You are here
Home > Koppal News-1 > ಕೊಪ್ಪಳದಲ್ಲಿ ಕಾಂಗ್ರೆಸ್ಸಿನಿಂದ ಆಕ್ರೋಶ್ ದಿವಸ್ – ಪ್ರತಿಭಟನೆ

ಕೊಪ್ಪಳದಲ್ಲಿ ಕಾಂಗ್ರೆಸ್ಸಿನಿಂದ ಆಕ್ರೋಶ್ ದಿವಸ್ – ಪ್ರತಿಭಟನೆ

500  ಮತ್ತು ಸಾವಿರ ರೂಪಾಯಿಗಳ ನೋಟ್ ಬ್ಯಾನ್ ವಿರುದ್ದ ಕಾಂಗ್ರೆಸ್ ಪಕ್ಷ ಇಂದು ಕೊಪ್ಪಳದಲ್ಲಿ ಬೃಹತ್ ಪ್ರತಿಭಟನೆ ನಡೆಸಿತು. ಕೊಪ್ಪಳದ ಗಡಿಯಾರ ಕಂಬದಿಂದ ಆರಂಭವಾದ ಪ್ರತಿಭಟನೆ ಮುಖ್ಯ ರಸ್ತೆಗಳ ಮುಖಾಂತರ ಅಶೋಕ ಸರ್ಕಲ್ ತಲುಪಿತು. ಅಶೋಕ್ ಸರ್ಕಲ್ ನಲ್ಲಿ  ಪ್ರತಿಭಟಿಸಿದ ಪ್ರತಿಭನಾಟಕಾರರು ಪ್ರದಾನಿನರೇಂದ್ರ ಮೋದಿಯವರ ವಿರುದ್ದ ಪ್ರತಿಭಟನೆಗಳನ್ನು ಕೂಗಿದರು,

wp-1480326236830.jpg wp-1480326226853.jpg wp-1480326246319.jpgಅವೈಜ್ಞಾನಿಕವಾಗಿ  ನೋಟುಗಳನ್ನು ರದ್ದು ಮಾಡಿರುವುದರಿಂದ ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ. ಹಠಾತ್ತಾಗಿ ಈ ರೀತಿ ಮಾಡಿರುವುದರಿಂದ ಜನಸಾಮಾನ್ಯರು ಪರದಾಡುವಂತಾಗಿದೆ. ಸಣ್ಣಪುಟ್ಟ ವ್ಯಾಪಾರಿಗಳು, ಕೂಲಿಕಾರರು ಮತ್ತು ಬಡಜನವರ ಜೀವನದ ಅಲ್ಲೋಲಕಲ್ಲೋಲವಾಗಿದೆ.ಇದಕ್ಕೆಲ್ಲಾ ಕಾರಣೀಕರ್ತರಾದ  ತುಘಲಕ್ ಮನೋಭಾವ  ಪ್ರದಾನಿ ಮೋದಿ ಹೊಂದಿದ್ದಾರೆ ಎಂದು ಅವರ ವಿರುದ್ದ ಘೋಷಣೆಗಳನ್ನು ಕೂಗಿದರು.  ಪ್ರತಿಭಟನೆಯ ಮೆರವಣಿಗೆಯಲ್ಲಿ ಮಕ್ಕಳೂ ಭಾಗೀಯಾಗಿದ್ದು ವಿಶೇಷವಾಗಿತ್ತು. ಪ್ರತಿಭಟನೆಗೆ ಬಂದಿದ್ದಂತಹ ತಾಯಂದಿರ ಜೊತೆಗೆ ಮಕ್ಕಳೂ ಬಂದು ಕಾಂಗ್ರೆಸ್ ಧ್ವಜವನ್ನು ಹಿಡಿದುಕೊಂಡಿದ್ದು ಕಂಡು ಬಂತು.

Leave a Reply

Top