ಕುಡಿಯಲೂ ಸಿಗುತ್ತಿಲ್ಲ ಬೊಗಸೆ ನೀರು- ಜನ ಟ್ಯಾಂಕರ್ಗಳ ಮೊರೆ.

ಕೊಪ್ಪಳ-27- ನೀರಿಲ್ಲದೆ ತ್ತರಿಸಿದ ಬಹದ್ದೂರಬಂಡಿ ಗ್ರಾಮ ನೆತ್ತಿ ಸುಡುತ್ತಿರುವ ಸೂರ್ಯ ಸರಾಸರಿ 42 ಡಿಗ್ರಿ ಸೆಲ್ಸಿಯಸ್ಗೆ ಏರಿಕೆಯಾಗಿದ್ದು, ಬಿಸಿಲಿನ ಪ್ರಖರತೆಗೆ ಜನತೆ ಒದ್ದಾಡುವಂತಾಗಿದೆ. ಕುಡಿವ ನೀರಿಗಾಗಿ ಟ್ಯಾಂಕರ್ ಮುಂದೆ ಸಾಲುಗಟ್ಟಿ ನಿಲ್ಲುವ ಜನತೆ, ಜೀವಜಲ ಸಿಗದೆ ಪರಿತಪಿಸುತ್ತಿರುವ ಜಲಚರ ಹಾಗೂ ಜಾನುವಾರುಗಳು, ಅಂತರ್ಜಲ ಕೊರತೆಯಿಂದ ಬ13094342_1126629544056421_1156578684904484311_nತ್ತಿ ನಿಂತಿರುವ ಕೊಳವೆಬಾವಿಗಳು, ತೇವಾಂಶವೂ ಇಲ್ಲದೆ ಒಣಗಿರುವ ಕೆರೆ-ಕಟ್ಟೆಗಳು, ನೀರು ಒದಗಿಸುವಂತೆ ಆಗ್ರಹಿಸಿ ಎಲ್ಲೆಲ್ಲೂ ಪ್ರತಿಭಟನೆ, ಧರಣಿ. ಇವು ರಾಜ್ಯದ ಹಲವೆಡೆ ಬೇಸಿಗೆ ಆರಂಭದಲ್ಲೇ ಕಾಣ ಸಿಗುತ್ತಿರುವ ದೃಶ್ಯಗಳು. ಹೌದು, ಕುಡಿವ ನೀರಿನ ಕೊರತೆ ನೀಗಿಸಲು ಸರ್ಕಾರ ಕೈಗೊಂಡಿರುವ ಕ್ರಮಗಳ ಮಧ್ಯೆಯೂ ಸಾಕಷ್ಟು ಸಮಸ್ಯೆ ಜೀವಂತವಾಗಿ ಉಳಿದಿವೆ. ಒಂದೆಡೆ ಬಿಸಿಲಿನ ತಾಪಮಾನ ಏರುತ್ತಿದ್ದರೆ ಹನಿ ನೀರಿಗೂ ಜನರು ಅಲೆದಾಡುವ ಸ್ಥಿತಿ ಹೆಚ್ಚಾಗುತ್ತಿದೆ. ಹೈದರಾಬಾದ್ ಕರ್ನಾಟಕ ವ್ಯಾಪ್ತಿಯ ಜಿಲ್ಲೆಗಳಲ್ಲಿ ಬಿಸಿಲಿನ ಪ್ರಖರತೆ ದಿನೇದಿನೆ ಜಾಸ್ತಿಯಾಗುತ್ತಿದ್ದು, ಮುಂದಿನ ದಿನಗಳಲ್ಲಿ ಪರಿಸ್ಥಿತಿ ಇನ್ನೂ ಹದಗೆಡುವ ಸಾಧ್ಯತೆಗಳಿವೆ. ದುರ್ದೈವವೆಂದರೆ, ಕೊಪ್ಪಳ ಜಿಲ್ಲೆಗಳರುವ ಹಳ್ಳ-ಕೊಳ್ಳ, ನದಿ, ತೆರೆದ ಬಾವಿಗಳು ಒಣಗಿವೆ. ಈ ಭಾಗಕ್ಕೆ ಕುಡಿವ ನೀರು ಒದಗಿಸುವ ನದಿ ತುಂಗಭದ್ರಾಗಳಲ್ಲಿ ಹುಡುಕಿದರೂ ನೀರು ಸಿಗದಂಥ ಸ್ಥಿತಿ ಇದೆ. ಹಳ್ಳ-ಕೊಳ್ಳ, ಕೆರೆಗಳು ಒಣಗುತ್ತಿರುವುದರಿಂದ ಜಲಚರಗಳು ಅಸುನೀಗುತ್ತಿವೆ. ಜಿಲ್ಲೆಯ ಹಲವು ಹಳ್ಳಿಗಳಲ್ಲಿ ಕಿ.ಮೀ.ಗಟ್ಟಲೇ ದೂರದಿಂದ ನೀರು ತರಬೇಕಿದೆ.

Please follow and like us:
error