ಕಲೆ ದೈವದತ್ತ ಕೊಡುಗೆ ಕೊಟ್ರಪ್ಪ ಚೋರನೂರು.

ಕೊಪ್ಪಳ, ಎ.೧೨- ಕಲೆ ದೈವದತ್ತ ಕೊಡುಗೆ ಅದನ್ನು ಯಾರು ಕದಿಯಲು, ಕಸಿದುಕೊಳ್ಳಲ್ಲಾಗದು. ಕಲೆಗೆ ಬೆಲೆ ಕಟ್ಟಲಾಗದು ಎಂದು ಕೊಪ್ಪಳದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕೋಟ್ರಪ್ಪ ಚೋರನೂರು ಅಭಿಪ್ರಾಯ ಪಟ್ಟರು. ಅವರು ಇಲ್ಲಿನ ಭಾಗ್ಯನಗರ ಪಟ್ಟಣದ ಸ್ವರ ಸೌರಭ ಸಂಗೀತ ಮತ್ತು ಲಲಿತಕಲಾ ಸಂಸ್ಥೆಯ ಪ್ರಥಮ ವಾರ್ಷಿಕೋತ್ಸವ ಹಾಗೂ ೫ ನೇ ಸ್ವರ ಸೌರಭ ಸಂಗೀತ ಸಂಜೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಂಗೀತಕ್ಕೆ ಮಹೋ12KPL-02ನ್ನತ ಶಕ್ತಿ ಇದೆ. ಸಂಗೀತಕ್ಕೆ ತಲೆ ಭಾಗದವರಿಲ್ಲ. ಪ್ರಾಣಿ ಪಕ್ಷಿಗಳು ಸಹ ಸಂಗೀತವನ್ನು ಆಹಲಾದಿಸುತ್ತವೆ. ಬಿಡುವಿಲ್ಲದ ಜೀವನ ಜಂಜಾಟದ ಬದುಕಿಗೆ ಸಂಗೀತ ನೆಮ್ಮದಿ ನೀಡಲಿದೆ ಎಂದ ಅವರು ಭಾಗ್ಯನಗರ ಸಂಗೀತ ಸಾಹಿತ್ಯ ಸಾಂಸ್ಕೃತಿಗಳ ಕಲೆಬಿಡು ಅದರ ಹಿನ್ನೆಲೆ ಹಾಗೂ ಸಂಗೀತದ ಪ್ರೋತ್ಸಾಹದ ನುಡಿಗಳನ್ನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆ ಅಧ್ಯಕ್ಷ ವೀರಪ್ಪ ಶ್ಯಾವಿ ಮಾತನಾಡಿ, ಶ್ರದ್ಧಾಭಕ್ತಿ ಪರಿಶ್ರಮದಿಂದ ಮಾತ್ರ ಸಂಗೀತ ಓಲಿಯಲು ಸಾಧ್ಯ. ಸಂಗೀತ ಶಾರದೇ ಎಲ್ಲರಲ್ಲೂ ಕೈಬಿಸಿ ಕರೆಯುತ್ತಾಳೆ. ಅದರಲ್ಲಿ ಕೆಲವರನ್ನು ಮಾತ್ರ ಆಯ್ಕೆ ಮಾಡಿಕೊಳ್ಳುತ್ತಾಳೆ. ಅದೊಂದು ಮಹತ್ತರ ಸಾಧನೆಯೇ ಸರಿ ಎಂದು ಹೇಳಿದರು. ಇದೇ ವೇಳೆ ಬಳ್ಳಾರಿ ಸಂಗೀತ ಶಿಕ್ಷಕಿ ಕವಿತಾ ಗಂಗೂರು ರವರಿಗೆ ಸಂಸ್ಥೆವತಿಯಿಂದ ಸುಗಮ ಸಂಗೀತ ಕಲಾರತ್ನ ಎಂಬ ಬಿರುದು ನೀಡಿ ಪ್ರಶಸ್ತಿ ಹಾಗೂ ಪುರಸ್ಕಾರ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ರಾಷ್ಟ್ರ ಮಟ್ಟದ ಬಾನ್ಸುರಿ ವಾದಕ ಭಾಗ್ಯನಗರದ ನ್ಯಾಗರಾಜ ಶ್ಯಾವಿಯವರ ಬಾನ್ಸುರಿ ವಾದನ ಎಲ್ಲರ ಗಮನ ಸೆಳೆಯಿತು.

Please follow and like us:
error