ಕಲ್ಲತಾವರಗೇರಾ ಪಂಚಾಯತ್ ರಾಜ್ ದಿವಸ್ ಆಚರಣೆ.

IMG_1900ಕೊಪ್ಪಳ ಏ.೨೩  ತಾಲೂಕಿನ ಕಲ್ಲತಾವರಗೇರ ಗ್ರಾಮ ಪಂಚಾಯತಿಯಲ್ಲಿ ಇತ್ತೀಚೆಗೆ ಗ್ರಾಮ ಉದಯ್ ಸೇ ಭಾರತ್ ಉದಯ್ ಅಭಿಯಾನದಡಿಯಲ್ಲಿ ಪಂಚಾಯತ್ ರಾಜ್ ದಿವಸ್ ಆಚರಣೆ ಮಾಡಲಾಯಿತು. ಮಾ.೨೧ ರಂದು ಕಲ್ಲತಾವರಗೇರಾ ಗ್ರಾಮದಲ್ಲಿ ಗ್ರಾಮ ಉದಯ್ ಸೇ ಭಾರತ್ ಉದಯ್ ಅಭಿಯಾನದಡಿಯಲ್ಲಿ ಪಂಚಾಯತ್ ರಾಜ್ ದಿವಸ್ ಆಚರಣೆ ಅಂಗವಾಗಿ ಅಂದು ಗ್ರಾಮದಲ್ಲಿ ಮೇಣದಬತ್ತಿ ಬೇಳಗಿಸುತ್ತಾ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಾರ್ವಜನಿಕರೊಂದಿಗೆ ಅಭಿಯಾನದ ಘೋಷಣೆಗಳೊಂದಿಗೆ ಜಾಗೃತಿ ಜಾಥಾ ನಡೆಸಲಾಯಿತು. ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಟಿ.ಕೃಷ್ಣಮೂರ್ತಿ ಪ್ರಸ್ತುತ ಬರಗಾಲ ಇರುವುದರಿಂದ ಎಲ್ಲರೂ ಉದ್ಯೋಗಖಾತ್ರಿ ಯೋಜನೆಯಡಿ ನಮೂನೆ-೬ ರಲ್ಲಿ ಅರ್ಜಿ ಸಲ್ಲಿಸಿ ಉದ್ಯೋಗ ಪಡೆದುಕೊಳ್ಳಬೇಕು ಎಂದರು. ದಿನ ಒಂದಕ್ಕೆ ರೂ.೨೨೪ ಕೂಲಿ ನಿಗದಿಪಡಿಸಲಾಗಿದ್ದು ಯಾವುದೇ ಕಾರಣಕ್ಕೂ ಗುಳೆ ಹೋಗದೇ ಸ್ಥಳೀಯವಾಗಿಯೇ ಕೆರೆ ಅಭಿವೃದ್ಧಿ, ಆಟದ ಮೈದಾನ ಅಭಿವೃದ್ಧಿ, ಸ್ಮಶಾನ ಅಭಿವೃದ್ಧಿ, ಚೆಕ್ ಡ್ಯಾಂ ನಿರ್ಮಾಣದಂತಹ ಕಾಮಗಾರಿಗಳಲ್ಲಿ ಕೆಲಸ ಪಡೆದು ಆರ್ಥಿಕ ಸದೃಢರಾಗುಂತೆ ತಿಳಿಸಿ, ಕೂಲಿ ಹಣವನ್ನು ನೇರವಾಗಿ ತಮ್ಮ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ. ಒಂದು ವೇಳೆ ಕೂಲಿ ಹಣ ಜಮಾವಣೆ ಆಗದಿದ್ದಲ್ಲಿ ಪ್ರತಿ ತಿಂಗಳ ೨ನೇ ಗುರುವಾದಂದು ನಡೆಯುವ ರೋಜಗಾರ ಸಭೆಯಲ್ಲಿ ಭಾಗವಹಿಸಿ ಕುಂದು-ಕೊರತೆಗಳನ್ನು ಸರಿಪಡಿಸಿಕೊಳ್ಳಬಹುದಾಗಿದೆ. ಜಮೀನು ರಹಿತ ರೈತರು ವೈಯಕ್ತಿಕ ಕಾಮಗಾರಿಗಳಾದ ದನದ ದೊಡ್ಡಿ, ಕುರಿದೊಡ್ಡಿ ನಿರ್ಮಾಣ ಮಾಡಿಕೊಳ್ಳಬಹುದು ಎಂದು ತಿಳಿಸಿದರು. ನಂತರ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ, ಸ್ವಚ್ಛ ಭಾರತ ಅಭಿಯಾನ ಕಾರ್ಯಕ್ರಮದಡಿಯಲ್ಲಿ ದೊರೆಯುವ ಸೌಲಭ್ಯ ಕುರಿತ ಕಿರುಚಿತ್ರ ಪ್ರದರ್ಶನ ಮಾಡಲಾಯಿತು. ವೈಯಕ್ತಿಕ ಶೌಚಾಲಯ ನಿರ್ಮಣಕ್ಕೆ ಪ್ರತಿ ಕುಟುಂಬಕ್ಕೆ ರೂ.೧೨,೦೦೦ ಹಾಗೂ ಪ.ಜಾ/ಪ.ಪಂ ಕುಟುಂಬಗಳಿಗೆ ರೂ.೧೫,೦೦೦ ಸಹಾಯಧನ ನಿಗದಿ ಮಾಡಿದ್ದು ಗ್ರಾಮಸ್ಥರು ಇದರ ಸದುಪಯೋಗ ಪಡೆದುಕೊಂಡು ಬಯಲು ಬಹಿರ್ದೆಸೆ ಮುಕ್ತ ಗ್ರಾಮ ನಿರ್ಮಾಣ ಮಾಡಲು ಪಣತೊಡಬೇಕೆಂದು ಕರೆ ನೀಡಲಾಯಿತು. ಈ ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷ ಬಂಡೆಪ್ಪ ಕತ್ತಿ, ಗ್ರಾ.ಪಂ ಸದಸ್ಯರುಗಳಾದ ಅಂಬಣ್ಣ ಮಾದಾಪುರ, ಹಾಲಸ್ವಾಮಿ, ಫಕೀರಪ್ಪ ಕೋರಿ, ಮಾರುತಿ ತಳವಾರ, ತಾಲೂಕ ಎಇಸಿ ಸಂಯೋಜಕ ದೇವರಾಜ ಪತ್ತಾರ, ಪಂಚಾಯತಿ ಅಭಿವೃದ್ಧಿ ಅಧಿಕಾರಿ ಶರಣಯ್ಯ ಸಸಿಮಠ, ಕಾರ್ಯದರ್ಶಿ ಸೊಲಬಪ್ಪ ಕಳ್ಳಿ, ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

Please follow and like us:
error