ಕೆ.ಎಸ್.ಆರ್.ಟಿ.ಸಿ. ನೌಕರರ ಅನಿರ್ಧಿಷ್ಠಾವಧಿ ಚಳುವಳಿಗೆ ಸಿಪಿಐಎಂಎಲ್ ಬೆಂಬಲ

koppal-j-bharadwaj

ದಿನಾಂಕ ೨೪ ಮದ್ಯರಾತ್ರಿಯಿಂದ ಪ್ರಾರಂಭವಾದ ಅರ್.ಟಿ.ಸಿ. ಕಾರ್ಮಿಕರು ತಮ್ಮ ಬೇಡಿಕೆಗಳಿಗೆ ಒತ್ತಾಯಿಸಿ ಮಾಡುತ್ತಿರುವ ಅನಿರ್ಧಿಷ್ಠ ಕಾಲ ಸತ್ಯಾಗ್ರಹಕ್ಕೆ ಸಿಪಿಐಎಂಎಲ್ ಲಿಬರೇಷನ್ ಅಂಗ ಸಂಘಟನೆಗಳಾದ ಎ.ಐ.ಸಿ.ಸಿ.ಟಿ.ಯು., ಕೆ.ಜಿ.ಎಲ್.ಯು.,ಎ.ಐ.ಎ.ಆರ್.ಎಲ್.ಎ., ಪ್ರಗತಿಪರ ಬೀದಿ ವ್ಯಾಪಾರಿಗಳ ಸಂಘ, ಪ್ರಗತಿಪರ ಕಟ್ಟಡ ಕಾರ್ಮಿಕ ಸಂಘ, ಪ್ರಗತಿಪರ ಪೌರ ಕಾರ್ಮಿಕ ಸಂಘ, ಪ್ರಗತಿಪರ ಮಹಿಳಾ ಸಂಘ, ಅಖಿಲ ಭಾರತ ವಿದ್ಯಾರ್ಥಿ ಸಂಘ ಮತ್ತು ಕ್ರಾಂತಿಕಾರಿ ಯುವಜನ ಸಂಘಗಳು ಸಾರಿಗೆ ಕಾರ್ಮಿಕರ ಜೊತೆಗೆ ಚಳುವಳಿಯಲ್ಲಿ ಪಾಲ್ಗೊಳ್ಳಲಿದ್ದಾರೆಂದು ಸಿ.ಪಿ.ಐ.ಎಂ.ಎಲ್. ರಾಜ್ಯ ಕಾರ್ಯದರ್ಶಿ ಭಾರಧ್ವಾಜ್  ತಿಳಿಸಿದ್ದಾರೆ.

ರಸ್ತೆ ಸಾರಿಗೆ ನಿಗಮ ಕಾರ್ಮಿಕರನ್ನು ಶೋಷಣೆ ಮಾಡುತ್ತಿದ್ದು, ಅತ್ಯಂತ ಕನಿಷ್ಠ ವೇತನ ಇರುತ್ತದೆ. ನಿಗಮ ಬಲಗೈಲಿ ಸಂಬಳ ನೀಡುತ್ತಾ, ಎಡಗೈಯಿಂದ ಕಿತ್ತುಕೊಳ್ಳುತ್ತಿದೆ. ಉದಾಹರಣೆಗೆ ಪ್ರಯಾಣಿಕ ಟಿಕೆಟ್ ಕಳೆದುಕೊಂಡರೆ ಬಸ್‌ನಲ್ಲಿರುವ ಪ್ರಯಾಣಿಕರೆಲ್ಲರಿಗೂ ಕಂಡಕ್ಟರ್ ಟಿಕೆಟ್ ನಿಡಿದರೂ ಸಹ ಮೂರು ಸಾವಿರದಿಂದ ಐದು ಸಾವಿರ ದಂಡ ವಸೂಲಿ ಮಾಡುತ್ತಿದ್ದಾರೆ. ಹತ್ತು ದಿನ ರಜೆ ಹೋದರೆ ಇಪ್ಪತ್ತು ದಿನದ ಕೂಲಿ ಕಡಿಮೆ ಕೊಡುತ್ತಿದ್ದಾರೆ. ಮಹಿಳಾ ನಿರ್ವಾಹಕರು ಹೆರಿಗೆ ರಜೆ ತೆಗೆದುಕೊಂಡರು ಅವರಿಗೆ ದಂಡ ಹಾಕುತ್ತಿದ್ದಾರೆ. ಇಂತಹ ಫ್ಯಾಸಿಸ್ಟ್ ಸಾರಿಗೆ ನಿಗಮದ ವಿರುದ್ಧ ಹೋರಾಡುತ್ತಿರುವ ಕಾರ್ಮಿಕರ ಜೊತೆಯಾಗಿ ಸಿಪಿಐಎಂಎಲ್ ಅಂಗ ಸಂಘಟನೆಗಳು ಇರುತ್ತವೆ ಎಂದು ಮತ್ತು ಕೂಡಲೇ ಸರಕಾರ ಕಾರ್ಮಿಕರ ಬೇಡಿಕೆಗಳು ಈಡೇರಿಸದಿದ್ದಲ್ಲಿ ಮುಂದೆ ನಡೆಯುವ ಹೋರಾಟದಲ್ಲಿ ಸಿಪಿಐಎಂಎಲ್ ಪಕ್ಷ ಮುಂಚೂಣಿಯಲ್ಲಿರುತ್ತದೆ ಎಂದು ಭಾರಧ್ವಾಜ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Please follow and like us:
error