ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರ ಹೋರಾಟಕ್ಕೆ ಅಗೌರವ ತೋರಿದೆ -ಸೈಯದ್ ಖಾಲಿದ

ಗದಗ : ಕಳೆದ ಒಂದು ವರ್ಷದಂದ ರೈತರು ನಿರಂತರ ಹೋರಾಟ ನಡೆಸುತ್ತಿದ್ದರೂ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಕಣ್ಣು ಕಾಣಿಸುತ್ತಿಲ್ಲ, ಕಿವಿ ಕೇಳಿಸುತ್ತಿಲ್ಲ, ರೈತರ ಹೋರಾಟಕ್ಕೆ ಜನಪ್ರತಿನಿಧಿಗಳ ಇಚ್ಚಾಶಕ್ತಿ ಕೊರತೆ ಎದ್ದು ಕಾಣುತ್ತಿದೆ. ಜನಪ್ರತಿನಿಧಿಗಳ ಈ ಧೋರಣೆ ಹೀಗೆ ಮುಂದುವರೆದರೆ ಮುಂದಿನ ದಿನಗಳಲ್ಲಿ ಸಂಸದರ, ಸಚಿವರ ಹಾಗೂ ಶಾಸಕರ ಮನೆ ಮುಂದೆ ಅಡುಗೆ ಮಾಡುವ ಮೂಲಕ ಜನಪ್ರತಿನಿದಿಗಳನ್ನು ಎಚ್ಚರಿಸಲಾಗುವುದು ಎಂದು ಅಖಿಲ ಕರ್ನಾಟಕ ಜನಶಕ್ತಿ ವೇದಿಕೆಯ ರಾಜ್ಯಾದ್ಯಕ್ಷ protest-gadag protest-gadag-syed-khalid ಕೊಪ್ಪಳ ಹೇಳಿದರು.

ಅವರು ನಗರದ ಕಿತ್ತೂರು ರಾಣಿ ಚನ್ನಮ್ಮ ವೃತ್ತದಲ್ಲಿ ರಾಣಿ ಚನ್ನಮ್ಮ ಅವರ ಮೂರ್ತಿಗೆ ಮಾಲಾರ್ಪಣೆ ಮಾಡಿ ನಂತರ ವೇದಿಕೆ ನೂರಾರು ಕಾರ್ಯಕರ್ತರು ಮುಳಗುಂದ ನಾಕಾದಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟಿಸಿದರು. ನಂತರ ಮಹಿಳೆಯರು ಲಟ್ಟಣಿಗೆ ಹಿಡಿದುಕೊಂಡು ಪುರುಷರು ಬರಿಗಾಲದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ನಡೆಯುವ ಮೂಲಕ ಕಳಸಾ ಬಂಡೂರಿ ಹಾಗೂ ಮಹದಾಯಿ ನಾಲಾ ಯೋಜನೆ ಜಾರಿಗಾಗಿ ಆಗ್ರಹಿಸಿ ರೈತರು ನಡೆಸುತ್ತಿರುವ ಹೋರಾಟಕ್ಕೆ ಆತ್ಮಸ್ಥೈರ್ಯ ತುಂಬಿ ರೈತರ ಬೇಡಿಕೆಗಳನ್ನು ಕೂಡಲೇ ಈಡೇರಿಸುವಂತೆ ಆಗ್ರಹಿಸಿ ಅಪರ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿ ಹಾಗೂ ಪ್ರದಾನ ಮಂತ್ರಿ ಅವರಿಗೆ ಮನವಿ ಸಲ್ಲಿಸಿ ಅವರು ಮಾತನಾಡಿದರು.

ಉತ್ತರ ಕರ್ನಾಟಕದ ೪ ಜಿಲ್ಲೆಗಳ ರೈತ ಸಮುದಾಯಕ್ಕೆ ಜೀವ ಜಲವಾದ ಕಳಸಾ ಬಂಡೂರಿ ಹಾಗೂ ಮಹದಾಯಿ ನಾಲಾ ಯೋಜನೆ ಜಾರಿಗಾಗಿ ಎಲ್ಲರೂ ಪಕ್ಷಬೇಧ ಮರೆತು ಹೋರಾಟ ಮಾಡಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಗೆ ಒತ್ತಡ ಹೇರಬೇಕಾಗಿದೆ. ರಾಜ್ಯದಿಂದ ಆಯ್ಕೆಯಾದ ಸಂಸದರು ರಾಜ್ಯಕ್ಕೆಎ ೪೦ ಟಿಎಂಸಿ ನೀರು ಕೊಡಿಸಿ ರಾಜ್ಯದ ಜನತೆಯ ಮನ ಗೆಲ್ಲಬೇಕು ಇಲ್ಲದಿದ್ದರೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ರೈತರ ಹೋರಾಟಕ್ಕೆ ಬೆಂಬಲ ನೀಡಲಿ.ರೈತ ಬಂಡಾಯದ ೩೬ ವರ್ಷಾಚರಣೆ ಹಾಗೂ ಕಳಸಾ ಬಂಡೂರಿಗಾಗಿ ನಡೆಸುತ್ತಿರುವ ಹೋರಾಟಕ್ಕೆ ಒಂದು ವರ್ಷಗತಿಸಿದ ಈ ಸಂದರ್ಭದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರ ಹೋರಾಟಕ್ಕೆ ಅಗೌರವ ತೋರಿದೆ. ಸರ್ಕಾರ ರೈತರ ತಾಳ್ಮೆಯನ್ನು ಪರೀಕ್ಷಿಸದೆ ಮತ್ತೊಂದು ರೈತ ಬಂಡಾಯ ಹೋರಾಟಕ್ಕೆ ಮುನ್ನುಡಿ ಬರೆಯಬಾರದು ಎಂದು ರಾಜ್ಯಾಧ್ಯಕ್ಷ ಸೈಯದ್ ಖಾಲಿದ ಕೊಪ್ಪಳ ಅಕ್ರೋಶ ವ್ಯಕ್ತ ಪಡೆಸಿದರು.

