ಕೊಪ್ಪಳದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ನಿಮಿತ್ಯ ರಾಜ್ಯಮಟ್ಟದ ಸಮಾವೇಶ

1234 mahila-samavesha-koppal2
ಕೊಪ್ಪಳ : ನಗರದಲ್ಲಿ ಮಾರ್ಚ ತಿಂಗಳಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ನಿಮಿತ್ಯ ರಾಜ್ಯಮಟ್ಟದ ಸಮಾವೇಶ ನಡೆಸಲು ತೀರ್ಮಾನಿಸಲಾಗಿದೆ. ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ ನೇತೃತ್ವದಲ್ಲಿ ಇದಕ್ಕಾಗಿ ಈಗಾಗಲೇ ಎರಡು ಸಲ ಪ್ರಾಥಮಿಕ ಹಂತದ ಪೂರ್ವಭಾವಿ ಸಭೆಗಳನ್ನು ನಡೆಸಲಾಗಿದ್ದು. ಇಂದು ನಗರದ ತಾಲೂಕ ಪಂಚಾಯತ್ ಸಭಾಂಗಣದಲ್ಲಿ ಮೂರನೇ ಪೂರ್ವಭಾವಿ ಸಭೆ ನಡೆದು ಸಮಾವೇಶಕ್ಕಾಗಿ ವಿವಿಧ ಸಮಿತಿಗಳನ್ನು ರಚಿಸಲಾಯಿತು. ಜಿಲ್ಲೆಯ ವಿವಿಧ ಸಂಘ,ಸಂಸ್ಥೆಗಳವರು, ಪ್ರಗತಿ ಪರರು, ಹೋರಾಟಗಾರರು, ಬರಹಗಾರರು ಸೇರಿದಂತೆ ಹಲವಾರು ಸಮಾನ ಮನಸ್ಕರನ್ನು ಒಳಗೊಂಡ ಸಭೆಯನ್ನು ಇಂದು ನಡೆಸಲಾಯಿತು. ಮಾರ್ಚ ತಿಂಗಳ ೮ ಮತ್ತು ೯ ರಂದು ನಗರದ ಸಾರ್ವಜನಿಕ ಮೈದಾನದಲ್ಲಿ ಸಮಾವೇಶ ನಡೆಯಲಿದ್ದು ಅದಕ್ಕಾಗಿ ಬೇಕಾಗಿರುವಂತಹ ಪೂರ್ವಸಿದ್ದತೆಗಳ ಕುರಿತು ಚರ್ಚಿಸಲಾಯಿತು. ಪ್ರಚಾರ ಸಮಿತಿ, ನಿಧಿ ಸಂಗ್ರಹ, ವೇದಿಕೆ ಸಮಿತಿ, ಆಹಾರ ಸಮಿತಿ, ಮೆರವಣಿಗೆ ಸಮಿತಿ, ಸಾಂಸ್ಕೃತಿಕ ಸಮಿತಿ ಸೇರಿದಂತೆ ಇತರೆ ಸಮಿತಿಗಳನ್ನು ರಚಿಸಲಾಯಿತು. ಮತ್ತು ಇದೊಂದು ರಾಜ್ಯಮಟ್ಟದ ಸಮಾವೇಶವಾಗಿರುವುದರಿಂದ ಅದರ ಬಗ್ಗೆ ಜಾಗೃತಿ ಮೂಡಿಸಲು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ. ಸೋದರಿತ್ವದ ಶಕ್ತಿಯೊಂದಿಗೆ ಮಹಿಳೆಯರ ಮೇಲಾಗುವ ಹಿಂಸೆ, ದೌರ್ಜನ್ಯಗಳಿಗೆ ಬಲವಾದ ಪ್ರತಿರೋಧ ಒಡ್ಡಲು ಹಾಗೂ ಆರೋಗ್ಯಕರವಾದ ಸಮಸಮಾಜವನ್ನು ಕಟ್ಟುವ ಆಶಯದೊಂದಿಗೆ ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ ರಚಿಸಲಾಗಿದೆ. ಕೊಪ್ಪಳದಲ್ಲಿ ನಡೆಯಲಿರುವ ಸಮಾವೇಶದ ಯಶಸ್ಸಿಗಾಗಿ ಎಲ್ಲರೂ ಕೈಜೋಡಿಸಬೇಕೆಂದು ಸಂಘಟಕರು ಮನವಿ ಮಾಡಿದ್ಧಾರೆ. ಸಭೆಯಲ್ಲಿ ಡಾ.ಎಚ್.ಎಸ್.ಅನುಪಮಾ, ಶಾಂತಾ ಗೋನಾಳ ದೆಬಾಡ, ರೇಣುಕಾ ಪೂಜಾರ, ವಾಣಿ ಪೆರಿಯೋಡಿ, ವಿಠ್ಠಪ್ಪ ಗೋರಂಟ್ಲಿ,ಬಸವರಾಜ್ ಸೂಳಿಬಾವಿ,ಜೆ.ಭಾರದ್ವಾಜ, ಡಿ.ಎಚ್.ಪೂಜಾರ, ಕುಮಾರ ಸಮತಲ, ಎಚ್.ವಿ.ರಾಜಾಬಕ್ಷಿ, ಎನ್.ಎಂ.ದೊಡ್ಡಮನಿ, ಬಸವರಾಜ ಶೀಲವಂತರ, ಜ್ಯೋತಿ ಹಿಟ್ನಾಳ, ಸಾವಿತ್ರಿ ಮುಜುಂದಾರ, ಮಮ್ತಾಜ್ ಬೇಗಂ,ಸರೋಜಾ ಬಾಕಳೆ ಸೇರಿದಂತೆ ವಿವಿಧ ಜಿಲ್ಲೆಗಳ ಸಂಘಟನೆಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು.

Leave a Reply