದ್ದರು. ಆದರೆ ಪ್ರಕರಣಕ್ಕೆ ಮತ್ತೆ ಜೀವ ಬಂದಿದ್ದು ಕಾಣೆಯಾಗಿದ್ದ ಮಕ್ಕಳ ಕೇಸ್ ಗಳು ವಿಶೇಷ ತನಿಖಾ ದಳಕ್ಕೆ ವರ್ಗಾವಣೆಯಾದ ಮೇಲೆ. ಕೊಪ್ಪಳದಲ್ಲಿ ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ವಿಶೇಷ ತನಿಖಾ ಠಾಣೆಯ ಸಿಪಿಐ ಆರ್.ಎಸ್.ಉಜ್ಜನಿಕೊಪ್ಪ ನೇತೃತ್ವದ ತಂಡಕ್ಕೆ ಈ ಕೇಸ್ ವರ್ಗಾವಣೆಯಾಗಿತ್ತು.  ಮಗು ಕಳೆದು 6 ವರ್ಷಗಳಾಗಿತ್ತು. ಇದ್ದ ಹಳೆಯ ಫೋಟೋಗಳು ಮಾಹಿತಿಯ ಮೇಲೆ ತನಿಖೆ ನಡೆಸಿ ಅಕ್ಕಪಕ್ಕದ ಜಿಲ್ಲೆಗಳಲ್ಲಿ ಜಾಲಾಡಿದ್ದಾರೆ. ಎಲ್ಲಾ ಅನಾಥಾಶ್ರಮಗಳು, ಬಾಲಮಂದಿರಗಳಿಗೆ ಬೇಟಿ ನಿಡಿದ್ದಾರೆ. ಕೊನೆಗೆ ಮಗು ಬಳ್ಳಾರಿಯ ಸರಕಾರಿ ಮೂಕ ಮತ್ತು ಕಿವುಡ ಮಕ್ಕಳ ಶಾಲೆಯಲ್ಲಿ ಪತ್ತೆಯಾದ. ನಂತರ ಸೂಕ್ತ ದಾಖಲಾತಿಗಳನ್ನು ಪರೀಕ್ಷೆಮಾಡಿದಾಗ 6 ವರ್ಷದ ಹಿಂದೆ ಕಾಣೆಯಾಗಿದ್ದ ಶ್ರೀನಿವಾಸನೇ ಈ ಬಾಲಕ ಎನ್ನುವದು ಖಚಿತವಾಯಿತು. ಜುಲೈ 23,2010ರಂದು ಬಳ್ಳಾರಿಯಲ್ಲಿ ಈ ಮಗು ಸಿಕ್ಕಿತ್ತು. ನಂತರ ಈ ಶಾಲೆಗೆ ಸೇರಿಸಲಾಗಿತ್ತು. ಆದರೆ ಮುಗ್ದ ಮಗುವಿಗೆ ಯಾವುದೇ ರೀತಿಯ ಮಾಹಿತಿ ನೀಡುವಲ್ಲಿ ವಿಫಲವಾಗಿತ್ತು. ಕೊನೆಗೂ ಕೊಪ್ಪಳ ಪೊಲೀಸರ ಶ್ರಮ ನಿಜಕ್ಕೂ ಫಲ ಕೊಟ್ಟಿತ್ತು. ಸತ್ತು ಹೋಗಿದ್ದಾನೆ ಎಂದುಮನೆಯವರೇ ಮರೆತು ಹೋಗಿದ್ದ ಮಗು ಮತ್ತೆ ತನ್ನ ತಾಯಿಯ ಮಡಿಲು ಸೇರಿದ್ದಾನೆ. ಪೊಲೀಸರ ಬಗ್ಗೆ ಯಾವಾಗಲೂ ನೆಗೆಟಿವ್ ಸುದ್ದಿಗಳನ್ನೇ ಕೇಳುವಂತಿರುವಾಗ ಮಗುವನ್ನು ತಾಯಿಯ ಮಡಿಲಿಗೆ ಸೇರಿಸಿದ  ಆರ್.ಎಸ್.ಉಜ್ಜನಿಕೊಪ್ಪ ನೇತೃತ್ವದ ತಂಡಕ್ಕೆ ಸಾರ್ವಜನಿಕರು ಅಭಿನಂಧನೆಗಳನ್ನು ಸಲ್ಲಿಸಿದ್ದಾರೆ. ನೀವೂ ಅಭಿನಂದಿಸಿ  ಡಿಸಿಬಿಯ ಉಜ್ಜನಿಕೊಪ್ಪರನ್ನು 9448301014 watch this video

 

Please follow and like us:
error