ಕಾವೇರಿ ಕೊಳ್ಳದ ಡ್ಯಾಂಗಳ ನೀರು ಕುಡಿಯಲು ಮಾತ್ರ ಬಳಕೆ ನಿರ್ಣಯ ವಿಧಾನಸಭೆಯಲ್ಲಿ ಅಂಗೀಕಾರ

cm_siddaramayyaಬೆಂಗಳೂರು, ಸೆ.23: ಕಾವೇರಿ ಕೊಳ್ಳದ ಡ್ಯಾಂಗಳ ನೀರು ಕುಡಿಯಲು ಮಾತ್ರ ಬಳಕೆ ಮಾಡುವ ಬಗ್ಗೆ ನಿರ್ಣಯವನ್ನು ಇಂದು ಕಾವೇರಿ ನದಿ ನೀರು ವಿವಾದಕ್ಕೆ ಸಂಬಂಧಿಸಿ ನಡೆದ ವಿಧಾನಸಭೆಯ ಐತಿಹಾಸಿಕ ಹಾಗೂ ವಿಶೇಷ ಅಧಿವೇಶನದಲ್ಲಿ ಅಂಗೀಕರಿಸಲಾಗಿದೆ

ಸದನದಲ್ಲಿ ಪ್ರತಿಪಕ್ಷದ ನಾಯಕ ಜಗದೀಶ ಶೆಟ್ಟರ್‌ ಮಂಡಸಿದ ನಿರ್ಣಯವನ್ನು ಸರ್ವಾನುಮತದಿಂದ ಅಂಗಿಕರಿಸಲಾಗಿದೆ ಎಂದು ಸ್ವೀಕರ್‌ ಕೆ.ಬಿ. ಕೋಳಿವಾಡ್‌ ಪ್ರಕಟಿಸಿದರು.
ಜಗದೀಶ್‌ ಶೆಟ್ಟರ‍್ ಅವರು ಕಾವೇರಿ ಕೊಳ್ಳದ ಡ್ಯಾಂಗಳ ನೀರು ಕುಡಿಯುವುದಕ್ಕೆ ಮಾತ್ರ ಬಿಡುಗಡೆ. ಬೇರೆ ಕಾರಣಗಳಿಗೆ ಬಳಕೆ ಇಲ್ಲ ಎಂಬ ನಿರ್ಣಯವನ್ನು ಮಂಡಿಸಿದರು. ಜೆಡಿಎಸ್‌ ನಾಯಕ ವೈಎಸ್ವಿ ದತ್ತಾ ಅನುಮೋದನೆ ನೀಡಿ ಕನ್ನಡದಲ್ಲಿ ನಿರ್ಣಯ ಮಂಡಿಸಿದರು.
ಕರಡು ನಿರ್ಣಯದ ಮೇಲಿನ ಚರ್ಚೆಗೆ ಉತ್ತರ ನೀಡಿದ ಸಿಎಂ ಸಿದ್ದರಾಮಯ್ಯ ಸದನದ ನಿರ್ಣಯಕ್ಕೆ ಕರ್ನಾಟಕ ಸರಕಾರ ಬದ್ಧವಾಗಿದೆ. ಕುಡಿಯುವ ನೀರು ಒದಗಿಸಲು ಮೊದಲ ಆದ್ಯತೆಯಾಗಿದ್ದು, ರೈತರ ಹಿತಕಾಯಲು ಸರಕಾರ ಬದ್ಧವಾಗಿದೆ ಎಂದರು.
ನ್ಯಾಯಾಲಯದ ಆದೇಶವನ್ನು ಪಾಲಿಸಲು ಸಾಧ್ಯವಾಗದ ಪರಿಸ್ಥಿತಿಯಲ್ಲಿ ನಾವಿದ್ದೇವೆ. ನಮ್ಮಿಲ್ಲಿರುವ ನೀರು ಕೊಟ್ಟು ಬಿಟ್ಟರೆ ಕುಡಿಯಲು ನೀರಿರಲ್ಲ. ಈಗಾಗಲೇ ಬೆಳೆ ತ್ಯಾಗ ಮಾಡಿರುವ ರೈತರ ಸಂಕಷ್ಟದಲ್ಲಿದ್ದಾರೆ. ಕಳೆದ ಬಾರಿಯೂ ಬರಗಾಲ, ಈ ಬಾರಿಯೂ ಬರಗಾಲ, ಮಳೆಯಿಲ್ಲದೆ ಬೆಳೆಯುತ್ತಿರುವ ಬೆಳೆಗೆ ನೀರಿಲ್ಲದೆ ಸಂಕಷ್ಟ ಎದುರಾಗಿದೆ. ಮಳೆಯಲ್ಲಿದೆ ರಾಜ್ಯದಲ್ಲಿ ಸಮಸ್ಯೆ ಉಂಟಾಗಿದೆ. ಇದೇ ವೇಳೆ ಸೆ.20ರಂದು ಸುಪ್ರೀಂಕೋರ್ಟ್ ತಮಿಳುನಾಡಿಗೆ ನೀರು ಬಿಡಲು ಆದೇಶ ನೀಡಿದೆ ಎಂದು ಅವರ ಹೇಳಿದರು.
ಕಾವೇರಿ ಕಣಿವೆ ಪ್ರದೇಶದಲ್ಲಿ ಮಳೆಯ ಕೊರತೆ ಉಂಟಾಗಿದೆ. ಕಾವೇರಿ ಜಲಾನಯನ ಪ್ರದೇಶದ ಡ್ಯಾಂಗಳಲ್ಲಿ 27.5 ಟಿಎಂಸಿ ನೀರು ಇದೆ. ಮಳೆ ಬಾರದೆ ರೈತರು ಸಂಕಷ್ಟದಲ್ಲಿದ್ದಾರೆ. ಕಬ್ಬು ಬೆಳೆಗೆ ನೀರಿಲ್ಲದೆ ಬೆಳೆಗಾರರು ಕಂಗಾಲಾಗಿದ್ದಾರೆ. ಆದೆರ ತಮಿಳುನಾಡಿನಲ್ಲಿ ಇಂತಹ ಪರಿಸ್ಥಿತಿ ಇಲ್ಲ. ಮೆಟ್ಟೂರು ಜಲಾಶಯದಲ್ಲಿ 52 ಟಿಎಂಸಿ ನೀರುಸಂಗ್ರಹ ಇದೆ
ನಮಗೆ ನಮ್ಮ ರಾಜ್ಯಕ್ಕೆ ನೀರು ಕೊಡಬೇಕಾಗಿದೆ. ಇದು ಕರ್ನಾಟಕದ ಜನರ ಸಂಕಷ್ಟ. ಪರಿಸ್ಥಿತಿ ಹೀಗಿದ್ದರೂ ತಮಿಳುನಾಡು ಸಾಂಬಾ ಬೆಳೆಗೆ ನೀರು ಕೇಳುತ್ತಿದೆ. ಕೇಂದ್ರ ಜಲನೀತಿ ಪ್ರಕಾರ ಕುಡಿಯುವ ನೀರಿಗೆ ಮೊದಲ ಆದ್ಯತೆ. ಬಳಿಕ ಕೃಷಿಗೆ ನೀರು ನೀಡುವುದಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.

Please follow and like us:
error