You are here
Home > Koppal News-1 > ಕಿನ್ನಾಳ ವಿದ್ಯಾರ್ಥಿ ಮನೆಗೆ ಶಾಸಕ ಇಕ್ಬಾಲ್ ಅನ್ಸಾರಿ ಭೇಟಿ

ಕಿನ್ನಾಳ ವಿದ್ಯಾರ್ಥಿ ಮನೆಗೆ ಶಾಸಕ ಇಕ್ಬಾಲ್ ಅನ್ಸಾರಿ ಭೇಟಿ

ಕುಟುಂಬಕ್ಕೆ ಸಾಂತ್ವನ,ಪರಿಹಾರ ವಿತರಣೆ
ಕೊಪ್ಪಳ : ಕಿನ್ನಾಳ ಗ್ರಾಮದಲ್ಲಿ ಕಳೆದ ಬುಧವಾರ ನಡೆದ ವಿದ್ಯುತ್ ಅಪಘಾತದಲ್ಲಿ ಮೃತಪಟ್ಟ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿ ಹನುಮೇಶ ಬನ್ನಿಕಟ್ಟಿ ರವರ ನಿವಾಸಕ್ಕೆ ಶಾಸಕರಾದ ಇಕ್ಬಾಲ್ ಅನ್ಸಾರಿ ಯವರು ನಿನ್ನೆ ಸಾಯಂಕಾಲ ಭೇಟಿ ನೀಡಿ ಸಾಂತ್ವಾನ ಹೇಳಿದರು. ಕಾಲೇಜಿನ ಉಪನ್ಯಾಸಕರು ಹಾಗೂ ಪ್ರಾಂಶುಪಾಲರ ಸಮ್ಮುಖದಲ್ಲಿ ೪೦,೦೦೦ ರೂ. ಚೆಕ್ಕನ್ನು ವಿತರಿಸಿ ಕುಟುಂಬಕ್ಕೆ ಸಾಂತ್ವಾನ ಹೇಳಿದರು. ಹಾಗೂ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ೨ ಎಕರೆ ಜಮೀನನ್ನು ಅವರ ಕುಟುಂಬಕ್ಕೆ ಮಂಜೂರು ಮಾಡಿಸುವದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಗ್ರಾಂ.ಪಂ.ಅಧ್ಯಕ್ಷರಾದ ಶ್ರೀಮತಿ ಗಂಗಮ್ಮ ಬನ್ನಿಕೊಪ್ಪ ಗ್ರಾ.ಪಂ. ಸದಸ್ಯರುಗಳಾದ ಬಸವರಾಜ ಚಿಲವಾಡಗಿ, ವಿರೇಶ ತಾವರಗೇರೆ, ಪರಸಪ್ಪ ಗಡಗಿ, ಹಾಗೂ ಮಾಬುಸಾಬ ಹಿರಾಳ, ಬಾಷಾ ಹಿರೇಮನಿ, ಈರಣ್ಣ ಕಾಂಚಾಲಿ, ರಮೇಶ್ ಗೊರಪಡೆ, ರಾಜಾಬಕ್ಷಿ ಸೇರಿದಂತೆ ಹಲವರು ಉಪಸ್ಥಿತರಿದ್ದರು DSC_5877

Leave a Reply

Top