ಕರ್ನಾಟಕ ಜಾನಪದ ಅಕಾಡೆಮಿ : ಫೆಲೋಶಿಪ್‌ಗಾಗಿ ಅಧ್ಯಯನಕಾರರ ಆಯ್ಕೆ

ಕರ್ನಾಟಕ ಜಾನಪದ ಅಕಾಡೆಮಿಯು ಸಾಹಿತಿ-ಕಲಾವಿದರಿಗೆ ನೀಡುವ ಫೆಲೋಶಿಪ್‌ಗಾಗಿ ೨೦೧೫-೧೬ ನೇ ಸಾಲಿನಲ್ಲಿ ಪರಿಶಿಷ್ಟ ಜಾತಿಯ ೧೦ ಜನ, ಪರಿಶಿಷ್ಟ ಪಂಗಡದ ೧೦ ಹಾಗೂ ಸಾಮಾನ್ಯ ವರ್ಗದ ೦೩ ಜನ ಅಧ್ಯಯನಕಾರರನ್ನು ಆಯ್ಕೆ ಮಾಡಿದೆ.

peer-basha-bavji ramesh-gabbur

ಫೆಲೋಶಿಪ್‌ಗಾಗಿ ಆಯ್ಕೆಯಾದ ಅಧ್ಯಯನಕಾರರ ಹೆಸರು ಹಾಗೂ ಅಧ್ಯಯನದ ವಿಷಯ ಇಂತಿದೆ. ಪರಿಶಿಷ್ಟ ಜಾತಿ ವಿಭಾಗದಲ್ಲಿ ಡಾ. ಪಿ.ಎಂ. ಕುಮಾರ್, ಮಂಡ್ಯ ಜಿಲ್ಲೆ- ಚಂದ್ರಮಂಡಲ ಆಚರಣೆ-ಮಂಟೇಸ್ವಾಮಿ ಸಂಪ್ರದಾಯ. ಡಾ. ಗಂಗಾಧರ, ಗರಗ, ಧಾರವಾಡ- ಜಗ್ಗಲಿಗೆ- ಪ್ರಕಾರದ ಅಧ್ಯಯನ. ಎಸ್. ಕಾಳಿಂಗಸ್ವಾಮಿ ಸಿದ್ಧಾರ್ಥ, ಚಾಮರಾಜನಗರ ಜಿಲ್ಲೆ- ನೀಲಗಾರರ ಪದಗಳಲ್ಲಿ ಸಾಮಾಜಿಕತೆ. ಸುಮಿತ್ರ ಜಿ. ದಾವಣಗೆರೆ ಜಿಲ್ಲೆ- ಲಂಬಾಣಿ ನೃತ್ಯ ಹಾಡುಗಳು. ರೇವಣಸಿದ್ದಪ್ಪ, ಬಳ್ಳಾರಿ ಜಿಲ್ಲೆ- ಮಳೆರಾಯನ ಪದಗಳು- ಜೋಕುಮಾರಸ್ವಾಮಿ ಸಂಪ್ರದಾಯ. ರಮೇಶ ಗಬ್ಬೂರು, ಕೊಪ್ಪಳ ಜಿಲ್ಲೆ- ತತ್ವಪದಳು-ಸಾಮಾಜಿಕ ಸಮಾನತೆಯ ಆಶಯಗಳು. ಎಂ. ಗಂಗೂಲಪ್ಪ, ಚಿಕ್ಕಬಳ್ಳಾಪುರ ಜಿಲ್ಲೆ- ಕೈವಾರ ತಾತಯ್ಯ-ತತ್ವಪದಗಳು. ಜಗನ್ನಾಥ ಕೆ., ದಕ್ಷಿಣ ಕನ್ನಡ ಜಿಲ್ಲೆ- ಭೂತಕೋಲ. ಶಿವಣ್ಣ ಹೆಚ್.ಜಿ., ತುಮಕೂರು ಜಿಲ್ಲೆ- ಸೂಫಿ ಪರಂಪರೆ, ಜಾನಪದ ಆಚರಣೆಗಳು. ಪದ್ಮಾಲಯ ನಾಗರಾಜು, ಕೋಲಾರ ಜಿಲ್ಲೆ- ಅಚಲ ತತ್ವಪದಕಾರರು.
