ಕರ್ನಾಟಕ ಏಕೀಕರಣ- ೬೦ ನೇ ವರ್ಷದ ಉಪನ್ಯಾಸ ಕಾರ್ಯಕ್ರಮ

kasap-koppal
ಕೊಪ್ಪಳ, ೨೩- ಇತಿಹಾಸವನ್ನು ಅರಿಯದವರು ಇತಿಹಾಸವನ್ನು ಸೃಷ್ಟಿಸಲಾರರು. ಸ್ವಾತಂತ್ರ್ಯ ಹೋರಾಟ, ಹೈ.ಕ. ವಿಮೋಚನಾ ಹೋರಾಟ ಹಾಗೂ ಕರ್ನಾಟಕ ಏಕೀಕರಣದ ಹೋರಾಟಗಳಲ್ಲಿ ಕೊಪ್ಪಳ ಜಿಲ್ಲೆಯ ಕೊಡುಗೆ ನಿಜಕ್ಕೂ ಸ್ಮರಣೀಯ. ಕರ್ನಾಟಕ ಏಕೀಕರಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಈ ಭಾಗದ ಅನೇಕ ಸಂಘಟನೆಗಳು ನಿಜಕ್ಕೂ ಅದ್ಭುತ ಕಾರ್ಯವನ್ನೇ ಮಾಡಿವೆ. ಅವುಗಳ ಬಗ್ಗೆ ಯುವ ಪೀಳಿಗೆಗೆ ಇಂತಹ ಉಪನ್ಯಾಸ ಕಾರ್ಯಕ್ರಮಗಳು ಅವಶ್ಯಕ ಎಂದು ಹಿರಿಯ ಉಪನ್ಯಾಸಕರಾದ ಡಿ.ಎಂ.ಬಡಿಗೇರ ಹೇಳಿದರು.
ಅವರು ಭಾಗ್ಯನಗರದ ವಿದ್ಯಾವಿಕಾಸ ಪ್ರೌಢಶಾಲೆಯಲ್ಲಿ ಜಿಲ್ಲಾ ಹಾಗೂ ಕೊಪ್ಪಳ ತಾಲೂಕ ಕನ್ನಡ ಸಾಹಿತ್ಯ ಪರಿಷತ್ ಹಮ್ಮಿಕೊಂಡಿದ್ದ ಕರ್ನಾಟಕ ಏಕೀಕರಣ-೬೦ ನೇ ವರ್ಷದ ಅಂಗವಾಗಿ ಉಪನ್ಯಾಸ ಹಾಗೂ ಸನ್ಮಾನ ಸಮಾರಂಭದಲ್ಲಿ ಏಕೀಕರಣದಲ್ಲಿ ಕೊಪ್ಪಳ ಜಿಲ್ಲೆಯ ಕೊಡುಗೆ ಎಂಬ ವಿಷಯದ ಕುರಿತು ಉಪನ್ಯಾಸ ನೀಡುತ್ತಿದ್ದರು.
