ಕಿಮ್ಸ್‌ಗೆ ಆಯ್ಕೆಯಾದ ಶುಶ್ರೂಷಕ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಲು ಸೂಚನೆ

: ಕೊಪ್ಪಳ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಆಯ್ಕೆಯಾದ ೧೧೭ ಶುಶ್ರೂಶಕ ಸಿಬ್ಬಂದಿಗಳು ಜ.೦೫ ರೊಳಗಾಗಿ ಕೊಪ್ಪಳ ಕಿಮ್ಸ್ ಸಂಸ್ಥೆಗೆ ಸೂಕ್ತ ದಾಖಲೆಗಳ ಸಹಿತ ಕರ್ತವ್ಯಕ್ಕೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ.
ಕಳೆದ ನ.೨೫ ರಂದು ಆಯ್ಕೆಯಾದ ೧೧೭ ಶುಶ್ರೂಶಕ ಅಭ್ಯರ್ಥಿಗಳ ಮೀಸಲಾತಿ ಪ್ರಮಾಣಪತ್ರ ಹಾಗೂ ನಡತೆ ಪ್ರಮಾಣ ಪತ್ರಗಳನ್ನು ಪರಿಶೀಲಿಸಿ, ಧೃಢೀಕರಿಸಿ ಕಿಮ್ಸ್ ಸಂಸ್ಥೆಗೆ ಕಳುಹಿಸಿಕೊಡಲು ಸಂಬಂಧಿಸಿದ ಪ್ರಾಧಿಕಾರಿಕ್ಕೆ ಕೋರಲಾಗಿತ್ತು. ಈಗಾಗಲೇ ಈ ಪ್ರಕ್ರಿಯೆ ಮುಗಿಯುವ ಹಂತದಲ್ಲಿದೆ ಆದ್ದರಿಂದ ಕೊಪ್ಪಳ ಕಿಮ್ಸ್ ಸಂಸ್ಥೆಗೆ ಆಯ್ಕೆಯಾದ ಅಭ್ಯರ್ಥಿಗಳು ಪ್ರಮಾಣ ಪತ್ರಗಳೊಂದಿಗೆಯಾಗಲಿ ಅಥವಾ ಸಂಬಂಧಿಸಿದ ಪ್ರಾಧಿಕಾರದಿಂದ ಪ್ರಮಾಣ ಪತ್ರಗಳನ್ನು ಪಡೆಯುವ ನಿರೀಕ್ಷೆಯಲ್ಲಿರುವ ಎಲ್ಲಾ ೧೧೭ ಶುಶ್ರೂಷ ಸಿಬ್ಬಂದಿಗಳು ಅಗತ್ಯ ದಾಖಲೆಗಳೊಂದಿಗೆ ಜನವರಿ.೦೫ ರೊಳಗಾಗಿ ಹಾಜರಾಗಬೇಕು.
ಈಗಾಗಲೇ ಸಿಂಧುತ್ವ ಪ್ರಮಾಣ ಪತ್ರ ಹೊಂದಿರುವ/ ಸಲ್ಲಿಸಿರುವ ಅಭ್ಯರ್ಥಿಗಳು ಜ.೦೫ ರೊಳಗಾಗಿ ನೇಮಕಾತಿ ಆದೇಶ ಪಡೆದು, ೭ ದಿನದೊಳಗೆ ಸೇವೆಗೆ ಹಾಜರಾಗಬೇಕು. ಹಾಗೂ ಸಿಂಧುತ್ವ, ಮೀಸಲಾತಿ (ಪ.ಜಾತಿ, ಪ.ಪಂ, ಪ್ರವರ್ಗ-೧, ೨ಎ, ೨ಬಿ, ೩ಎ, ೩ಬಿ, ಸಮಾನ್ಯ ಹಾಗೂ ಹೈ-ಕ ಪ್ರಮಾಣ ಪತ್ರ ಹಾಗೂ ನಡತೆ ಪ್ರಮಾಣ ಪತ್ರ ಇತರೆ) ದೃಢೀಕರಣ ಪ್ರಮಾಣ ಪತ್ರಗಳನ್ನು ಹೊಂದದೆ ಇರುವ ಅಭ್ಯರ್ಥಿಗಳು ಜ.೨೦ ರೊಳಗಾಗಿ ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕು. ಕರ್ತವ್ಯಕ್ಕೆ ಹಾಜರಾಗದ ಹಾಗೂ ಪ್ರಮಾಣ ಪತ್ರ ಸಲ್ಲಿಸದೇ ಇರುವ ಅಭ್ಯರ್ಥಿಗಳ ಹೆಸರನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕಾರಿಗಳಿಗೆ ಮುಂದಿನ ಸೂಕ್ತ ಕ್ರಮಕ್ಕಾಗಿ ಸಲ್ಲಿಸಲಾಗುವುದು ಎಂದು ಕೊಪ್ಪಳ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ನಿರ್ದೇಶಕರು ತಿಳಿಸಿದ್ದಾರೆ.

Please follow and like us:
error