ಕರ್ನಾಟಕ ಆರ್ಯವೈಶ್ಯ ಮಹಾಸಭಾದಿಂದ ಪ್ರತಿಭಾ ಪುರಸ್ಕಾರಕ್ಕಾಗಿ ಅರ್ಜಿ ಆಹ್ವಾನ

ಕೊಪ್ಪಳ : ಕರ್ನಾಟಕ ಆರ್ಯ ವೈಶ್ಯ ಮಹಾಸಭೆ, ಬೆಮ್‌ಗಳೂರು ಇವರು ಆಯೋಜಿಸಿರುವ ರಾಜ್ಯಮಟ್ಟದ ಪ್ರತಿಭಾ ಪುರಸ್ಕಾರದ ಕಾರ್ಯಕ್ರಮವು ದಿನಾಂಕ : ೧೬-೧೦-೨೦೧೬ ರಂದು ತುಮಕೂರು ಜಿಲ್ಲೆಯ ತಿಪಟೂರಿನಲ್ಲಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯದ ಪ್ರತಿಭಾವಂತ ಆರ್ಯ ವೈಶ್ಯ ವಿದ್ಯಾರ್ಥಿಗಳನ್ನು ಪುರಸ್ಕರಿಸಿ ಗೌರವಿಸಲಾಗುವುದು.

೨೦೧೫-೧೬ ರ ಶೈಕ್ಷಣಿಕ ವರ್ಷದಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಮಾತ್ರ ಈ ಪುರಸ್ಕಾರ ಅನ್ವಯವಾಗುತ್ತದೆ. ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ಯಲ್ಲಿ ಶೇ ೯೦% ಕ್ಕಿಂತಲೂ ಹೆಚ್ಚು ಅಂಕ ಪಡೆದವರು ಮತ್ತು ಅಂತಿಮ ಡಿಗ್ರಿ, ಇಂಜಿನೀಯರಿಂಗ್, ವೈದ್ಯಕೀಯ, ಎಮ್.ಬಿ.ಎ, ಸಿ.ಎ, ಐ.ಸಿ.ಡಬ್ಲ್ಯೂ.ಎ. ಹಾಗೂ ಇತ್ಯಾದಿ ಪರೀಕ್ಷೆಗಳಲ್ಲಿ ಡಿಸ್ಟಿಕ್ಷನ್ ಪಡೆದವರು ಸಹ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಕೊಪ್ಪಳ ಜಿಲ್ಲೆಯ ಅರ್ಹ ಆರ್ಯ ವೈಶ್ಯ ಸಮಾಜದ ವಿದ್ಯಾರ್ಥಿಗಳು ಪ್ರತಿಭಾ ಪುರಸ್ಕಾರಕ್ಕಾಗಿ ಅರ್ಜಿ ಸಲ್ಲಿಸಲು ದಿನಾಂಕ: ೧೦-೦೯-೨೦೧೬ ಕೊನೆಯ ದಿನವಾಗಿರುತ್ತದೆ. ನಿಗದಿತ ಅರ್ಜಿ ನಮೂನೆ ಮತ್ತು ಇನ್ನಿತರ ವಿಷಯಗಳ ಹೆಚ್ಚಿನ ಮಾಹಿತಿಗಾಗಿ ಕೊಪ್ಪಳ ಜಿಲ್ಲಾ ಸಮಿತಿಯ ಅಧ್ಯಕ್ಷರಾದ  ಪಿ. ದೇವೇಂದ್ರಪ್ಪ ಹಾಗೂ ಕೊಪ್ಪಳ ಜಿಲ್ಲೆಯ ಕರ್ನಾಟಕ ಆರ್ಯವೈಶ್ಯ ಮಹಾಸಭೆಯ ನಿರ್ದೇಶಕರುಗಳಾದ  ರಾಘವೇಂದ್ರ ಬಿ. ಪಾನಘಂಟಿ, ಶ್ರೀನಿವಾಸ ಗುಪ್ತಾ,  ವಿರೇಶಪ್ಪ ಯಾಡ್ಕಿ,  ಶ್ರೀರಂಗ ದರೋಜಿ ಮತ್ತು  ಎಸ್. ರಾಘವೇಂದ್ರ ಶೆಟ್ಟಿ ಇವರನ್ನು ಸಂಪರ್ಕಿಸಬೇಕಾಗಿ ಕೊಪ್ಪಳ ಜಿಲ್ಲಾ ಸಮಿತಿಯ ಪ್ರಧಾನ ಕಾರ್ಯದರ್ಶಿಯಾದ  ಡಿ. ಗುರುರಾಜ ಇವರು ಕೋರಿದ್ದಾರೆ.

Leave a Reply