ಕೂಲಿಕಾರರ ಮಕ್ಕಳಿಗೆ ಕೆಲಸದ ಸ್ಥಳದಲ್ಲೇ ಆಟದೊಂದಿಗೆ ಪಾಠ

koppal_teaching_for_labours_child ಉದ್ಯೋಗಖಾತ್ರಿ ಯೋಜನೆಯಡಿ ಉದ್ಯೋಗ ಕೈಗೊಳ್ಳುವ ಕೂಲಿಕಾರರ ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ಮಾಡಲು, ಉದ್ಯೋಗದ ಸ್ಥಳದಲ್ಲಿಯೇ ಮಕ್ಕಳಿಗೆ ಆಟದೊಂದಿಗೆ ಶಿಕ್ಷಣ ಒದಗಿಸುವ ಸೌಲಭ್ಯವನ್ನು ಕೊಪ್ಪಳ ಜಿಲ್ಲೆಯಲ್ಲಿ ಜಾರಿಗೆ ತರಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜಾ ತಿಳಿಸಿದ್ದಾರೆ.
ಕೊಪ್ಪಳ ಜಿಲ್ಲಾ ಪಂಚಾಯತ ವ್ಯಾಪ್ತಿಯ ಯಲಬುರ್ಗಾ ತಾಲೂಕಿನ ಕುದರಿಮೋತಿ ಮತ್ತು ಕುಷ್ಟಗಿ ತಾಲೂಕಿನ ಕಂದಕೂರ ಗ್ರಾಮ ಪಂಚಾಯತಿಗಳಲ್ಲಿ ಮಾಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗಖಾತ್ರಿ ಯೋಜನೆಯಡಿ ಕೆಲಸ ನಿರ್ವಹಿಸುತ್ತಿರುವ ಕೂಲಿಕಾರರ ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ಕಾಮಗಾರಿ ನಡೆಯುವ ಸ್ಥಳದಲ್ಲಿಯೇ, ಗ್ರಾಮ ಪಂಚಾಯತ ವತಿಯಿಂದ ಅಕ್ಷರಜ್ಞಾನ ಇರುವ ಪುರುಷ ಮತ್ತು ಮಹಿಳೆಯೊಂದಿಗೆ ಚಿಕ್ಕ ಮಕ್ಕಳಿಗೆ ಅಕ್ಷರ ಮಾಲೆ ಮತ್ತು ಅವರಿಗೆ ಆಟವಾಡಲು ಆಟದ ಸಾಮಗ್ರಿಗಳ ಮೂಲಕ ಅವರ ಗುಣಾತ್ಮಕ ಚಟುವಟಿಕೆಗಳನ್ನು ವ್ಯಕ್ತಪಡಿಸಲು ಅವಕಾಶ ಮಾಡಿಕೊಡಲಾಗಿದೆ. ಇದರಿಂದ ಎಲ್ಲಾ ಕೂಲಿಕಾರರು ಮಕ್ಕಳ ನಿರ್ವಹಣೆಯ ಹೊಣೆಯಿಂದ ಮುಕ್ತರಾಗಿ ಕೆಲಸ ಮಾಡಲು ಅನುಕೂಲವಾಗುತ್ತಿದೆ. ಕೂಲಿಕಾರರು ಕೂಡ ನಿರ್ಭಿತಿಯಿಂದ ಕೆಲಸ ನಡೆಯುವ ಸ್ಥಳ್ಕಕೆ ತಮ್ಮ ಮಕ್ಕಳನ್ನು ಕರೆದುಕೊಂಡು ಬರಲು ಆಸ್ತಕಿ ತೋರಿಸುತ್ತಿದ್ದಾರೆ. ಒಟ್ಟಾರೆ ಕೂಲಿಕಾರರ ಮಕ್ಕಳು, ಕೆಲಸ ಸ್ಥಳದಲ್ಲಿಯೇ ಆಟದ ಜೊತೆಗೆ ಶಿಕ್ಷಣವನ್ನೂ ಪಡೆಯುವ ಸ್ಥಿತಿ ಜಿಲ್ಲೆಯಲ್ಲಿ ನಿರ್ಮಾಣವಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Please follow and like us:
error

Related posts

Leave a Comment