ಯುವ ಮುಖಂಡ ಬೂದೇಶ ಬ್ಯಾಹಟ್ಟಿ ಮಾತನಾಡಿ, ಯಾವುದೇ ಅಧಿಕಾರ ಶಾಶ್ವತವಲ್ಲ ಜನಪ್ರತಿನಿಧಿಗಳು ತಮ್ಮ ಅಧಿಕಾರವಧಿಯಲ್ಲಿ ಜನಹಿತ ಕಾರ್ಯಗಳನ್ನು ಮಾಡುವ ಮೂಲಕ ಜನತೆ ಮನಸ್ಸಿನಲ್ಲಿ ಉಳಿಯಬೇಕು ಎಂದು ಹೇಳಿದರು.
ಕುತ್ಬುದ್ದೀನ ಖಾಜಿ ಮಾತನಾಡಿ, ರೈತರು ವಿವಿಧ ಪ್ರತಿಭಟನೆ ಮೂಲಕ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದರೂ ಈವರೆಗೂ ಯಾವುದೇ ಪ್ರಯೋಜನೆ ಆಗದಿರುವುದು ವಿಷಾದನೀಯ. ರೈತ ವರ್ಗಕ್ಕೆ ನ್ಯಾಯ ಸಿಗುವರೆಗೂ ನಿರಂತರ ಹೋರಾಟ ಮಾಡಲಾಗುವುದು ಎಂದು ಹೇಳಿದರು.

ವೇದಿಕೆಯ ರಾಜ್ಯಾಧ್ಯಕ್ಷೆ ಶ್ರೀಮತಿ ಪೂಜಾ ಬೇವೂರ ಮಾತನಾಡಿ, ರೈತರು ಹೋರಾಟಕ್ಕೆ ಬೆಂಬಲಿಸಿದರೂ ಯಾವುದೇ ಪ್ರಯೋಜನವಾಗದೇ ಇರುವುದರಿಂದ ಅನಿವಾರ್ಯವಾಗ ಮಹಿಳೆಯರು ಲಟ್ಟಣಿಗೆ ಹಿಡಿಯಬೇಕಾಗಿದೆ ಈಗಲಾದರೂ ಸರ್ಕಾರ ಎಚ್ಚೆತ್ತುಕೊಳ್ಳಲಿ ಇಲ್ಲದಿದ್ದರೆ, ರೈತರ ಹೋರಾಟದಿಂದ ಆಗುವ ಪರಿಣಾಮವನ್ನು ಎದುರಿಸಿ ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ನಬೀಸಾಬ ಕೊರ್ಲಹಳ್ಳಿ, ಎಸ್.ಎಸ್‌ರಡ್ಡೇರ, ಎಂ.ಎಸ್‌ರಡ್ಡೇರ, ಸುರೇಶ ಹಳ್ಳಿಕೇರಿ, ಮಹಾಂತೇಶ ಶ್ಯಾವಿ, ಮುನ್ನಾ ಡಾಲಾಯತ, ಗಣೇಶ ಹುಬ್ಬಳ್ಳಿ, ವಸಂತ, ದಾದಾಪೀರ, ಶಮೀರ ಮುಳಗುಂದ, ಶಕುಂತಲಾ ಗಂಗಾವತಿ, ಖ್ವಾಜಾಹುಸೇನ ಸೈಯದ್, ಲೀಲಾ ಹಡಪದ, ಎಂ.ಆರ್.ನದಾಪ,ಸಾಯಿಲ್ ನವಲಗುಂದ,ದಾವಲಸಾಬ್ ಕಂಪ್ಲಿ, ಚಾಂದ ಜಕಣಿ, ಸೇರಿದಂತೆ ಮುಂತಾದವರು ಪಾಲ್ಗೊಂಡಿದ್ದರು.

Leave a Reply