ಕಾ|| ಭಾರಧ್ವಾಜ್‌ರಿಂದ ಅಮರಣಾಂತ ಉಪವಾಸ ಸತ್ಯಾಗ್ರಹ

 

cpiml-koppal೧೪೧ ದಲಿತ ಪೌರ ಕಾರ್ಮಿಕರನ್ನು ಬೀದಿಪಾಲು ಮಾಡಿದ್ದಕ್ಕಾಗಿ ಅವರ ರಕ್ಷಣೆಗಾಗಿ ಗಂಗಾವತಿ ನಗರಸಭೆ ಮುಂದೆ ದಿನಾಂಕ ೧೧-೦೪-೨೦೧೬ ಸೋಮವಾರರಿಂದ ಕಾ|| ಭಾರಧ್ವಾಜ್‌ರವರು ಆಮರಣಾಂತ ಉಪವಾಸ ಸತ್ಯಾಗ್ರಹ ಹಮ್ಮಿಕೊಂಡಿದ್ದಾರೆ.

ನಗರಸಭೆಯಲ್ಲಿ ೫ ರಿಂದ ೧೫ ವರ್ಷಗಳಿಂದ ಕೆಲಸ ಮಾಡುತ್ತ ಬಂದಿರುವ ೧೪೧ ಜನ ದಲಿತ ಪೌರ ಕಾರ್ಮಿಕರನ್ನು ದಿ. ೧-೪-೨೦೧೬ ರಂದು ದಿಢೀರನೆ ತೆಗೆದುಹಾಕಿ ಬೀದಿಪಾಲು ಮಾಡಿದ್ದಾರೆ. ಕಳೆದ ೫ ತಿಂಗಳುಗಳಿಂದ ಸಂಬಳವನ್ನು ಕೊಡದೇ ಮತ್ತು ಬೇಕಾಬಿಟ್ಟಿಯಾಗಿ ಬೇಕಾದಂತೆ ಜೀತ ದುಡಿಸಿಕೊಂಡು ಕಾರ್ಮಿಕರಿಗೆ ತೊಂದರೆ ಕೊಡುತ್ತಿದ್ದಾರೆ. ಕಾರ್ಮಿಕರು ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಜಿಲ್ಲಾಧಿಕಾರಿಗಳ ಸಮಕ್ಷಮ ತಮ್ಮ ಕಷ್ಟಗಳನ್ನು ಹೇಳಿಕೊಂಡಾಗ ದಿನಾಂಕ ೬-೦೪-೨೦೧೬ ರಂದು ಸಂಧಾನಸಭೆ ನಡೆಸಿ ಕಾರ್ಮಿಕರನ್ನು ಕೆಲಸಕ್ಕೆ ತೆಗೆದುಕೊಳ್ಳಬೇಕೆಂದು ಆದೇಶಿಸಿರುತ್ತಾರೆ. ದಿನಾಂಕ ೭-೪-೨೦೧೬ ರಂದು ಕರ್ನಾಟಕ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷರಾದ ನಾರಾಯಣರವರು ೧೪೧ ಜನ ದಲಿತ ಪೌರ ಕಾರ್ಮಿಕರನ್ನು ಕೆಲಸಕ್ಕೆ ತೆಗೆದುಕೊಳ್ಳಬೇಕೆಂದು ಆದೇಶಿಸಿರುತ್ತಾರೆ. ಸಿ.ಆರ್. ರಂಗಸ್ವಾಮಿ ಗಂಗಾವತಿಯ ಕೆಲವು ಪಟ್ಟಬದ್ರ ರಾಜಕಾರಣಿಗಳ ಮಾತು ಕೇಳಿ ದಲಿತ ಕಾರ್ಮಿಕರಿಗೆ ತೊಂದರೆ ಕೊಡುತ್ತಿದ್ದಾನೆ. ಸರಕಾರಿ ಮತ್ತು ಜಿಲ್ಲಾಡಳಿತ ಆದೇಶದಂತೆ ಕಾರ್ಮಿಕರನ್ನು ಕೆಲಸಕ್ಕೆ ತೆಗೆದುಕೊಳ್ಳಬೇಕೆಂದು ಭಾರಧ್ವಾಜ್‌ರು ಒತ್ತಾಯಿಸಿದಾಗ ಪೌರಾಯುಕ್ತರು ಕಾರ್ಮಿಕರನ್ನು ಪುನಃ ಕೆಲಸಕ್ಕೆ ತೆಗೆದುಕೊಳ್ಳಲು ಒತ್ತಾಯಿಸಿದರೆ ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಮರಣ ಪತ್ರದಲ್ಲಿ ನನ್ನ ಸಾವಿಗೆ ಭಾರಧ್ವಾಜ್‌ರವರೆ ಕಾರಣವೆಂದು ಬರೆದಿಟ್ಟು ಸಾಯುವೆ ಎಂದು ಬೆದರಿಸುತ್ತಿದ್ದಾರೆ.

