ಕಾಲೇಜು ವಿದ್ಯಾರ್ಥಿನಿಗೆ ಚುಡಾಯಿಸಿದ ಪ್ರಕರಣ : ಯುವಕನಿಗೆ ಗೂಸಾ

road_romeo

ಕಾಲೇಜು ವಿದ್ಯಾರ್ಥಿನಿಗೆ ಚುಡಾಯಿಸಿದ ಪ್ರಕರಣದಲ್ಲಿ ಗಂಗಾವತಿಯ ಮಹೆಬೂಬ್‌ ನಗರದ ಗೌಸ್ ಎಂಬ ಯುವಕನಿಗೆ ಪಂಪಾನಗರದಲ್ಲಿರುವ ಮಕ್ಕಳ ಉದ್ಯಾನವನದಲ್ಲಿ ಯುವತಿಯ ಸಂಬಂಧಿಗಳು ಪಾದರಕ್ಷೆಯಿಂದ ಥಳಿಸಿ ಬಳಿಕ ನಗರ ಠಾಣೆಯ ಪೊಲೀಸರಿಗೆ ಒಪ್ಪಿಸಿದರು. ಕಾಲೇಜಿಗೆ ಹೋಗುವ ತಮ್ಮ ಮಗಳಿಗೆ ನಿತ್ಯ ಈ ಯುವಕ ರಸ್ತೆಯಲ್ಲಿ ನಿಂತು ಚುಡಾಯಿಸುತ್ತಿದ್ದ. ಯುವತಿ ಪ್ರತಿರೋಧ ತೋರಿದರೆ ಅಥವಾ ಮನೆಯಲ್ಲಿ ವಿಷಯ ತಿಳಿಸಿದರೆ ಹಲ್ಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ. ಘಟನೆಯಿಂದ ಬೇಸತ್ತ ಯುವತಿ ಕಳೆದ ಕೆಲ ದಿನಗಳಿಂದ ಕಾಲೇಜಿಗೆ ಹೋಗುವುದನ್ನೆ ನಿಲ್ಲಿಸಿದ್ದಳು. ಒಂದೆರಡು ಬಾರಿ ಯುವಕನನ್ನು ಕರೆದು ಬುದ್ದಿವಾದ ಹೇಳಿ ಕಳಿಸಲಾಗಿತ್ತು. ಆದರೆ ಯುವಕ ಸರಿದಾರಿಗೆ ಬಂದಿರಲಿಲ್ಲ ಎಂದು ಯುವತಿಯ ಸಂಬಂಧಿ  ಹೇಳಿದರು.

Related posts

Leave a Comment