ಕೊಪ್ಪಳದಲ್ಲಿ ಹೆಂಡತಿ,ಮಗುವಿನ ಕೊಲೆ ಮಾಡಿ ಗಂಡ ಪರಾರಿ

ಹೆಂಡತಿ ಮತ್ತು 3 ತಿಂಗಳ ಮಗುವನ್ನು ಗಂಡನೇ ಕೊಲೆ ಮಾಡಿ ಪರಾರಿಯಾದ ಘಟನೆ ಕೊಪ್ಪಳದಲ್ಲಿ ನಡೆದಿದೆ. ಕೊಪ್ಪಳ ನಗರದ ಹಮಾಲರ ಕಾಲೋನಿಯಲ್ಲಿ ಬೆಳಗಿನ ಜಾವ ಘಟನೆ ನಡೆದಿದೆ. ತಮ್ಮನ ಮದುವೆ ಮತ್ತು ಬಾಣಂತನಕ್ಕೆಂದು ಬಂದಿದ್ದ ಹೆಂಡತಿಯನ್ನು ಮತ್ತು 3 ತಿಂಗಳ ಹಸುಗೂಸನ್ನು ಕ್ರೂರವಾಗಿ ಕೊಲೆ ಮಾಡಿ ಗಂಡ ಪರಾರಿಯಾಗಿದ್ಧಾನೆ.  ಮುನ್ನಿಬೇಗಂ 30 , ರಾಹೀನ ಮೂರು ತಿಂಗಳ ಮಗು ಕೊಲೆಗೀಡಾದ ದುರ್ದೈವಿಗಳು.  ಗಂಡ ಸಲೀಮ ಅನ್ಸಾರಿ ಕೊಲೆ ಮಾಡಿ ಪರಾರಿಯಾಗಿರುವವನು. ಮೂರು ವರ್ಷಗಳ ಹಿಂದೆ ಇವರ ಮದುವೆಯಾಗಿತ್ತು ಸಲೀಮ ಅನ್ಸಾರಿ ಕುಷ್ಟಗಿಯ ಬ್ಯಾಂಕೊಂದರಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ಮದುವೆಯಾದ ನಂತರ ನಿರಂತರವಾಗಿ ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ.

ರಾತ್ರಿ 2 ಗಂಟೆಯ ಸುಮಾರಿಗೆ ಚಹಾ ಮಾಡಿಕೊಂWhatsApp Image 2016-08-02 at 11.29.05 AMಡು ಕುಡಿದಿದ್ದಾನೆ. ನಂತರ ಬೆಳಗಿನ ಜಾವ ಕೊಲೆ ಮಾಡಿದ್ಧಾನೆ ಎನ್ನಲಾಗಿದೆ. ತಾಯಿ ಮತ್ತು ಮಗುವನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ನಂತರ ಯಾರಿಗೂ ಗೊತ್ತಾಗದಂತೆ ಅಲ್ಲಿಂದ ಪರಾರಿಯಾಗಿದ್ಧಾನೆ. ಬೆಳಿಗ್ಗೆ 9 ಗಂಟೆಯಾದರೂ ರೂಂ ನಿಂದ ಗಂಡ ಹೆಂಡತಿ ಯಾರೂ ಹೊರಬರದಿದ್ದಾಗ ಅನುಮಾನಗೊಂಡ ಮನೆಯವರು ರೂಮ್ ನ ಬಾಗಿಲು ತೆಗೆದಾಗ ಘಟನೆ ಬೆಳಕಿಗೆ ಬಂದಿದೆ. ಸ್ಥಳಕ್ಕೆ ನಗರಠಾಣೇಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪೊಲೀಸರು ಆರೋಪಿಗಾಗಿ ಶೋಧ ನಡೆಸಿದ್ದಾರೆ.

 

 

Please follow and like us:
error