ಕೊಪನ್ ಮೂಲಕ ಸೀಮೆಎಣ್ಣೆ ವಿತರಣೆ : ಕೊಪ್ಪಳದಲ್ಲಿ ಜೂನ್‌ನಿಂದ ಪ್ರಾಯೋಗಿಕ ಜಾರಿ

karosin-ration-card ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯಿಂದ ಕೊಪ್ಪಳ ನಗರದ ೧೦ ನ್ಯಾಯಬೆಲೆ ಅಂಗಡಿಯ ಅನಿಲ ರಹಿತ ಪಡಿತರ ಚೀಟಿದಾರರಿಗೆ ಇದೇ ಜೂನ್ ತಿಂಗಳಿನಲ್ಲಿ ಸರ್ಕಾರದ ನಿರ್ದೇಶನದಂತೆ ಬಾರ್ ಕೋಡೆಡ್ ಕೊಪನ್ ವ್ಯವಸ್ಥೆ ಮುಖಾಂತರ ಸೀಮೆಎಣ್ಣೆ ವಿತರಿಸುವ ವ್ಯವಸ್ಥೆಯನ್ನು ಪ್ರಾಯೋಗಿಕವಾಗಿ ಜಾರಿಗೆ ತರಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಕನಗವಲ್ಲಿ ಅವರು ತಿಳಿಸಿದ್ದಾರೆ.
ಸೀಮೆಎಣ್ಣೆ ಕೊಪನ್ ಪಡೆದು ಸೀಮೆಎಣ್ಣೆ ವಿತರಿಸಲು ಆಯ್ಕೆ ಮಾಡಿದ ಕೊಪ್ಪಳ ಹಾಗೂ ಭಾಗ್ಯನಗರ ಒಟ್ಟು ೧೦ ನ್ಯಾಯಬೆಲೆ ಅಂಗಡಿಗಳ ವ್ಯಾಪ್ತಿಗೆ ಬರುವ ಪಡಿತರ ಚೀಟಿದಾರರು, ಫೋಟೋ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ, ಬಾರ್ ಕೋಡೆಡ್ ಸೀಮೆಎಣ್ಣೆ ಕೊಪನ್ ಪಡೆದುಕೊಳ್ಳಬೇಕು.
ಬಾರ್ ಕೋಡೆಡ್ ಸೀಮೆಎಣ್ಣೆ ಕೊಪನ್ ಪಡೆದುಕೊಳ್ಳಲು, ನ್ಯಾಯಬೆಲೆ ಅಂಗಡಿ-೧ ರ ಪಡಿತರ ಚೀಟಿದಾರರು ಗದಗ ರಸ್ತೆಯ ಬನ್ನಿಕಟ್ಟಿ ಏರಿಯಾದ ಗೌರಿ ಶಂಕರ ಗುಡಿ ಹಿಂಬಾಗದಲ್ಲಿರುವ ಜೋಶಿ ಎಂಟರ್ ಪ್ರೈಸಸ್ ಇಲ್ಲಿ ಪಡೆಯಬಹುದು. ನ್ಯಾಯಬೆಲೆ ಅಂಗಡಿ-೨ ಮತ್ತು ೬ ರ ಪಡಿತರ ಚೀಟಿದಾರರು ತಹಸಿಲ್ದಾರ ಕಚೇರಿ ಹತ್ತಿರ ಇರುವ ಅಭಿನವ ಕಂಪ್ಯೂಟರ‍್ಸ್.. ನ್ಯಾಯಬೆಲೆ ಅಂಗಡಿ-೩, ೪ ಮತ್ತು ೭ ರ ಪಡಿತರ ಚೀಟಿದಾರರು ಗಡಿಯಾರ ಕಂಬ ಹತ್ತಿರದ ಸಾಯಿ ಕಂಪ್ಯೂಟರ‍್ಸ್. ನ್ಯಾಯಬೆಲೆ ಅಂಗಡಿ- ೯ ಮತ್ತು ೧೦ ರ ಪಡಿತರ ಚೀಟಿದಾರರು ಅಂಬೇಡ್ಕರ್ ಸರ್ಕಲ್ ಹತ್ತಿರದ ಅನು ಡಿಜಿಟಲ್ ಫೋಟೊ ಕೇಂದ್ರದಲ್ಲಿ ಪಡೆಯಬಹುದು. ಹಾಗೂ ಭಾಗ್ಯನಗರದ ನ್ಯಾಯಬೆಲೆ ಅಂಗಡಿ-೨೯ ಮತ್ತು ೩೦ ರ ಪಡಿತರ ಚೀಟಿದಾರರು ನೆಮ್ಮದಿ ಮನೆ ಹತ್ತಿರದ ಡಾ. ವಾಟರ್ ಫಿಲ್ಟರ್ ಮುಂದೆ ಇರುವ ಜೀವನ್ ಕಂಪ್ಯೂಟರ‍್ಸ್ ಇಲ್ಲಿ ಆಧಾರ ಸಂಖ್ಯೆ ಜೋಡಣೆಯಾಗಿರುವ ಪಡಿತರ ಚೀಟಿಯ ಒಬ್ಬ ಸದಸ್ಯ ಬಯೋಮೆಟ್ರಿಕ್ ನೀಡಿ ಬಾರ್ ಕೋಡೆಡ್ ಸೀಮೆಎಣ್ಣೆ ಕೊಪನ್ ಪಡೆದುಕೊಳ್ಳಬಹುದು.