ಅನಿವಾರ್ಯವಾಗಿ ನಗರಸಭೆ ಆಡಳಿತದ ದೌರ್ಜನ್ಯದ ವಿರುದ್ಧ ದಲಿತ ಕಾರ್ಮಿಕರ ರಕ್ಷಣೆಗಾಗಿ ಹಿರಿಯ ಕಾರ್ಮಿಕ ಮುಖಂಡ ಭಾರಧ್ವಾಜ್‌ರು ದಿ. ೧೧-೦೪-೨೦೧೬ ರಿಂದ ಆಮರಣಾಂತ ಉಪವಾಸ ಸತ್ಯಾಗ್ರಹವನ್ನು ಹಮ್ಮಿಕೊಂಡಿದ್ದಾರೆ. ಪ್ರಜ್ಞಾವಂತ ನಾಗರೀಕರು ಗಂಗಾವತಿ ನಗರದ ಉಳಿವಿಗಾಗಿ ಮತ್ತು ನಗರಸಭೆಯ ದುರಾಡಳಿತ ವಿರುದ್ಧವಾಗಿ ನಡೆಯುವ ಹೋರಾಟದಲ್ಲಿ ನಾಗರೀಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಿ ಗಂಗಾವತಿ ನಗರವನ್ನು ದುಷ್ಟಕೂಟದಿಂದ ಬಿಡಿಸಿಕೊಳ್ಳಬೇಕೆಂದು ಮನವಿ ಮಾಡುತ್ತಿದ್ದೇವೆ.

* ೧೪೧ ಜನ ದಲಿತ ಕಾರ್ಮಿಕರನ್ನು ಕೂಡಲೇ ಕೆಲಸಕ್ಕೆ ತೆಗೆದುಕೊಳ್ಳಬೇಕು.
* ೨೧ ತಿಂಗಳಿನಿಂದ ಗುತ್ತಿಗೆದಾರರಿಲ್ಲದೇ ನೇರವಾಗಿ ನಗರಸಭೆಯಲ್ಲಿ ದುಡಿದ ಪೌರ ಕಾರ್ಮಿಕರಿಗೆ ಕಾನೂನಿನಂತೆ ಎಲ್ಲಾ ವೇತನಗಳನ್ನು
ಕೊಡಬೇಕು.
* ೨೧ ತಿಂಗಳಿನಿಂದ ಗುತ್ತಿಗೆದಾರರಿಲ್ಲದೇ ಅಕ್ರಮವಾಗಿ ನಗರಸ್ವಚ್ಛತೆಗಾಗಿ ೧೪೧ ಜನ ದಲಿತ ಪೌರ ಕಾರ್ಮಿಕರಿಂದ ದುಡಿಸಿಕೊಂಡ ಪೌರಯುಕ್ತ
ಸಿ.ಆರ್.ರಂಗಸ್ವಾಮಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಬಂಧಿಸಬೇಕು.

ಮೇಲಿನ ಎಲ್ಲಾ ಹಕ್ಕೊತ್ತಾಯಗಳೊಂದಿಗೆ ನಗರ ಸ್ವಚ್ಛ ಮಾಡುವ ಕಾರ್ಮಿಕರ ಹೋರಾಟಕ್ಕೆ ಪಕ್ಷಾತೀತವಾಗಿ ಬೆಂಬಲಿಸಿ ಗಂಗಾವತಿ ನಗರದ ಆಸ್ತಿಗಳನ್ನು ಮುಕ್ಕುತ್ತಿರುವ ಮತ್ತು ನಕಲಿ ಹಕ್ಕುಪತ್ರಗಳಿಂದ ಸಾರ್ವಜನಿಕ ಆಸ್ತಿಗಳನ್ನು ಕಬಳಿಸುತ್ತಿರುವ ಪಟ್ಟಭದ್ರ ಹಿತಾಸಕ್ತಿಗಳಿಗೆ ತಕ್ಕ ಪಾಠ ಕಲಿಸಲು ನಾಗರೀಕರು ಒಂದಾಗಿ ಹೋರಾಟ ಮಾಡಬೇಕೆಂದು ಗಂಗಾವತಿ ನಾಗರಿಕರಲ್ಲಿ ಕರ್ನಾಟಕ ಸಾಮಾನ್ಯ ಕಾರ್ಮಿಕ ಸಂಘ ವಿನಂತಿಸಿಕೊಳ್ಳುತ್ತದೆ.

Please follow and like us:
error