ಕೃಷಿ ಹಾಗೂ ತೋಟಗಾರಿಕೆ ಕೋರ್ಸ್‌ಗಳ ಪ್ರವೇಶಕ್ಕೆ ಪ್ರಾಯೋಗಿಕ ಪರೀಕ್ಷೆ

ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ ಬಾಗಲಕೋಟ ಇವರಿಂದ ಪ್ರಸಕ್ತ ಸಾಲಿಗೆ ರೈತರ/ವ್ಯವಸಾಯಗಾರರ/ ಕಾರ್ಮಿಕರ ಕೋಟಾದಡಿಯಲ್ಲಿ ಬಿಎಸ್‌ಸಿ(ಕೃಷಿ), ಬಿಎಸ್‌ಸಿ(ತೋಟಗಾರಿಕೆ) ಮತ್ತು ಇನ್ನಿತರ ಕೃಷಿ ಸಂಬಂಧಿತ ಕೋರ್ಸ್‌ಗಳ ಪ್ರವೇಶಾತಿಗಾಗಿ ಪ್ರಾಯೋಗಿಕ ಪರೀಕ್ಷೆ(Pಡಿಚಿಛಿಣiಛಿಚಿಟ ಖಿesಣ) ಮೇ.೨೦ ರಂದು ಬೆಳಗ್ಗೆ ೧೦ ಗಂಟೆಗೆ ಕೊಪ್ಪಳ ತಾಲೂಕಿನ ಮುನಿರಾಬಾದ ತೋಟಗಾರಿಕೆ ಮಹಾವಿದ್ಯಾಲಯದಲ್ಲಿ ಏರ್ಪಡಿಸಲಾಗಿದೆ.
ಅಭ್ಯರ್ಥಿಗಳು ಸಿಇಟಿ ಹಾಲ್ ಟಿಕೇಟ್‌ನಲ್ಲಿ ನಮೂದಾಗಿರುವ ಪರೀಕ್ಷಾ ಕೇಂದ್ರದಲ್ಲಿಯೇ ಪ್ರಾಯೋಗಿಕ ಪರೀಕ್ಷೆಗೆ ಹಾಜರಾಗಬೇಕು. ಅಭ್ಯರ್ಥಿಗಳು/ಪೋಷಕರು ಮೇ.೧೨ ರಿಂದ ಮೇ.೧೮ ರವರೆಗೆ (ಬಾನುವಾರ ಸಹಿತ) ಸಮಯ ಬೆಳಗ್ಗೆ ೮ ಗಂಟೆಯಿಂದ ಮ.೧.೩೦ ರ ವರೆಗೆ ನಡೆಯುವ ದಾಖಲಾತಿ ಪರಿಶೀಲನೆಗೆ ದಾಖಲಾತಿ ಸಮಿತಿಯ ಮುಂದೆ ಹಾಜರಾಗಿ ದಾಖಲಾತಿಗಳ ದೃಢೀಕರಣ ಪಡೆಯಬೇಕು. ಮಹಾವಿದ್ಯಾಲಯದಲ್ಲಿ ನಡೆಯುವ ದಾಖಲಾತಿಗಳ ತಪಾಸಣೆ ಒಳಪಟ್ಟ ಅಭ್ಯರ್ಥಿಗಳು ಮಾತ್ರ ಪ್ರಾಯೋಗಿಕ ಪರೀಕ್ಷೆಗೆ ಅರ್ಹರು. ಪರೀಕ್ಷಾ ಶುಲ್ಕದ ಡಿ.ಡಿ. ಅನ್ನು ಯಾವುದೇ ರಾಷ್ಟ್ರೀಕೃತ ಬ್ಯಾಂಕ್‌ನಿಂದ ಮೇ.೧ ರಿಂದ ಮೇ.೧೮ ರೊಳಗಾಗಿ ಪಡೆದಿರಬೇಕು.
ಹೆಚ್ಚಿನ ಮಾಹಿತಿಗಾಗಿ ತೋಟಗಾರಿಕೆ ಮಹಾವಿದ್ಯಾಲಯ ಕಛೇರಿ ಮೊ.ಸಂ: ೯೭೪೧೬೪೧೮೮೧, ೮೭೪೮೯೨೧೭೨೭, ೮೯೭೦೭೩೬೮೨೮ ಇಲ್ಲಿಗೆ ಕಛೇರಿ ವೇಳೆಯಲ್ಲಿ ಸಂಪರ್ಕಿಸಬಹುದು .

Leave a Reply