ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿದ್ಯಾರ್ಥಿ ವಿರೋಧಿ ನೀತಿ ವಿರುದ್ದ ಶೈಕ್ಷಣಿಕ ಬಂದ್ ಯಶಸ್ವಿ

koppal-bandh (1)
_________________________________________________________________________________
ಶಿಕ್ಷಣದ ವ್ಯಾಪಾರೀಕರಣ, ಕೋಮುವಾದೀಕರಣ, ಕೇಂದ್ರಿಕರಣ ವಿರೋಧಿಸಿ, ಸಮಾನ ಶಿಕ್ಷಣಕ್ಕಾಗಿ ಒತ್ತಾಯಿಸಿ, ವಿದ್ಯಾರ್ಥಿಗಳ ಪ್ರಜಾಸತ್ತಾತ್ಮಕ ಹಕ್ಕುಗಳಿಗಾಗಿ ಆಗ್ರಹಿಸಿ SಈI, ಸಂಘಟನೆ ಕರೆ ನೀಡಿದ್ದ ಶೈಕ್ಷಣಿಕ ಬಂದ್ ಗೆ ಉತ್ತಮ ಪ್ರತಿಕ್ರೀಯೆ ದೊರಕಿದೆ. ಬಂದ್ ನ ಭಾಗವಾಗಿ ಇಂದು ಕೊಪ್ಪಳ ನಗರದಲ್ಲಿ ಖಾಸಗಿ ಶಾಲೆಗಳ ಮುಖ್ಯಸ್ಥರು ಶಾಲೆಗಳಿಗೆ ರಜೆ ಘೋಷಣೆ ಮಾಡಿದ್ದರು ಮತ್ತು ಎಲ್ಲಾ ಕಾಲೇಜಿನ ವಿದ್ಯಾರ್ಥಿಗಳು ಎಸ್.ಎಫ್.ಐ ಕರೆಗೆ ಸ್ಪಂದಿಸಿ ತರಗತಿಯನ್ನು ಬಹಿಷ್ಕರಿಸಿ ಬಂದನಲ್ಲಿ ಪಾಲ್ಗೊಂಡಿದ್ದರು.
ದೇಶಕ್ಕೆಸ್ವಾತಂತ್ರ್ಯ ಬಂದು ೭೦ ವರ್ಷ ಗಳಾದರೂ ಶಿಕ್ಷಣ ಎಲ್ಲರ ಹಕ್ಕಿಗಾಗಿರದೆ, ಕೇವಲ ಹಣವುಳ್ಳವರ ಹಕ್ಕಾಗಿದೆ. ಅಭಿವೃದ್ದಿಯ ಹೆಸರನಲ್ಲಿ ರಾಜಕೀಯ ಮಾಡುತ್ತಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿದ್ಯಾರ್ಥಿ ವಿರೋಧಿ ನೀತಿಗಳಿಂದಾಗಿ ಅಸಂಖ್ಯಾತ ವಿದ್ಯಾರ್ಥಿ ಸಮುದಾಯ ಶಿಕ್ಷಣದಿಂದ ವಂಚಿತರಾಗಿದ್ದಾರೆ. ಕುಟುಂಬ-ಸಮಾಜ-ದೇಶಗಳ ನಡುವೆ ಕೊಂಡಿಯಾಗಿ ಕೆಲಸ ಮಾಡಬೇಕಿದ್ದ ವಿದ್ಯಾರ್ಥಿ ಸಮುದಾಯವು ಸರ್ಕಾರಗಳ ವ್ಯಾಪಾರೀಕರಣ-ಕೇಸರಿಕರಣಗಳ ಮುಖವಾಡಕ್ಕೆ ಬಲಿಯಾಗಿ ದೇಶ ಸೇವೆಗಿಂತ ವೈಯಕ್ತಿತಿಕ ಬದುಕಿನಡೆಗೆ ನಡೆಯುವಂತೆ ಮಾಡುತ್ತಿದೆ. ಕೇಂದ್ರ ಮತ್ತು ರಾಜ್ಯ ಸರಕಾರಗಳ ವಿದ್ಯಾರ್ಥಿ ವಿರೋಧಿ ನೀತಿ ಖಂಡಿಸಿ ಸೆಪ್ಟಂಬರ್ ೦೨ ರಂದು ಶೈಕ್ಷಣಿಕ ಬಂದ್ ನಡೆಸುವ ಮೂಲಕ ಆಕ್ರೋಶ್ ವ್ಯಕ್ತಪಡಿಸಿದರು.
