ಕಾಮಗಾರಿ ಮುಗಿಯುವುದರೊಳಗೆ ಇನ್ನೂ ಎಷ್ಟು ಜನರ ಪ್ರಾಣ ಹೋಗಬೇಕು ?

 

ಇಂತಹ ಘಟನೆಗಳು ಇನ್ನು ಎಷ್ಟು ನಡೆಯಬೇಕು. ಕಾಮಗಾರಿ ಮುಗಿಯುವುದರೊಳಗೆ ಇನ್ನೂ ಎಷ್ಟು ಜನರ ಪ್ರಾಣ ಹೋಗಬೇಕು ಎಂದು ಜನರು ಆಕ್ರೋಶದಿಂದ ಕೇಳುತ್ತಿದ್ದಾರೆ.

ugd-yadavattu (6)  ugd-yadavattu (8)

ನಗರಗಳು ಅಭಿವೃದ್ದಿ ಹೊಂದಲಿ ಎಂದು ನಾನಾ ಯೋಜನೆಗಳನ್ನೇನೋ ತರುತ್ತಾರೆ ಆದರೆ ಅದು ಸಮರ್ಪಕವಾಗಿ ಜಾರಿಯಾಗದೇ ಇಡೀ ನಗರದ ನಾಗರಿಕರ ಜೀವ ಹಿಂಡುವ ಕೆಲಸ ಮಾಡುತ್ತವೆ. ಅಂತಹುದೇ ಘಟನೆ ನಿರಂತರವಾಗಿ  ನಡೆಯುತ್ತಿದೆ. ದಿನಾಲೂ ಗುಂಡಿಗಳಿಗೆ ಬಿದ್ದು  ಕೈ ಕಾಲು ಮುರಿದುಕೊಳ್ಳುತ್ತಿದ್ಧಾರೆ. ಜೀವಾನೂ ಕಳೆದುಕೊಂಡಿದ್ದಾರೆ .ಕೊಪ್ಪಳದ ಕೋಟೆ ಏರಿಯಾದಲ್ಲಿ  ಕಳೆದ ಕೆಲವು ದಿನಗಳಿಂದ ಯುಜಿಡಿ ಕಾಮಗಾರಿ ಆರಂಭಮಾಡಲಾಗಿದೆ. ಆದರೆ ಅರ್ಧಮರ್ಧ ಮಾಡಿ ಬಿಟ್ಟಿರುವುದರಿಂದ ರಸ್ತೆಯ ತುಂಬೆಲ್ಲಾ ಗುಂಡಿಗಳು ತುಂಬಿಕೊಂಡಿವೆ. ಇದು ಕೇವಲ ಈ ಭಾಗದ ತೊಂದರೆಯಲ್ಲ . ಇಡೀ ಕೊಪ್ಪಳ ನಗರದಲ್ಲಿಯೇ ಯುಜಿಡಿ ಕಾಮಗಾರಿಗಾಗಿ ರಸ್ತೆಗಳನ್ನು ಅಗೆಯಲಾಗಿದ್ದು ಕಾಮಗಾರಿ ನಿಧಾನಗತಿಯಿಂದ ಸಾಗುತ್ತಿರುವುದರಿಂದ ದಿನಾಲೂ ಒಂದಿಲ್ಲ ಒಂದು ಅವಘಢ ಸಂಭವಿಸುತ್ತಲೇ ಇವೆ.  ಇಂದು ಬೆಳಿಗ್ಗೆ ಸಹ ಇಲ್ಲ ಮಲ್ಲಪ್ಪ ಎನ್ನುವ ಮಾಜಿ ಯೋಧ ದ್ವಿಚಕ್ರ ವಾಹನದಲ್ಲಿ ಹೋಗುತ್ತಿರುವಾಗ ಇದ್ದಕಿದ್ದಂತೆ ರಸ್ತೆಯೇ ಕುಸಿದು ಬಿದ್ದು ಗುಂಡಿ ನಿರ‍್ಮಾಣವಾಗಿದೆ. ಹಿಂಬದಿ ಕುಳಿತ ಸವಾರ ಗುಂಡಿಯಲ್ಲಿಯೇ ಮುಳುಗಿಹೋಗಿದ್ದಾನೆ. ತಕ್ಷಣವೇ ಅಕ್ಕಪಕ್ಕದ ಜನ ಬಂದು ಕೈಹಿಡಿದಿದ್ದಾರೆ. ಮುಂಬದಿಯಲ್ಲಿದ್ದ ಮಲ್ಲಪ್ಪನಿಗೆ ತೀವ್ರಗಾಯಗಳಾಗಿವೆ. ಮೊನ್ನೆ ತಾನೆ ಎತ್ತುಗಳು ಸಿಕ್ಕಿಹಾಕಿಕೊಂಡು