ಕೊಪ್ಪಳದಲ್ಲಿ ಕಳ್ಳರ ಬಂಧನ

ಕೊಪ್ಪಳದಲ್ಲಿ-ಕಳ್ಳರ-ಬಂಧನ
ನಗರದ ಸಜ್ಜಿಹೊಲ ಪ್ರದೇಶದ ನಿವಾಸಿಗಳಾದ ಆನಂದ, ಸೋಮಪ್ಪ, ಮೈಲಾರಿ, ಸಣ್ಣಗಂಗ ಹಾಗೂ ಅದಲು ಬಂಧಿತರು. ಭಾಗ್ಯನಗರದ ಶಾಸ್ತ್ರಿಕಾಲೋನಿ, ಬನ್ನಿಕಟ್ಟಿಪ್ರದೇಶ ಸೇರಿದಂತೆ ನಗರದ ವಿವಿಧ ಪ್ರದೇಶಗಳಲ್ಲಿ ಮನೆಯ ಬೀಗ ಮುರಿದು ಈ ಐವರು ಕಳವು ಮಾಡಿದ್ದರು. ಈ ಕುರಿತು 2014, 2015 ಹಾಗೂ 2016ನೇ ಸಾಲಿನಲ್ಲಿ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ದಾಖಲಾಗಿದ್ದವು. ಈ ಕಳವು ಪ್ರಕರಣಗಳಲ್ಲಿ ಈ ಐದು ಜನರು ಭಾಗಿಯಾಗಿರೋದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ಬಂಧಿತರಿಂದ 8.49 ಲಕ್ಷ ರೂ. ಮೌಲ್ಯದ 27 ತೊಲ ಬಂಗಾರ, 45 ಸಾವಿರ ರೂ. ಮೌಲ್ಯದ 101 ತೊಲ ಬೆಳ್ಳಿ ವಶಪಡಿಸಿಕೊಂಡಿದ್ದಾರೆ.ಎಸ್ಪಿ ಡಾ. ತ್ಯಾಗರಾಜನ್ ಹಾಗೂ ಡಿವೈಎಸ್ಪಿ ಶ್ರೀಕಾಂತ್ ಕಟ್ಟಿಮನಿ ಮಾರ್ಗದರ್ಶನದಲ್ಲಿ ನಗರ ಠಾಣೆ ಪಿಐ ಸತೀಶ್ ಪಾಟೀಲ್ ತಂಡ ರಚನೆ ಮಾಡಿ ಕಳ್ಳರನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
Please follow and like us:
error