ಕೆಎಎಸ್ ಅಧಿಕಾರಿ ನಾಯಕ್ ರಿಂದ ಜನಾರ್ದನ ರೆಡ್ಡಿಗೆ 25 ಕೋಟಿ ರೂ. ವೈಟ್‌ಮನಿ

ಆತ್ಮಹತ್ಯೆ ಮಾಡಿಕೊಂಡ ರಮೇಶ್ ಡೆತ್ ನೋಟ್ ನಲ್ಲಿ ಆರೋಪ

janardan_reddy_marraigeಮಂಡ್ಯ, ಡಿ.7: ಎಲ್.ಭೀಮಾ ನಾಯಕ್ ಮಾಜಿ ಸಚಿವ ಜನಾರ್ಧನ ರೆಡ್ಡಿ ಮಗಳ ಮದುವೆಗೆ 25 ಕೋಟಿ ರೂ. ವೈಟ್ ಮನಿ ಕೊಡಿಸಿದ್ದಾರೆ ಎಂದು ದ್ದೇನೆ ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಬೆಂಗಳೂರು ನಗರ ವಿಶೇಷ ಭೂಸ್ವಾಧೀನಾಧಿಕಾರಿ ಎಲ್.ಭೀಮಾ ನಾಯಕ್ ಅವರ ಕಾರು ಚಾಲಕ ಕೆ.ಸಿ.ರಮೇಶ್, ತನ್ನ ಡೆತ್‌ನೋಟ್‌ನಲ್ಲಿ ಬರೆದಿದ್ದಾನೆ.

ಕಳೆದ ನವೆಂಬರ್ 15 ರಂದು ತಾಜ್ ಹೊಟೇಲ್‌ಗೆ ಭೇಟಿ ಕೊಟ್ಟು ರೆಡ್ಡಿ ಮಗಳ ಮದುವೆಗೆ 25 ಕೋಟಿ ರೂ. ವೈಟ್‌ಮನಿ ಕೊಡಿಸಿದ್ದೇನೆ ಎಂದು ಭೀಮಾ ನಾಯಕ್ ನನ್ನ ಬಳಿ ಹೇಳಿರುತ್ತಾರೆ ಹಾಗೂ ಶ್ರೀರಾಮುಲು ಅವರ ಹುಡ್‌ಲ್ಯಾಂಡ್ ಹೊಟೇಲ್‌ನಲ್ಲಿರುವ ಮನೆಗೆ ಆಗಾಗ ಭೇಟಿ ನೀಡಿರುತ್ತಾರೆ ಎಂದು ರಮೇಶ್ ಡೆತ್‌ನೋಟ್‌ನಲ್ಲಿ ಬರೆದಿದ್ದಾನೆ.

ಇದಲ್ಲದೆ,  ಭೀಮಾ ನಾಯಕ್ ಅವರು ತಾನು ನೂರಾರು ಕೋಟಿ ರೂ.ಗಳ ಅಕ್ರಮ ಆಸ್ತಿ ಮಾಡಿರುವ ಬಗ್ಗೆ ತಾನು ಆತ್ಮಹತ್ಯೆಗೆ ಮುನ್ನ ಬರೆದಿಟ್ಟಿರುವ 14 ಪುಟಗಳ ಡೆತ್‌ನೋಟ್‌ನಲ್ಲಿ ಪ್ರಸ್ತಾಪಿಸಿದ್ದು, ತನಗೆ ಜೀವ ಬೆದರಿಕೆ ಇರುವುದರಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾನೆ.

ಕಳೆದ ಅಕ್ಟೋಬರ್ 28 ರಂದು ಜನಾರ್ದನ ರೆಡ್ಡಿ ಮತ್ತು ಶ್ರೀರಾಮುಲುರವರನ್ನು ಪಾರಿಜಾತ ಗೆಸ್ಟ್‌ಹೌಸ್‌ನಲ್ಲಿ ಕೊಟ್ರೋಸ್ ನಾಯ್ಕ (ಹಡಗಲಿ)ರವರ ಜೊತೆ ಭೇಟಿ ಮಾಡಿರುತ್ತಾರೆ ಹಾಗೂ 2018ಕ್ಕೆ ಹಗರಿಬೊಮ್ಮನಹಳ್ಳಿ ವಿಧಾನಸಭಾ ಎಲೆಕ್ಷನ್‌ಗೆ ನಿಲ್ಲಲು ಮಾತುಕತೆ ಮಾಡಿರುತ್ತಾರೆ. 25 ಕೋಟಿ ರೂ. ಕೊಡಲು ಒಪ್ಪಿರುತ್ತಾರೆ ಎಂದೂ ರಮೇಶ್ ಡೆತ್‌ನೋಟ್‌ನಲ್ಲಿ ದೂರಿದ್ದಾರೆ.

Please follow and like us:
error