ಕಾತರಕಿ ಗ್ರಾಮದಲ್ಲಿ ದಲಿತರ ಮೇಲೆ ದೌರ್ಜನ್ಯ ಮತ್ತು ಶೋಷಣೆ : ಮನವಿ

ಕೊಪ್ಪಳ : ತಾಲೂಕಿನ ಕಾತರಕಿ ಗ್ರಾಮದಲ್ಲಿ ದ ಲಿತರ ಮೇಲೆ ದೌರ್ಜನ್ಯ ಮತ್ತು ಶೋಷಣೆ ನಡೆದಿರುವುದನ್ನು ಖಂಡಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ(ರಿ) ಭೀಮವಾದ ಜಿಲ್ಲಾ ಮತ್ತು ತಾಲೂಕು ಸಮಿತಿ ವತಿಯಿಂದ ಜಿಲ್ಲಾದಿಕಾರಿಗಳಿಗೆ ಮನವಿ ಸಲ್ಲಿಸಿಲಾಯಿತು.

dss-koppal
ಇತ್ತೀಚಿಗೆ ಕಾತರಕಿ- ಗುಡ್ಲಾನೂರು ಗ್ರಾಮದಲ್ಲಿ ದಲಿತರ ಮೇಲೆ ಕ್ಷೌರ ಮಾಡಿಸಿಕೊಳ್ಳುವ ವಿಷಯವಾಗಿ ದಲಿತರ ಮೇಲೆ ಶೋಷಣೆ ಮಾಡಿ, ದಲಿತರನ್ನು ಗ್ರಾಮದಿಂದ ಬಹಿಸ್ಕಾರ ಮತ್ತು ಬೆದರಿಕೆ ಹಾಕುವಂತಹ ಹೇಳಿಕೆ ನೀಡಿ, ದಲಿತರನ್ನು ಶೋಷಣೆ ಮಾಡಿರುವ ಘಟನೆಯನ್ನು ತಮ್ಮ ಗಮನಕ್ಕೆ ತರುತ್ತಾ ದಲಿತರ ಮೇಲೆ ನಿರಂತರವಾಗಿ ಶೋಷಣೆಗಳು ಹಾಗೂ ದೌರ್ಜನ್ಯಗಳು ನೆಡೆಯುತ್ತಿವೆ. ಅದರಂತೆ ಇತರ ಗ್ರಾಮಗಳಲ್ಲಿ ಬೋಚನಹಳ್ಳಿ, ಇಂದರಗಿ, ವಡ್ರಕಲ್ ಇದರಂತೆ ನಮ್ಮ ಕೊಪ್ಪಳ ಜಿಲ್ಲೆಯ ಎಲ್ಲಾ ಗ್ರಾಮಗಳಲ್ಲಿ ದಲಿತರ ಮೇಲೆ ಸವರ್ಣಿಯರು ದೌರ್ಜನ್ಯ, ಬೆದರಿಕೆ, ಹಲ್ಯೆಗಳು, ಮಹಿಳೆಯರ ಮೇಲೆ ಹತ್ಯಾಚಾರ, ಕೊಲೆಗಳು, ನಿರಂತರವಾಗಿ ನೆಡೆಯುತ್ತಾಯಿವೆ, ಆದರೂ ಸಂಬಂಭ ಪಟ್ಟ ಅಧಿಕಾರಿಗಳು ಅಂತವರ ಮೇಲೆ ಸರಿಯಾದ ಕ್ರಮ ಜರುಗಿಸದೇ ಇರುವದು ಮೇಲ್ನೋಟಕ್ಕೆ ಕಂಡುಬರುತ್ತಾಯಿದೆ, ಕೊಪ್ಪಳ ಜಿಲ್ಲೆಯ ಪ್ರತಿಯೊಂದು ಗ್ರಾಮದಲ್ಲಿ, ಆ ಗ್ರಾಮದ ಮೇಲ್ಜಾತಿಯ ಸಮುದಾಯದವರಿಗೆ ಸಂವಿಧಾನದಲ್ಲಿರುವ ಮೂಲಭೂತ ಹಕ್ಕುಗಳು ದಲಿತರಿಗೂ ಸಮಾನವಾದ ಅವಕಾಶವನ್ನು ನೀಡಿದೆ . ಎನ್ನುವ ವಿಚಾರವನ್ನು ಸವರ್ಣಿಯರಿಗೆ ತಾವುಗಳು ತಿಳಿಸುವಂತಹ ಕಾರ‍್ಯವನ್ನು ಮಾಡಿ, ತಾವುಗಳು ಪ್ರತಿಯೊಂದು ಗ್ರಾಮದಲ್ಲಿ ದಲಿತರಿಗೆ ದೇವಸ್ಥಾನ ಹಾಗೂ ಹೋಟೆಲ್ ಮತ್ತು ಕಟಿಂಗ್ ಶಾಪ್‌ಗಳಲ್ಲಿ, ಸಾರ್ವಜನಿಕ ಸ್ಥಳಗಳಲಿ, ದಲಿತರಿಗೆ ಮುಕ್ತ ಅವಕಾಶವನ್ನು ಕಲ್ಪಿಸುವದಾಗಿ, ಗ್ರಾಮದಲ್ಲಿ ಎಲ್ಲರೂ ಸಮಾನತೆಯಿಂದ ಬಾಳುವಂತೆ ಮನವರಿಕೆ ಮಾಡಿ, ಮುಂದೆ ಯಾವುದೇ ದಲಿತರ ಮೇಲೆ ಹಲ್ಯೆಗಳು, ಶೋಷಣೆ, ನೆಡೆಯದಂತೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ) (ಭೀಮವಾದ ) ಜಿಲ್ಲಾ ಮತ್ತು ತಾಲೂಕ ಸಮಿತಿಯವರು ಆಗ್ರಹಿಸಿದ್ದಾರೆ.  ಒಂದು ವೇಳೆ ಇದೇ ರೀತಿ ದಲಿತರ ಮೇಲೆ ಶೋಷಣೆ ಜರುಗಿದಲ್ಲಿ ನಮ್ಮ ಸಂಘಟನೆ ವತಿಯಿಂದ ಉಗ್ರವಾದ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಈ ಸಂದರ್ಭದಲ್ಲಿ   ಹನುಮಂತಪ್ಪ ಹೆಚ್ ಜಿಲ್ಲಾ ಸಂಚಾಲಕರು ಕೊಪ್ಪಳ, ಪಿ.ಲಕ್ಷ್ಮಯ್ಯ, ನರಸಪ್ಪ ಹಾಸಗಲ್ಲ್, ಹನುಮಂತಪ್ಪ ಚಿಕ್ಕಬೊಮ್ಮನಾಳ, ಯಮನೂರಪ್ಪ ಹಲವಾಗಲಿ, ಯಮನೂರಪ್ಪ ಚಿಕ್ಕಬೊಮ್ಮಾಳ ಇನ್ನೂ ಮುಂತಾದ ಕಾರ್ಯಕರ್ತರು ಉಪಸ್ಥಿತರಿದ್ದರು

Leave a Reply