ಕೊನೆಯ ಮನುಷ್ಯ ಬದುಕಬೇಕು ಅದೇ ಅಂಬೇಡ್ಕರ್ ಆಶಯ

mahesh_chandra_guru
ಕೊಪ್ಪಳ ನ. ೨೮. ದೇಶದ ಕೊನೆಯ ಮನುಷ್ಯ ಆರಾಮವಾಗಿ ನಿರ್ಭೀತಿಯಿಂದ ಬದುಕಬೇಕು ಅದುವೇ ಡಾ|| ಅಂಬೇಡ್ಕರ್ ಅವರ ಆಶಯವಾಗಿತ್ತು, ಅದೇ ದೃಷ್ಟಿಯಿಂದ ಅವರ ಸಂವಿಧಾನ ಎಲ್ಲರನ್ನೂ ಸಮಾನವಾಗಿ ಕಾಣಲಾಗಿದೆ ಎಂದು ಮೈಸೂರ ವಿವಿ ಪ್ರಾಧ್ಯಾಪಕ ಪ್ರೋ. ಮಹೇಶ್ಚಂದ್ರಗುರು ಅಭಿಪ್ರಾಯಪಟ್ಟರು.
ಅವರು ನಗರದ ಶ್ರೀ ಕೃಷ್ಣದೇವರಾಯ ವಿವಿಯ ಕೊಪ್ಪಳ ಸ್ನಾತಕೋತ್ತರ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಂವಿಧಾನ ಸಮರ್ಪಣಾ ದಿನವನ್ನು ಉದ್ದೇಶಿಸಿ ಮಾತನಾಡಿದರು. ಸಂವಿಧಾನ ರಚನೆ ಮಾಡುವಾಗ ಅಂಬೇಡ್ಕರ ಆರೋಗ್ಯವೂ ಸ್ಥಿರವಾಗಿರಲಿಲ್ಲ ಆದರೆ, ಶೋಷಿತರ ಬದುಕು ಕಟ್ಟಿಕೊಡಲು ಸಂವಿಧಾನ ರಚನೆಯೊಂದೇ ಸರಿಯಾದ ಮಾರ್ಗ, ಅದುವೇ ಶೋಷಿತರ ಶಕ್ತಿ ಎಂದು ತಿಳಿದ ಅವರು ಮಹಿಳೆಯರಿಗೆ ಮೊದಲ ಬಾರಿಗೆ ಮಹಿಳೆಯರ ಇಚ್ಛೆಯುಳ್ಳವರ ಜೊತೆ ಮದುವೆ, ವಿಚ್ಛೇಧನ, ಶಿಕ್ಷಣ, ಉದ್ಯೋಗ ಮತ್ತು ಬದುಕುವ ಹಕ್ಕನ್ನು ಕೊಟ್ಟವರು, ಶ್ರೀಸಾಮಾನ್ಯ ಅಧಿಕಾರಕ್ಕೆ ಬರಲು ಅವಕಾಶ ಮಾಡಿಕೊಟ್ಟಿದ್ದೇ ದೇಶದ ದೊಡ್ಡ ಲಿಖಿತ ಸಂವಿಧಾನ. ಜಗತ್ತೇ ಒಪ್ಪಿಕೊಂಡ, ಮೆಚ್ಚಿಕೊಂಡ ಸಂವಿಧಾನ ರಚನೆ ಮಾಡಿದ ಅಂಬೇಡ್ಕರ್ ದಿನದ ೨೦ ತಾಸು ಕುಳಿತು ೩ ವರ್ಷಗಳ ಅವಿರತ ಪ್ರಯತ್ನದಿಂದ ದೇಶದ ಬೆಳವಣಿಗೆಗೆ ಅತ್ಯದ್ಭುತ ಕೊಡುಗೆ, ಜಾತಿ ಕುಲ ಗೋತ್ರ ಧರ್ಮ ಎಲ್ಲರಿಗೂ ಅವಕಾಶ ಕೊಟ್ಟಿದ್ದಾರೆ.
ಅಂಬೇಡ್ಕರ್ ಅಂದ್ರೆ ದಲಿತ ರೂಪವಲ್ಲ ಅದು ಇಡೀ ದೇಶದ ನಾಯಕತ್ವ, ಪ್ರಜಾಪ್ರಭುತ್ವದ ಪ್ರತಿಬಿಂಬ, ಅಂಬೇಡ್ಕರರ‍್ನ್ನು ಪ್ರತಿಯೊಬ್ಬರೂ ಆರಾಧಿಸಲೇಬೇಕು, ಇಂದು ಅಂಬೇಡ್ಕರ ಜಾಗತಿಕ ನಾಯಕನಾಗಿ ಕಂಗೊಳಿಸಲು ಕಾರಣ ಆತನಲ್ಲಿದ್ದ ವಿದ್ಯೆ ಮತ್ತು ಶೋಷಿತರನ್ನು ಮೇಲೆತ್ತಲೇಬೇಕು ಎಂಬ ಅದಮ್ಯ ತುಡಿತ, ಅದಕ್ಕಾಗಿ ಜೀವಿಸಿದಕ್ಕಾಗಿ ಎಂಬುದನ್ನು ಯಾರೂ ಮರೆಯಬಾರದು ಎಂದವರು ಹೇಳಿದರು.
ವಿಶ್ವವಿದ್ಯಾಲಯಗಳು ಮೂರ್ಖರನ್ನು ನಿರ್ಮಾಣ ಮಾಡುವ ಕೇಂದ್ರಗಳಲ್ಲ ದೇಶಕ್ಕೆ ಕೊಡುಗೆ ನೀಡುವ ಶ್ರಮಜೀವಿ ಬುದ್ಧಿವಂತರನ್ನು ನಿರ್ಮಾಣ ಮಾಡುವ ಕೇಂದ್ರಗಳಾಗಬೇಕು ಎಂದರು.
ಇದೇ ವೇಳೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಸಿಂಡಿಕೇಟ್ ಸದಸ್ಯೆ ಸಾವಿತ್ರಿ ಮುಜುಂದಾರ, ನಮಗೆ ಅತ್ಯಂತ ಗೌರವ ನೀಡಿದ್ದು ಸಂವಿಧಾನ, ಅದರ ಕರ್ತೃ ಡಾ|| ಅಂಬೇಡ್ಕರ್‌ರನ್ನು ಪ್ರತಿನಿತ್ಯ ನೆನಪಿಸಿಕೊಂಡು ಊಟ ಮಾಡಬೇಕು, ಸರಕಾರ ಯಾವ ನಿಯಮಗಳನ್ನು ಒಳಪಟ್ಟು ಆಡಳಿತ ನಡೆಸುತ್ತದೋ, ಯಾವ ನಿಯಮಗಳನ್ನು ಜನಸಮುದಾಯ ಒಪ್ಪಿಕೊಂಡು ನಡೆಯುತ್ತಾರೋ ಅದನ್ನು ಲಿಖಿತ ರೂಪದಲ್ಲಿ ನೀಡಿದ್ದು ಸಂವಿಧಾನವೆಂಬ ಸಂಕಲನ ಎಂದ ಅವರು ಜಾತ್ಯಾತೀತವಾದಿಯನ್ನು ನಾವೆಲ್ಲರೂ ಗೌರವಿಸಬೇಕು ಎಂದರು. ವಿಎಸ್‌ಕೆ ವಿವಿ ಕೊಪ್ಪಳ ಸ್ನಾತಕೋತ್ತರ ಕೇಂದ್ರದ ವಿಶೇಷಾಧಿಕಾಋಇ ಡಾ|| ಮನೋಜಕುಮಾರ ಡೊಳ್ಳಿ ಅಧ್ಯಕ್ಷತೆವಹಿಸಿ ಮಾತನಾಡಿದರು.
ವಿಜಯಲಕ್ಷ್ಮೀ, ಧನರಾಜ ಎತ್ತಿನಮನಿ ಪ್ರಾರ್ಥಿಸಿದರು, ಉಪನ್ಯಾಸಕ ಎಲ್.ವಿ.ವಿಶಾಲಾಕ್ಷಿ ಸ್ವಾಗತಿಸಿದರು, ಉಪನ್ಯಾಸಕ ಎಸ್. ಮುನಿರಾಜು ಪ್ರಾಸ್ತಾವಿಕವಾಗಿ ಮಾತನಾಡಿದರು, ಮೆಣಸಗಿ ಹೇಮಾವತಿ ಶಿವಾನಂದ ನಿರೂಪಿಸಿದರು, ಡಾ|| ಅಜಯ್‌ಕುಮಾರ ಕುಲಕರ್ಣಿ ವಂದಿಸಿದರು.

Please follow and like us:
error