ಕ್ರಿ.ಶ.೧೭೯೯ ನೇ ಇಸ್ವಿಯಲ್ಲಿ ೪ ನೇ ಆಂಗ್ಲೋ ಮೈಸೂರು ಯುದ್ಧದಲ್ಲಿ ಟಿಪ್ಪುಬ್ರಿಟಿಷರ ವಿರುದ್ಧ ಹೋರಾಡಿ ಸೋಲನ್ನಪ್ಪಿ ಮರಣಹೊಂದಿದಾಗ ಬ್ರಿಟಿಷರು ಈ ಕನ್ನಡ ಪ್ರಾಂತವನ್ನು ೪ ಭಾಗಗಳಾಗಿ ಒಂದು ಭಾಗವನ್ನು ಮರಾಠಾ, ಹೈದ್ರಾಬಾದ್ ನಿಜಾಮನಿಗೆ, ಒಂದು ಭಾಗವನ್ನು ಮೈಸೂರು ಒಡೆಯರ್ ರವರಿಗೆ ನೀಡಿ ಉಳಿದ ಭಾಗವನ್ನು ತಾವು ಉಳಿಸಿಕೊಂಡರು. ಮೊಟ್ಟ ಮೊದಲ ಬಾರಿಗೆ ಏಕೀಕರಣಕ್ಕೆ ಮುಂದಾಗಿದ್ದವರು ಶಿಕ್ಷಣಾಧಿಕಾರಿಗಳಾಗಿದ್ದ ಡೆಪ್ಯೂಟಿ ಚೆನ್ನಬಸಪ್ಪನವರು. ಅವರ ಹೋರಾಟಕ್ಕೆ ಪತ್ರಿಕೆಗಳು, ಸಂಘ-ಸಂಸ್ಥೆಗಳು, ಸಾಹಿತಿಗಳು, ಸೇರಿದಂತೆ ಅಪಾರ ಜನಬೆಂಬಲವೂ ವ್ಯಕ್ತವಾಯಿತು. ಒಂದೇ ಭಾಷೆಯನ್ನು ಮಾತನಾಡುವ ಜನರು ಒಂದು ಪ್ರಾಂತ್ಯವನ್ನು ಕಟ್ಟಿಕೊಂಡರೆ ಅವರು ಅಭಿವೃದ್ಧಿ ಹೊಂದಲಿಕ್ಕೆ ಸಾಧ್ಯ ಎಂದೂ ಬ್ರಿಟಿಷರು ಒಪ್ಪಿಕೊಂಡರು. ಆಗ ಸೈಮನ್ ಕಮಿಷನ್ ಆಯೋಗವೂ ಕೂಡ ಇದನ್ನೆ ಸಾರಿತು ಆದರೆ ಅದು ಜಾರಿಯಾಗುವುದು ಅಷ್ಟು ಸರಳವಾಗಿರಲಿಲ್ಲ.
ಏಕೀಕರಣದ ಕಹಳೆಯನ್ನು ಆಕಾಶದೆತ್ತರಕ್ಕೆ ಮುಟ್ಟುವಂತೆ ಮಾಡಿದವರು ಕರ್ನಾಟಕ ವಿದ್ಯಾವರ್ಧಕ ಸಂಘದ ಆಲೂರು ವೆಂಕಟರಾಯರು, ಕೃಷ್ಣರಾಯರು, ಕಡಪ ರಾಘವೇಂದ್ರರಾಯರು ಸೇರಿದಂತೆ ಅನೇಕರು ಇದನ್ನು ಮೊಳಗಿಸಿದರು. ಕನ್ನಡ ನುಡಿಯ ಬಗ್ಗೆ, ಇತಿಯಾಸದ ಎಲ್ಲ ಗ್ರಂಥಗಳನ್ನು ಸಂಗ್ರಹಿಸಿದರು. ಅದಾದ ನಂತರ ಕನ್ನಡ ಸಾಹಿತ್ಯ ಪರಿಷತ್ ಸ್ಥಾಪಿತವಾಯಿತು. ತದನಂತರ ೧೯೧೫-೧೬ ರಲ್ಲಿ ಕರ್ನಾಟಕ ಸಭಾ ಹಾಗೂ ಕಸಾಪ ಏಕೀಕರಣದ ಮುಂದಾಳತ್ವ ವಹಿಸುತ್ತದೆ. ಅಲ್ಲದೇ ಹೈದ್ರಾಬಾದ್ ಕರ್ನಾಟಕ ಪ್ರದೇಶ ಸ್ವಾತಂತ್ರ್ಯಾನಂತರ ಹೈದ್ರಾಬಾದ್ ನಿಜಾಮನ ವಿರುದ್ಧ ಹೋರಾಟ ನಂತರ ಏಕೀಕರಣಕಕ್ಕೂ ಹೋರಾಡುವುದು ಅನಿವಾಂiiವಾಗಿತ್ತು. ಕರ್ನಾಟಕ ಏಕೀಕರಣದಲ್ಲಿ ಈ ಭಾಗದ ಕರ್ನಾಟಕದ ಹುಲಿಯೆಂದೇ ಪ್ರಸಿದ್ಧವಾಗಿದ್ದ ಶಿವಮೂರ್ತಿ ಸ್ವಾಮಿ ಅಳವಂಡಿಯವರು ಕೇಂದ್ರ ಸರ್ಕಾರದ ನಿರ್ಧಾರವನ್ನು ಖಂಡಿಸಿ ಅಖಂಡ ಕರ್ನಾಟಕ ನಿರ್ಮಾಣ ಪರಿಷತ್ ಎಂಬ ಉಗ್ರವಾದ ಸಂಘಟನೆಯನ್ನು ಸ್ಥಾಪಿಸಿ ಏಕೀಕರಣದಲ್ಲಿ ಉತ್ತಮ ಬಲಿಷ್ಠ ಸಂಘವಾಗಿ ಅದನ್ನು ಸಾಧಿಸುತ್ತಾರೆ. ೧೯೨೦ ರಲ್ಲಿ ದೇಶವನ್ನು ಪ್ರತಿನಿಧಿಸುತ್ತಿದ್ದ ಕಾಂಗ್ರೆಸ್, ಕನ್ನಡ ಭಾಗದ ಒಕ್ಕೂಟಕ್ಕೆ ಜಂಟಿಯಾಗಿ ಹೋರಾಟವೂ ನಡೆಯಿತು. ಆಂಧ್ರಪ್ರದೇಶ, ಕೇರಳ ಹಾಗೂ ಕರ್ನಾಟಕ ಸರ್ಕಾರಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿತ್ತು. ಹೋರಾಟವೂ ತೀವ್ರಗೊಳ್ಳುತ್ತಿದ್ದಂತೆ ಕೇಂದ್ರ ಸರ್ಕಾರವು ಒಂದು ಸಮಿತಿಯನ್ನು ಮಾಡಿದಾಗ ಅದು ಕರ್ನಾಟಕ ಬೇಡ ಆಂಧ್ರಪ್ರದೇಶವನ್ನು ಮಾಡಲು ನಿರ್ಧಾರ ಕೈಗೊಂಡಾಗ ಇಲ್ಲಿಯೂ ಕೂಡ ಅಮರಣಾಂತ ಉಪವಾಸ ಸತ್ಯಾಗ್ರಹ ನಡೆಯಿತು. ಹುಬ್ಬಳ್ಳಿಯಲ್ಲಿ ೧೯೫೩ರಲ್ಲಿ ಕೆಪಿಸಿಸಿ ಸಭೆ ನಡೆದಾಗ ದೊಡ್ಡ ಗಲಾಟೆಯಾಗಿ ಜೀಪಿಗೆ ಬೆಂಕಿ, ಪಿಠೋಪಕರಣಗಳಿಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಯಿತು. ಇದನ್ನರಿತ ಆಗಿದ ಮುಖ್ಯಮಂತ್ರಿಗಳಾಗಿದ್ದ ಎಸ್. ನಿಜಲಿಂಗಪ್ಪನವರೇ ಖುದ್ದಾಗಿ ನೆಹರು ರವರನ್ನು ಭೇಟಿಯಾಗಿ ಅವರನ್ನು ಮನವೊಲಿಸಿ ೧೯೪೮ ರಲ್ಲಿ ಧಾರ್ ಆಯೋಗ ರಚನೆ ಮಾಡಿ ಅದು ಪ್ರಾಂತಗಳನ್ನು ಭಾಷಾವಾರು ವಿಭಾಗಿಸಬಾರದು ಎಂದು ತಿಳಿಸುತ್ತೆ, ತದನಂತರ ೧೯೫೨ ರಲ್ಲಿ ಫಜಲ್ ಅಲಿ ಸಮಿತಿಯ ನಿರ್ಧಾರದಂತೆ ನವೆಂಬರ್ ೧ ರಂದು ಕರ್ನಾಟಕ ಏಕೀಕರಣವಾಯಿತು ಎಂದು ಮಕ್ಕಳಿಗೆ ತಿಳಿಸಿದರು.

Please follow and like us:

Related posts

Leave a Comment