ಕಾಲು ಮುರಿದುಕೊಂಡಿದ್ದವು. ಮಕ್ಕಳು ಬಿದ್ದು ಗಾಯಮಾಡಿಕೊಂಡಿದ್ದರು. ಇವೆಲ್ಲವುಗಳಿಂದ ಬೇಸತ್ತ ರೋಸಿಹೋದ ಜನ ರಸ್ತೆ ತಡೆ ಮಾಡಿ ಅಧಿಕಾರಿಗಳೇ ಸ್ಥಳಕ್ಕಾಗಮಿಸಬೇಕೆಂದು ಪಟ್ಟು ಹಿಡಿದರು. ಸ್ಥಳಕ್ಕಾಗಮಿಸಿದ ಅಧಿಕಾರಿಗಳು ಹಾರಿಕೆಯ ಉತ್ತರ ನೀಡಿದ್ದನ್ನು ಕೇಳಿ ಸಿಟ್ಟಿಗೆದ್ದ ಜನತೆ ಅವರನ್ನೇ ಗುಂಡಿಗೆ ಇಳಿಸಿದರು.ಗುಂಡಿಯಲ್ಲಿ ಬಿದ್ದು ಗಾಯಮಾಡಿಕೊಂಡವರು ಇಡೀ ಕಾಮಗಾರಿಗೆ ಹಿಡಿಶಾಪ ಹಾಕಿದರು. ಎಷ್ಟು ಸಾರಿ ಕರೆದರೂ ಸಹ ಅಧಿಕಾರಿಗಳು ಬಂದಿಲ್ಲ ನೀವು ಎಂದು ಅಧಿಕಾರಿಗಳನ್ನು ಸ್ಥಳೀಯರು ತರಾಟೆಗೆ ತೆಗೆದುಕೊಂಢರು. ಅಧಿಕಾರಿಗಳು ಉತ್ತರಿಸಲು ತಡಕಾಡಿದರು. ೨೦೧೧ರಿಂದ ಕೊಪ್ಪಳದಲ್ಲಿ ಆರಂಭವಾಗಿರುವ ಯುಜಿಡಿ ಕಾಮಗಾರಿಗೆ ೧೮ ತಿಂಗಳು ನಿಗಧಿ ಮಾಡಲಾಗಿತ್ತು. ಆದರೆ ಈಗಾಗಲೇ ೫೦ ತಿಂಗಳು ಗತಿಸಿದರೂ ಕಾಮಗಾರಿ ಪೂರ್ಣಗೊಂಡಿಲ್ಲ. ಜನಪ್ರತಿಭಟನೆ ಮಾಡಿದಾಗಲೊಮ್ಮೆ ಗುತ್ತಿಗೆದಾರರನ್ನು ಕಪ್ಪುಪಟ್ಟಿಯಲ್ಲಿ ಸೇರಿಸಲಾಗುವುದು ಎಂದು ಜನಪ್ರತಿನಿಧಿಗಳು ಹೇಳಿದ್ದೇ ಬಂತು ಆದರೆ ಇದುವರೆಗೆ ಯಾವುದೇ ರೀತಿಯ ಕ್ರಮ ಕೈಗೊಳ್ಳದೇ ಇರುವುದು ಅವರಿಗೆ ಸರಳವಾಗಿದೆ. ಅಧಿಕಾರಿಗಳು ಗುತ್ತಿಗೆದಾರರು ಸೇರಿಕೊಂಡು ಬಹಳಷ್ಟು ಅವ್ಯವಹಾರ ಮಾಡಿದ್ದಾರೆ ಎಂದು ಆರೋಪ ಮಾಡಲಾಗುತ್ತಿದೆ.  ಕೆಲವು ತಿಂಗಳ ಹಿಂದೆ ಬಿಟಿಪಾಟೀಲ್ ನಗರದಲ್ಲಿ ಗುಂಡಿಯಲ್ಲ ಬಿದ್ದು ವ್ಯಕ್ತಿಯೋರ‍್ವ ಸಾವನ್ನಪ್ಪಿದ್ದ. ಇವತ್ತು ಕೈ ಕಾಲು ಮುರಿದುಕೊಂಡಿದ್ಧಾರೆ.

ಇಂತಹ ಘಟನೆಗಳು ಇನ್ನು ಎಷ್ಟು ನಡೆಯಬೇಕು. ಕಾಮಗಾರಿ ಮುಗಿಯುವುದರೊಳಗೆ ಇನ್ನೂ ಎಷ್ಟು ಜನರ ಪ್ರಾಣ ಹೋಗಬೇಕು ಎಂದು ಜನರು ಆಕ್ರೋಶದಿಂದ ಕೇಳುತ್ತಿದ್ದಾರೆ.

 

Leave a Reply