ಕೊಪ್ಪಳದಲ್ಲಿ ಕರ್ಪ್ಯೂ.

ಕೊಪ್ಪಳದಲ್ಲಿ ಕರ್ಪ್ಯೂ ಹಾಕಿದ ಅನುಭವ 39 ಡಿಗ್ರಿಯಿಂದ 41 ಡಿಗ್ರಿಯ ರಣಭೀಕರ ಬಿಸಿಲು.. ಕೊಪ್ಪಳನಲ್ಲಿ ಬಿಸಿಲ ತಾಪ ದಿನೇ ದಿನೇ ಏರುತ್ತಿದೆ. ನಗರಾದ್ಯಂತ ಉರಿಬಿಸಿಲಿಗೆ ತಂಪು ಪಡೆಯಲು ನಗರದ ಜನ ನಾನಾ ವಿಧಾನಗಳ ಮೊರೆ ಹೋಗಿದ್ದಾರೆ. ಬಿಸಿಲು ಜನರಿಗೆ ಶಾಖ ನೀಡಿದೆಯೇನೋ ನಿಜ. ಆದರೆ, ಅದೇ ಸುಡುಬಿಸಿಲು1 ಹಲವು ಬಡವರ ಹೊಟ್ಟೆ ತಣ್ಣಗಾಗಿಸಿದೆ. ಕಬ್ಬಿನ ರಸ ಮತ್ತು ಹಣ್ಣಿನ ನ ರಸದ ಅಂಗಡಿಯಲ್ಲಿ ಜನ ತುಂಬಿ ತುಳುಕುತ್ತಿದ್ದಾರೆ. ಜವಾಹರ ರಸ್ತೆಯಲ್ಲಿ ಬನ್ನಿ ಸಾರ್‌, ಮಜ್ಜಿಗೆ ಕುಡಿದು ಹೊಟ್ಟೆ ತಂಪು ಮಾಡಿಕೊಳ್ಳಿ ಎಂದು ಕರೆಯುವುದೂ ಇದೆ. ಈ ಸುಡು ಬಿಸಿಳಿಂದ ರಕ್ಷಿಸಲು ಕೊಡೆಗಳ ಮೊರೆ ಹೋಗುತ್ತಿದ್ದಾರೆ.. ಮಧ್ಯಾಹ್ನದ ಸಮಯದಲ್ಲಿ ಜನ ಹೊರಬರಲು. ಇಷ್ಟ ಪಡುತ್ತಿಲ್ಲ. ರಸ್ತೆ ಬದಿ ವ್ಯಾಪಾರಿಗಳಿಗೆ ಸುಡು ಬಿಸಿಲು ಗಾಢವಾಗಿ ಕಾಡುತ್ತಿದೆ.. ಆದರೆ ಅದು ಅವರ ಜೀವನದ ಒಂದು ಭಾಗವಾಗಿದೆ. ಮಧ್ಯಾಹ್ನದ ಸಮಯ ಕೊಪ್ಪಳನಲ್ಲಿ ಕರ್ಪ್ಯೂ ಹಾಕಿದ ಅನುಭವದ ಹಾಗೆ ಜನ ಬಿಕೋ… ಏಪ್ರಿಲ್ ತಿಂಗಳಲ್ಲೇ ಹೀಗೆ ಆದರೆ ಇನ್ನು ಮುಂದೆ ಮೇ 2ತಿಂಗಳು. ಇದಕ್ಕಿಂತ ಹೆಚ್ಚು ಬಿಸಿಲು ಇರಬಹುದು .. ಜಲಾಶಯ ಖಾಲಿ ಖಾಲಿ..1500 ಅಡಿ ಕೊರೆದ್ರೂ ಸಿಗ್ತಿಲ್ಲ ನೀರು.. ಈಗಾಗಲೇ ನೀರಿನ ಅಭಾವ ಕಾಡುತ್ತಿದೆ .. ಈಗ ನೀರಿನ್ನು ದಿನಕ್ಕೆ ಎರಡು ಮೂರು.ಗಂಟೆ ಮಾತ್ರ ಬಿಡುತ್ತಾರೆ. ನಗರದಾದ್ಯಂತ 39 ಡಿಗ್ರಿಯಿಂದ 41 ಡಿಗ್ರಿಯ ವರೆಗೆ ತಾಪಮಾನ ಏರಿದೆ. ಇನ್ನು ಮಳೆ ಬರದಿದ್ದರೆ ಇನ್ನಷ್ಟು ಕಠಿಣ ದಿನಗಳು ಬರಲಿದೆ.. ನಾವು ಪಕೃತಿಯನ್ನು ನಾಶ ಮಾಡಿ ಮತ್ತು ಮರಗಳನ್ನು ಕಡಿದು ಈ ಪರಿಸ್ಥಿತಿಗೆ ಪರೋಕ್ಷ ಕಾರಣರಾಗುತ್ತಿದ್ದೇವೆ… ತಿಳಿಯಿರಿ ಮುಂದಿನ ಪೀಳಿಗೆಗೆ ಮರಗಳ ಮತ್ತು ಪಕೃತಿ ವಿಷಯದಲ್ಲಿ ಅವರನ್ನು ಜಾಗೃತಿ ಗೊಳಿಸಿದರೆ ಚೆನ್ನ ಇಲ್ಲಾ ಎಂದರೆ ಇನ್ನು ಹೆಚ್ಚು ಭೀಕರ ಬಿಸಿಲು ಮತ್ತು ಬರಗಾಲ ಎದುರಾಗಲಿದೆ.

Please follow and like us:
error