ಪರಿಶಿಷ್ಟ ಪಂಗಡ ವಿಭಾಗದಲ್ಲಿ ಕುಮುದ ಬಿ., ಶಿವಮೊಗ್ಗ ಜಿಲ್ಲೆ- ಹಕ್ಕಿಪಿಕ್ಕಿಯರ ಪದಗಳು. ಸತೀಶ್‌ಕುಮಾರ ತಿಮ್ಮಣ್ಣನವರ, ಹಾವೇರಿ ಜಿಲ್ಲೆ- ಜಾನಪದ ಮತ್ತು ರಾಷ್ಟ್ರೀಯವಾದ ಸಂಬಂಧ ಸ್ವರೂಪ. ರತ್ನಮ್ಮ ಎಸ್, ಚಾಮರಾಜನಗರ ಜಿಲ್ಲೆ- ಸೋಲಿಗರ ಆಚರಣೆ ಜಗತ್ತು. ಸಿದ್ದ ಜೆ.ಆರ್., ಮೈಸೂರು ಜಿಲ್ಲೆ- ಜೇನು ಕುರುಬರ ಹಬ್ಬದಾಚರಣೆಗಳು. ಗೀತಾ ಸಿದ್ದಿ, ಉತ್ತರಕನ್ನಡ ಜಿಲ್ಲೆ- ಸಿದ್ದಿ ಆಚರಣೆಗಳು. ಶ್ರೀನಿವಾಸ ಗೌಡ, ಚಿಕ್ಕಮಗಳೂರು ಜಿಲ್ಲೆ- ಗೌಡ್ಲು ಜಾನಪದ ಅಧ್ಯಯನ. ಗೌರಿ, ಉಡುಪಿ ಜಿಲ್ಲೆ- ಕೊರಗರ ಡೋಲು ಕುಣಿತ. ಕೃಷ್ಣಮೂರ್ತಿ ಕೆ.ವಿ., ರಾಮನಗರ ಜಿಲ್ಲೆ- ಇರುಳಿಗರ ಸಾಂಪ್ರದಾಯಿಕ ಆಚರಣೆಗಳು. ಸಿದ್ದರಾಜು, ಮೈಸೂರು ಜಿಲ್ಲೆ- ಯರವರ ಪದಗಳು. ವಿಶ್ವ ಎ., ಚಿಕ್ಕಮಗಳೂರು ಜಿಲ್ಲೆ- ಹಸಲರ ಪದಗಳು.
ಸಾಮಾನ್ಯ ವರ್ಗ ವಿಭಾಗದಲ್ಲಿ ಡಾ. ವೇಮಗಲ್ ಡಿ, ನಾರಾಯಣಸ್ವಾಮಿ, ಬೆಂಗಳೂರು- ಜಾನಪದ ಕಲೆ & ಕಾಯಕ ಸಂಸ್ಕೃತಿಯ ಸಂಬಂಧದ ಸ್ವರೂಪ. ಪೀರ್‌ಭಾಷ, ಕೊಪ್ಪಳ ಜಿಲ್ಲೆ- ಮೊಹರಂ ಪದಗಳು ಒಂದು ಆಚರಣೆ. ಉಜ್ಜಜ್ಜಿ ರಾಜಣ್ಣ, ಚಿತ್ರದುರ್ಗ ಜಿಲ್ಲೆ- ಕಾಡುಗೊಲ್ಲರು ಒಂದು ಅಧ್ಯಯನ.
ಫೆಲೋಶಿಪ್‌ನ ಮೊತ್ತವು ತಲಾ ಒಬ್ಬರಿಗೆ ೦೧ ಲಕ್ಷ ರೂ.ಗಳಾಗಿದ್ದು, ಇದರಲ್ಲಿ ಅಧ್ಯಯನ ವೇತನಕ್ಕಾಗಿ ೭೦ ಸಾವಿರ ರೂ. ಗಳನ್ನು ಅಧ್ಯಯನಕಾರರಿಗೆ ಮೂರು ಕಂತಿನಲ್ಲಿ ವರದಿಗಳಿಗೆ ಅನುಗುಣವಾಗಿ ಅಕಾಡೆಮಿಯು ಬಿಡುಗಡೆ ಮಾಡಲಿದೆ. ಉಳಿದ ೩೦ ಸಾವಿರ ರೂ. ಗಳಲ್ಲಿ ಆಯಾ ವಿಷಯದ ಪುಸ್ತಕವನ್ನು ಮುದ್ರಿಸಲು ಬಳಸಿಕೊಳ್ಳಲಾಗುವುದು ಎಂದು ಕರ್ನಾಟಕ ಜಾನಪದ ಅಕಾಡೆಮಿ ರಿಜಿಸ್ಟ್ರಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Please follow and like us:
error

Related posts

Leave a Comment