ಆಧಾರ ಸಂಖ್ಯೆ ನೋಂದಣಿ ಮಾಡಿರುವ ಪಡಿತರ ಚೀಟಿದಾರರಿಗೆ ಮೂರು ವಿಧಾನದಲ್ಲಿ ಕೊಪನ್ ಪಡೆದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.
೧)ಪಡಿತರ ಚೀಟಿದಾರರು ಹತ್ತಿರದ ಫೋಟೋ ಬಯೋ ಸೇವಾ ಕೇಂದ್ರಕ್ಕೆ ಹೋಗಿ, ಅಂದರೆ ಅವರ ನ್ಯಾಯಬೆಲೆ ಅಂಗಡಿ ಪಡಿತರ ಚೀಟಿದಾರರ ಪ್ರದೇಶದ ವ್ಯಾಪ್ತಿಗೆ ಗೊತ್ತು ಪಡಿಸಿದ ಸೇವಾ ಕೇಂದ್ರದಲ್ಲಿ, ಆಧಾರ ಸಂಖ್ಯೆ ಮತ್ತು ಬಯೋ ಮೆಟ್ರಿಕ್ ನೀಡುವ ಮೂಲಕ, ದ್ವಿಪ್ರತಿಯಲ್ಲಿ ಕೊಪನ್ ಜನರೇಟ್ ಮಾಡಿಸಿ ಪಡೆದುಕೊಳ್ಳಬೇಕು. ಈ ಸೇವೆ ಸಂಪೂರ್ಣ ಉಚಿತವಾಗಿದ್ದು, ಹಣವನ್ನು ಸೇವಾ ಕೇಂದ್ರದವರಿಗೆ ಪಾವತಿಸುವಂತಿಲ್ಲ. ಹೀಗೆ ಪಡೆದುಕೊಂಡಿರುವ ಕೋಪನ್‌ಗಳಲ್ಲಿ ಒಂದನ್ನು ನ್ಯಾಯಬೆಲೆ ಅಂಗಡಿಯವರಿಗೆ ನೀಡಿ ಸೀಮೆಎಣ್ಣೆ ಪಡೆಯಬಹುದು. ಎರಡನೇ ಪ್ರತಿ ಪಡಿತರ ಚೀಟಿದಾರರು ಇಟ್ಟುಕೊಳ್ಳಬೇಕು.