ಭಾಗ್ಯಗಳಿಲ್ಲದ ಶಿಕ್ಷಣ : ೩ ವರ್ಷದ ಸಂಭ್ರಮಾಚರಣೆಯನ್ನು ಆಚರಿಸಿಕೊಂಡ ರಾಜ್ಯ ಸರ್ಕಾರವು ವಿದ್ಯಾರ್ಥಿಗಳ ಹಿತಕಾಪಾಡುವ, ಅವರ ಶೈಕ್ಷಣಿಕ ಬದಕನ್ನು ಅಭಿವೃದ್ದಿ ಪಡಿಸುವ ಯಾವ ಯೋಜನೆಗಳನ್ನು ಜಾರಿ ಮಾಡಲಿಲ್ಲ ಸಾಮಾಜಿಕ ನ್ಯಾಯದ ಹೆಸರಿನಲ್ಲಿ ವಿದ್ಯಾರ್ಥಿಗಳನ್ನು ವಂಚಿಸಿದ್ದು. ಈ ಸರ್ಕಾರದ ಬಹುದೊಡ್ಡ ಸಾಧನೆಯಾಗಿದೆ. ಆರ್.ಟಿ.ಈ ಕಾಯ್ದೆಯನ್ನು ಸಮರ್ಪಕವಾಗಿ ಜಾರಿ ಮಾಡದೆ ಖಾಸಗಿ ಶಾಲೆಗಳು ಮನಸೋ ಇಚ್ಚೆ ಹಣ ಪಡೆಯಲು ಸಹಕಾರ ನೀಡುತ್ತಿದೆ. ಖಾಸಗೀ ಶಿಕ್ಷಣ ಸಂಸ್ಥೆಗಳೆ ಸರ್ಕಾರಗಳನ್ನು ನಿಯಂತ್ರಿಸುತ್ತಿವೆ. ಸರ್ಕಾರಿ ಶಾಲೆಗಳು ಸ್ವಂತ ಕಟ್ಟಡವಿಲ್ಲದೆ ನರಳುತ್ತಿವೆ ಸ್ವಂತ ಕಟ್ಟಡವಿರುವ ಸರ್ಕಾರಿ ಶಾಲೆಗಳು ಶಿಥಿಲಾ ವ್ಯವಸ್ಥೆಯಲ್ಲಿವೆ. ೨೭೦೩೯ ಶಾಲೆಗಳು ಅತೀ ದುರಸ್ತಿಯಲ್ಲಿವೆ. ೩೭೫೭೫ ಶಿಕ್ಷಕರ ಹುದ್ದೆಗಳು ೪೮೦೦ ಪಿ.ಯು ಉಪನ್ಯಾಸಕರ ಹುದ್ದೆಗಳು ಶೇ೪೬ ರಷ್ಟು ಪದವಿ ಹಾಗೂ ಶೆ.೩೨% ವಿಶ್ವ ವಿದ್ಯಾಲಯಗಳಲ್ಲಿ ಉಪನ್ಯಾಸಕರ ಕೊರತೆ ಇದೆ. ಶಾಲೆಗೆ ದಾಖಲಾದ ಮಕ್ಕಳಲ್ಲಿ ಶಾಲೆ ಬಿಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಪ್ರಾಥಮಿಕ ಶಿಕ್ಷಣದಲ್ಲಿ ೨೬ % ಪಿ.ಯು.ಸಿ ಯಲ್ಲಿ ೨೨% ಮತ್ತು ಪದವಿ ಹಾಗೂ ಉನ್ನತ ಶಿಕ್ಷಣದಲ್ಲಿ ೩೩% ರಷ್ಟಿದೆ. ಶೌಚಲಯ ಕ್ರಿಡಾಂಗಣ, ಕುಡಿಯುವ ನೀರು ಇಲ್ಲದೆ ವಿದ್ಯಾರ್ಥಿ ಶಿಕ್ಷಕ ಸಮುದಾಯ ನಿತ್ಯ ನರಕಯಾತನೆ ಅನುಭವಿಸುತ್ತಿದೆ. ಶಿಷ್ಯ ವೇತನ ಸಕಾಲಕ್ಕೆ ಸಿಗದೆ ವಿದ್ಯಾರ್ಥಿಗಳ ಅಧ್ಯಯನಕ್ಕೆ ತೊಂದರೆಯಾಗುತ್ತಿದೆ. ಹಾಸ್ಟಲ್‌ನಲ್ಲಿರುವ ವಿದ್ಯಾರ್ಥಿಗಳಿಗೆ ಗುಣಮಟ್ಟದ ಊಟ ಸಿಗದೆ ರೋಗಗಳಿಂದ ನರಳುವಂತಾಗಿದೆ. ಜೈಲಿನಲ್ಲಿರುವ ಖೈದಿಗಳಿಗೆ ದಿನಕ್ಕೆ ೧೨೦ರೂ ಆಹಾರ ಭತ್ಯೆಗೆ ಖರ್ಚು ಮಾಡುವ ಸರಕಾರ ಹಾಸ್ಟೆಲ್ ವಿದ್ಯಾರ್ತಿಗಳಿಗೆ ದಿನಕ್ಕೆ ೪೫ರೂ ಖರ್ಚು ಮಾಡುತ್ತಿದೆ. ಈ ಅಂಕಿ ಅಂಶ ದಿಂದ ಸರಕಾರ ಯಾರ ಪರ ಇದೆ ಎಂಬುದು ಗೊತ್ತಾಗುತ್ತದೆ. ಉನ್ನತ ಶಿಕ್ಷಣ ವೃತ್ತಿ ಶಿಕ್ಷಣ ಕ್ಷೇತ್ರಗಳು ಸಂಪೂರ್ಣ ವ್ಯಾಪಾರಿ ಕೇಂದ್ರಗಳಾಗಿವೆ. ಕಾಮೆಡ್ ಕೆ ತಾಳಕ್ಕೆ ತಕ್ಕಂತೆ ಕುಣಿಯತ್ತಿರುವ ಸರ್ಕಾರದ ಕ್ರಮದಿಂದಾಗಿ ಶುಲ್ಕ ಪ್ರತಿಬಾರಿಯು ಹೆಚ್ಚಳವಾಗುತ್ತಿದೆ. ಖಾಸಗಿ ವಿ.ವಿಗಳ ಆಗಮನ ದಿಂದಾಗಿ ಉನ್ನತ ಶಿಕ್ಷಣ ಬಡ ವಿದ್ಯಾರ್ಥಿಗಳಿಗೆ ಗಗನ ಕುಸುಮವಾಗಿದೆ. ಬಾಹ್ಯ ಅಂಕದ ಹೆಸರಿನಲ್ಲಿ ವಿದ್ಯಾರ್ಥಿ ವಿದ್ಯಾರ್ಥಿನಿಯರ ಮೇಲೆ ದೌರ್ಜನ್ಯ ನಡೆಯುತ್ತಿದೆ. ಭಾಗ್ಯಗಳನ್ನು ನೀಡುತ್ತಿವೆ ಎಂದು ಕಾಲಹರಣ ಮಾಡಿದ ರಾಜ್ಯ ಸರ್ಕಾರ ಶಿಕ್ಷಣ ಕ್ಷೇತ್ರದಲ್ಲಿ ಹಣವನ್ನು ಕಡಿತ ಮಾಡಿದೆ. ಕೇವಲ ೧೨% ರಷ್ಟು ಹಣ ಮೀಸಲಿಟ್ಟಿದ್ದಾರೆ. ಇತ್ತಿಚೆಗೆ ರಾಜ್ಯದಲ್ಲಿ ದೇಶದ್ರೋಹದ ಹೆಸರಿನಲ್ಲಿ ಮತೀಯವಾದಿಗಳ ಹಾವಳಿ ಹೆಚ್ಚಾಗುತ್ತಿದ್ದು ವಿದ್ಯಾರ್ಥಿಗಳನ್ನು ವರ್ಗಿಕರಿಸಿ ಕೋಮು ಭಾವನೆಗಳನ್ನು ಕೆರಳಿಸುವ ಕೆಲಸ ಮಾಡುತ್ತಿದೆ. ಆದರೆ ಸರಕಾರದ ಗೃಹ ಇಲಾಖೆಯಿಂದ ವೈಫಲ್ಯ ಹೆಚ್ಚಾಗುತ್ತಿದ್ದು ವಿದ್ಯಾರ್ತಿಗಳಿಗೆ ರಕ್ಷಣೆ ಇಲ್ಲದಂತಾಗಿದೆ. ರಾಜ್ಯ ಸರ್ಕಾರದ ನಿರ್ಲಕ್ಷದಿಂದಾಗಿ ಇಡೀ ಶಿಕ್ಷಣ ಕ್ಷೇತ್ರ ಸಮಸ್ಯೆಗಳ ಗೂಡಾಗಿದೆ.
ಒಳ್ಳೆಯ ದಿನಗಳು ಮಾಯವಾದವು : ಒಳ್ಳೆಯ ದಿನಗಳನ್ನು ನೀಡುತ್ತೇವೆ. ಎಂದು ಕೇಂದ್ರದಲ್ಲಿ ಚುಕ್ಕಾಣಿ ಹಿಡಿದ ನರೇಂದ್ರ ಮೋಧಿ ಸರ್ಕಾರವೂ ಕೂಡಾ ಶಿಕ್ಷಣದ ವ್ಯಾಪಾರಿಕರಣ – ಕೇಸರಿಕರಣದ ನೀತಿಗಳಿಂದ ವಿದ್ಯಾರ್ಥಿಗಳನ್ನು ಅತಂತ್ರ ಸ್ಥಿತಿಗೆ ತಳ್ಳಿದ್ದಾರೆ. ಮೇಕ್ ಇನ್ ಇಂಡಿಯಾ, ಸ್ಕಿಲ್ ಇನ್ ಇಂಡಿಯಾ, ಮನ್ ಕೀ ಭಾತ್ ಹೆಸರಲ್ಲಿ ವಿದ್ಯಾರ್ಥಿಗಳನ್ನು ದಿಕ್ಕು ತಪ್ಪಿಸುಲಾಗುತ್ತಿದೆ. ಶಿಕ್ಷಣಕ್ಕಾಗಿ ಕೇಂದ್ರ ಬಜೆಟ್‌ನಲ್ಲಿ ಕೇವಲ ಶೇ ೩ ರಷ್ಟು ಹಣವನ್ನು ಮಾತ್ರ ಮೀಸಲಿರಿಸಿದ್ದಾರೆ. ಬಿಸಿಯೂಟ ಯೋಜನೆಗಿದ್ದ ಹಣದಲ್ಲಿ ಶೇ ೪೦ ರಷ್ಟು ಮತ್ತು ಐಸಿಡಿಸಿ ಯೋಜನೆಗಿದ್ದ ಹಣದಲ್ಲಿ ಶೇ ೫೦% ರಷ್ಟು ಹಣವನ್ನು ಕಡಿತಗೂಳಿಸಲಾಗಿದೆ. ವಿದೇಶಗಳಿಗೆ ಸುತ್ತುತ್ತಿರುವದನ್ನು ನೋಡಿದರೆ ಅವರು ಪ್ರಧಾನಿಯಾಗಿರುವುದು ದೇಶಕ್ಕೂ ? ವಿದೇಶಕ್ಕೂ? ಎಂದು ಅನುಮಾನದ ಪ್ರಶ್ನೆ ಕಾಡುತ್ತಿದೆ. ವಿದೇಶವೆನೆಲ್ಲ ಸುತ್ತಾಡುತ್ತಿರುವ ಮೋದಿಯವರು ವಿದೇಶಿ ಭಾಷೆಗಳನ್ನು, ವಿದೇಶಿ ಯೋಜನೆಗಳನ್ನು ಉನ್ನತ ಶೀಕ್ಷಣದಲ್ಲಿ ಜಾರಿ ಮಾಡುವ ಚಿಂತನೆ ನಡೆಸಿದ್ದಾರೆ. ಆ ಮೂಲಕ ಶಿಕ್ಷಣದ ವ್ಯಾಪಾರಕ್ಕೆ ವಿದೇಶಿಗರಿಗೆ ರತ್ನಗಂಬಳಿ ಹಾಸುತ್ತಿದ್ದಾರೆ.