೨)ಪಡಿತರ ಚೀಟಿದಾರರು ಸ್ವತಃ ಆಹಾರ ಇಲಾಖೆಯ ವೆಬ್‌ಸೈಟ್ ತಿತಿತಿ.ಚಿhಚಿಡಿಚಿ.ಞಚಿಡಿ.ಟಿiಛಿ.iಟಿ <hಣಣಠಿ://ತಿತಿತಿ.ಚಿhಚಿಡಿಚಿ.ಞಚಿಡಿ.ಟಿiಛಿ.iಟಿ> ಇಲ್ಲಿ ಕೊಪನ್ ಜನರೇಟ್ ಎನ್ನುವಲ್ಲಿ ಕ್ಲಿಕ್ ಮಾಡಿ, ತಮ್ಮ ರೇಷನ್‌ಕಾರ್ಡ್ ನಂಬರನ್ನು ದಾಖಲಿಸಬೇಕು. ನಂತರ ರೇಷನ್ ಕಾರ್ಡ್‌ನಲ್ಲಿರುವ ಮತ್ತು ಸೀಮೆಎಣ್ಣೆ ಕೊಪನ್ ಪಡೆದುಕೊಳ್ಳಲು ಬಂದಿರುವ ವ್ಯಕ್ತಿಯನ್ನು ಆಯ್ಕೆ ಮಾಡಿ, ಆ ವ್ಯಕ್ತಿಯ ಆಧಾರ ಸಂಖ್ಯೆಯನ್ನು ನಮೂದಿಸಿದರೆ ಒನ್‌ಟೈಮ್ ಪಾಸ್‌ವರ್ಡ್(ಔಖಿP) ಜನರೇಟ್ ಆಗುತ್ತದೆ. ಅದನ್ನು ಸಲ್ಲಿಸಿದಲ್ಲಿ ಅದೇ ವ್ಯಕ್ತಿಯ ಕುಟುಂಬದ ಸೀಮೆಎಣ್ಣೆ ಕೊಪನ್ ಜನರೇಟ್ ಆಗುತ್ತದೆ. ಆಗ ಅದರ ಪ್ರತಿಯನ್ನು ಪ್ರಿಂಟ್ ತೆಗೆದುಕೊಳ್ಳಬಹುದು.
೩)ಈಗಾಗಲೇ ನೊಂದಣಿಯಾಗಿರುವ ಮೊಬೈಲ್ ಸಂಖ್ಯೆಯಿಂದ ೯೭೩೧೯೭೯೮೯೯ ಕ್ಕೆ ಖಅಏಇಖಔ ಎಂದು ಟೈಪ್ ಮಾಡಿ ಎಸ್‌ಎಂಎಸ್ ಕಳುಹಿಸುವ ಮೂಲಕ ಕಾರ್ಡಿನ ಕೊಪನ್‌ಕೋಡ್ ಪಡೆಯಬಹುದು. ಆ ಕೋಪನ್ ಕೋಡನ್ನು ನ್ಯಾಯಬೆಲೆ ಅಂಗಡಿಯವರಿಗೆ ತೋರಿಸಿದರೆ ಅವರು ತಮ್ಮ ನೊಂದಾಯಿತ ಮೊಬೈಲ್ ಫೋನ್ ಸಂಖ್ಯೆಯಿಂದ ಕೊಪನ್‌ಕೋಡ್ ಪರಿಶೀಲನೆಗಾಗಿ ಎಸ್‌ಎಂಎಸ್ ಕಳುಹಿಸಿದರೆ, ಅವರಿಗೆ ಕೊಪನ್ ಕೋಡ್ ಙಇS/ಓಔ ಎಂಬ ಮೆಸೇಜ್ ಬರುತ್ತದೆ. ಕೊಪನ್‌ಕೋಡ್ ಙಇS ಎಂದು ಬಂದಲ್ಲಿ ಅದರ ಆದಾರದ ಮೇಲೆ ಸೀಮೆಎಣ್ಣೆ ವಿತರಣೆ ಮಾಡಲಾಗುವುದು.
ಜೂನ್ ತಿಂಗಳಿನಲ್ಲಿ ಕೊಪ್ಪಳ ನಗರದ ವ್ಯಾಪ್ತಿಯ ಒಟ್ಟು ೧೦ ನ್ಯಾಯಬೆಲೆ ಅಂಗಡಿಗಳ ಕಾರ್ಡುದಾರರು ಅಂಗಡಿಯ ಮುಂದೆ ತೋರಿಸಿದ ಪಡಿತರ ಚೀಟಿ ವ್ಯಾಪ್ತಿಯ ಸೇವಾ ಕೇಂದ್ರಕ್ಕೆ ಹೋಗಿ ತಮ್ಮ ಸೀಮೆಎಣ್ಣೆ ಕೊಪನ್‌ಗಳನ್ನು ಉಚಿತವಾಗಿ ಪಡೆದುಕೊಳ್ಳಬೇಕು. ಕೊಪನ್ ಇಲ್ಲದೇ ಸೀಮೆಎಣ್ಣೆ ವಿತರಿಸಲಾಗುವುದಿಲ್ಲ ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Please follow and like us:
error