ಹೊಸ ಶಿಕ್ಷಣ ನೀತಿಯ ರಚನೆಯ ಮೂಲಕ ಈಗಿರುವ ಬೋಧಾನ ಕ್ರಮವನ್ನು ಬದಲಿಸಿ ಧಾರ್ಮಿಕ ವಿಚಾರಗಳನ್ನು ತುರಿಕಿ ವಿದ್ಯಾರ್ಥಿಗಳನ್ನು ವಿವೇಕ ಹೀನರನ್ನಾಗಿಸಲು ಮುಂದಾಗಿ . ಹೊಸ ಶಿಕ್ಷಣ ನೀತಿ ರೂಪಿಸಿ ವಿದ್ಯಾರ್ಥಿಗಳಿಗೆ ಹಣ, ಧರ್ಮ, ಶ್ರೇಷ್ಠ, ಕನಿಷ್ಟದ ಪರಿಕಲ್ಪನೆ ಕಲಿಸಲು ಹೊರಟಿದ್ದಾರೆ, ವಿದೇಶಿ ನೇರ ಬಂಡವಾಳ ಹೂಡಿಕೆ ಮೂಲಕ ಶಿಕ್ಷಣದ ವ್ಯಾಪಾರೀಕರಣ ಖಾಸಗೀಕರಣ, ಕೇಂದ್ರಿಕರಣ, ಕೋಮುವಾದೀಕರಣ ಮೂಲಕ ಶಿಕ್ಷಣವನ್ನು ಹಣವುಳ್ಳವರ ಸ್ವತ್ತನ್ನಾಗಿಸಲು ಮುಂದಾಗಿದೆ. ಅದಕ್ಕಾಗಿ ವಿದಾರ್ಥಿ ಸಂಘಟನೆಗಳನ್ನು ಶಿಕ್ಷಣ ತಜ್ಞರನ್ನು, ಪೋಷಕರ ಸಂಘಟನೆಗಳನ್ನು ಸಮಾಲೋಚನೆ ತಂಡದಿಂದ ದೂರ ಇಟ್ಟಿದ್ದಾರೆ.
ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಗಳನ್ನು ಕಡೆಗಣಿಸಿದ ಜಗತ್ತಿನ ಯಾವುದೇ ದೇಶ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ. ಭಾರತ ದೇಶದ ಶಿಕ್ಷಣ ಕ್ಷೇತ್ರಕ್ಕೆ ಒಟ್ಟು ರಾಷ್ಟ್ರೀಯ ಉತ್ಪನ್ನದ ಶೇ ೬ರಷ್ಟು ಹಣವನ್ನು ಮೀಸಲಿಡಬೇಕೆಂಬ ಬೇಡಿಕೆ ಹಲವು ದಶಕಗಳಿಂದ ಹಾಗೆಯೆ ಉಳಿದಿದೆ. ಈ ಬೇಡಿಕೆಯು ವಿದ್ಯಾರ್ಥಿ ಸಮುದಾಯದ ಪ್ರಬಲ ಧ್ವನಿಯಾಗಿದೆಯಲ್ಲದೇ, ೧೯೬೦ ರ ದಶಕದಲ್ಲಿ ಕೇಂದ್ರ ಸರ್ಕಾರವೇ ನೇಮಿಸಿದ್ದ ಕೊಥಾರಿ ಆಯೋಗದ ಶಿಫಾರಸ್ಸು ಹೌದು. ಜಗತ್ತಿನ ಇತರೇ ದೇಶಗಳಾದ ಕ್ಯೂಬಾ ತನ್ನ ಒಟ್ಟು ರಾಷ್ಟ್ರೀಯ ಉತ್ಪನ್ನ (ಜಿಡಿಪಿ)ಯ ಶೇ.೧೮.೭ರಷ್ಟು ಹಣವನ್ನು ಶಿಕ್ಷಣಕ್ಕೆ ವ್ಯಯಿಸುತ್ತಿದೆ. ಅದೇ ರೀತಿ ಕೀನ್ಯಾ – ಶೇ.೭, ಮಲೇಷ್ಯಾ ಶೇ. ೮.೧, ದಕ್ಷಿಣ ಆಪ್ರಿಕಾ ಶೇ. ೫.೩ ರಷ್ಟನ್ನು ವ್ಯಯಿಸುತ್ತಿವೆ. ಆದರೆ ಭಾರತ ಕೇವಲ ೩% ರಷ್ಟನ್ನು ಮಾತ್ರ ನೀಡುತ್ತಿದೆ.

ವಿದ್ಯಾರ್ಥಿಗಳ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಕಾಪಾಡುವಲ್ಲಿ ಕೇಂದ್ರ ಸರಕಾರ ವಿಫಲವಾಗಿದೆ. ಪ್ರಜಾಸತ್ತಾತ್ಮಕವಾಗಿ ಚುನಾಯಿತಗೊಂಡ ವಿದ್ಯಾರ್ಥಿ ಸಂಘಗಳನ್ನು ಸರ್ವಾಧಿಕಾರಿ ಧೋರಣೆಯ ಮೂಲಕ ವಿಸರ್ಜನೆಗೊಳಿಸಿರುವ ಹಲವು ಉದಾಹರಣೆಗಳಿವೆ. ಅಲ್ಲದೇ ಇತ್ತೀಚೆಗೆ ಜೆಎನ್‌ಯು ವಿವಿಯ ಘಟನೆ, ಹೈದ್ರಾಬಾದ್ ಕೇಂದ್ರೀಯ ವಿವಿಯ ಸಂಶೋಧನಾ ವಿದ್ಯಾರ್ಥಿ ರೋಹಿತ್ ಶೈಕ್ಷಣಿಕ ಹತ್ಯೆಗಳು ಇವುಗಳನ್ನು ಸಾಬೀತುಪಡಿಸುತ್ತಿವೆ. ಕರ್ನಾಟಕದಲ್ಲಿ ವಿಶ್ವವಿದ್ಯಾಲಯ ಕಾಯ್ದೆ ೨೦೦೦ಕ್ಕೆ ತಿದ್ದುಪಡಿ ತಂದು ರಾಜ್ಯದಲ್ಲಿ ವಿದ್ಯಾರ್ಥಿ ಸಂಘಗಳ ಚುನಾವಣೆಗಳನ್ನು ರದ್ದುಗೊಳಿಸಲಾಗಿದೆ. ಈ ಮೂಲಕ ಪ್ರೊ|| ಲಿಂಗ್ಡೋ ಸಮಿತಿಯು ವಿದ್ಯಾರ್ಥಿ ಸಂಘಗಳಿಗೆ ಚುನಾವಣೆ ನಡೆಸಬೇಕೆಂದು ನೀಡಿದ್ದ ಶಿಫಾರಸ್ಸನ್ನು ಹಾಗೂ ಸುಪ್ರೀಂಕೋರ್ಟ್ ನಿರ್ದೇಶನವನ್ನು ದಿಕ್ಕರಿಸಲಾಗಿದೆ. ವಿದ್ಯಾರ್ಥಿ ಸಂಘದ ಚಿನಾವಣೆಗಳು ನಡೆಯಬೇಕೆಂದು ಕರ್ನಾಕದಲ್ಲಿಯೂ ಜಾರಿಯಾಗಬೇಕು ಎಂದು ಒತ್ತಾಯಸಿದರು.

ಅಖಿಲ ಭಾರತ ಮಟ್ಟದಲ್ಲಿ ಕಾರ್ಮಿಕ ಸಂಘಟನೆಗಳ ಜಂಟಿಸಮಿತಿಯು ಬೆಲೆ, ಏರಿಕೆ, ಭ್ರಷ್ಠಾಜಾರ, ಖಾಸಗೀಕರಣ ಸರ್ವಧಿಕಾರಿ ದೋರಣೆ ಖಂಡಿಸಿ ಅಖಿಲ ಭಾರತ ಮುಷ್ಕರವನ್ನು ಬೆಂಬಲಿಸಿ ಶೈಕ್ಷಣಿಕ ಬಂದ್ ನಡೆಸಲಾಯಿತು.
ಬೇಡಿಕೆಗಳು
ಶಿಕ್ಷಣಕ್ಕಾಗಿ ರಾಜ್ಯ ಬಜೆಟ್‌ನಲ್ಲಿ ಶೆ ೩೦% ರಷ್ಟು ಕೇಂದ್ರ ಬಜೆಟ್‌ನಲ್ಲಿ ಶೆ ೧೦%ರಷ್ಟು ಜಿ.ಡಿ.ಪಿ ಯಲ್ಲಿ ಶೇ ೬ರಷ್ಟು ಹಣವನ್ನು ಮೀಸಲಿಡಬೇಕು.
ಶಿಕ್ಷಣದ ಖಾಸಗೀಕರಣ – ಕೇಸರೀಕರಣ ಹಾಗೂ ಕೇಂದ್ರೀಕರಣ ನಿಲ್ಲಿಸಬೇಕು, ಸರ್ಕಾರಿ ಶಾಲಾ ಕಾಲೇಜ್ ವಿ.ವಿ ಹಾಸ್ಟಲ್‌ಗಳು ಬಲಗೂಳ್ಳಬೇಕು.
೨೦೧೬ ರ ಹೊ ರಾಷ್ರೀಯ ಶಿಕ್ಷಣ ಕರಡು ನೀತಿಯ ವಾಪಾಸ್ಸಾತಿಗಾಗಿ.
ಉನ್ನತ ಮತ್ತು ವೃತಿ ಶಿಕ್ಷಣ ಶುಲ್ಕಗಳು ಇಳಿಯಬೇಕು, ಎಲ್ಲ ವಿದ್ಯಾರ್ಥಿ ಸಮುದಾಯಕ್ಕೂ ಈ ಶಿಕ್ಷಣ ಸಿಗುವಂತಾಗಬೇಕು, ಅದಕ್ಕಾಗಿ ಕೇಂದ್ರೀಯ ಶಾಸನ ಜಾರಿಯಾಗಬೇಕು.
ಹಾಸ್ಟಲ್ ವಿದ್ಯಾರ್ಥಿಗಳಿಗೆ ೩೫೦೦ ಆಹಾರ ಭತ್ಯೆ ನೀಡಬೇಕು, ಹಾಸ್ಟೇಲ್‌ಗಳನ್ನು ಬಲಪಡಿಸಬೇಕು.
ವಿದ್ಯಾರ್ಥಿನಿಯರ ಮೇಲಿನ ದೌರ್ಜನ್ಯ ನಿಲ್ಲಬೇಕು, ಅದಕ್ಕಾಗಿ ಲೈಂಗಿಕ ಕಿರುಕುಳ ವಿರೋಧಿ ಸಮಿತಿ ರಚನೆಯಾಗಬೇಕು.
ಖಾಸಗೀ,ವಿದೇಶಿ ವಿಶ್ವವಿದ್ಯಾಲಯಗಳನ್ನು ತಿರಸ್ಕರಿಸಿ, ಸರ್ಕಾರಿ ವಿವಿಗಳಿಗೆ ಮೂಲ ಸೌಲಭ್ಯ ನೀತಿ ವಿವಿಗಳಲ್ಲಿ ಭ್ರಷ್ಟಚಾರ ನಿಲ್ಲಿಸಿ.
ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್, ವಿದ್ಯಾರ್ಥಿ ವೇತನ ನೀಡಬೇಕು.
ಖಾಲಿ ಇರುವ ಬೋಧಕ-ಬೋಧಕೇತರ ಹುದ್ದೆಗಳ ಭರ್ತಿ ಮಾಡಬೇಕು.
ಈ ಎಲ್ಲಾ ಬೇಡಿಕೆಗಳನ್ನು ಈಡೇರಿಸಲು ಕಾರ್ಮಿಕ ಸಂಘಟನೆಗಳ ಜೊತೆ ಸೇರಿ ಬಂದ ಕಾರ್ಯಕ್ರಮವನ್ನು ಯಶಸ್ವಿಮಾಡಲಾಯಿತು.
ಈ ಸಂದರ್ಭದಲ್ಲಿ ಎಸ್.ಎಫ್.ಐ ಜಿಲ್ಲಾ ಅಧ್ಯಕ್ಷರ ಅಮರೇಶ ಕಡಗದ, ಜಿಲ್ಲಾ ಕಾರ್ಯದರ್ಶಿ ಬಾಳಪ್ಪ ಹುಲಿಹೈದರ್, ಶಿವುಕುಮಾರ, ದಾದಸಾಹೇಬ್, ರವಿ, ನಂದೇಶ, ವೀರೇಶ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

Please follow and like us:
error