You are here
Home > Koppal News-1 > ಕರ್ನಾಟಕಕ್ಕೆ ಚಿನ್ನದ ಪದಕ ತಂದು ಕೊಟ್ಟ ಕೊಪ್ಪಳದ ಚಾಂದ್ ಪಾಶಾ

ಕರ್ನಾಟಕಕ್ಕೆ ಚಿನ್ನದ ಪದಕ ತಂದು ಕೊಟ್ಟ ಕೊಪ್ಪಳದ ಚಾಂದ್ ಪಾಶಾ

chand-pasha_gold_medalist chand-pc        ಮೈಸೂರಿನಲ್ಲಿ ನಡೆಯುತ್ತಿರುವ ೬೦ ನೇ ಅಖಿಲ ಭಾರತ ಪೊಲೀಸ್ ಕರ್ತವ್ಯ ಕೂಟದಲ್ಲಿ ಪೊಲೀಸ್ ಫೊಟೋಗ್ರಫಿ ವಿಭಾಗದಲ್ಲಿ ಕರ್ನಾಟಕ ರಾಜ್ಯಕ್ಕೆ ಬಂಗಾರದ ಪದಕ ಲಭಿಸಿದ್ದು, ಕೊಪ್ಪಳ ಜಿಲ್ಲಾ ಪೊಲೀಸ್ ಇಲಾಖೆಯ ಕಾನ್ಸ್‌ಟೆಬಲ್ ಚಾಂದ್ ಪಾಶಾ ಅವರು ಬಂಗಾರದ ಪದಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಮೈಸೂರಿನಲ್ಲಿ ಡಿ. ೧೯ ರಿಂದ ೨೩ ರವರೆಗೆ ೬೦ ನೇ ಅಕಿಲ ಭಾರತ ಪೊಲೀಸ್ ಕರ್ತವ್ಯ ಕೂಟ ಜರುಗುತ್ತಿದ್ದು, ಪೊಲೀಸ್ ಫೋಟೋಗ್ರಫಿ ವಿಭಾಗದಲ್ಲಿ ಕರ್ನಾಟಕ ರಾಜ್ಯಕ್ಕೆ ಬಂಗಾರದ ಪದಕ ಲಭಿಸಿದೆ.  ಈ ಕರ್ತವ್ಯಕೂಟದಲ್ಲಿ ಕರ್ನಾಟಕಕ್ಕೆ ಸಿಕ್ಕ ಮೊದಲ  ಬಂಗಾರದ ಪದಕ ಇದು.

ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಚಾಂದ್ ಪಾಶಾ ಅವರು ಪೊಲೀಸ್ ಕರ್ತವ್ಯದಲ್ಲಿ ಉತ್ತಮ ಛಾಯಾಗ್ರಹಣ ಸೇವೆ ಸಲ್ಲಿಸಿರುವುದನ್ನು ಪರಿಗಣಿಸಿ, ಈ ಪದಕ ಹಾಗೂ ಪ್ರಶಸ್ತಿ ನೀಡಲಾಗಿದೆ. ಅಖಿಲ ಭಾರತ ಪೊಲೀಸ್ ಕರ್ತವ್ಯ ಕೂಟದಲ್ಲಿ ಕಲ್ಕತ್ತಾದ ರೈಲ್ವೆ ಪೊಲೀಸ್‌ಗೆ ಬೆಳ್ಳಿ ಪದಕದ ಪ್ರಶಸ್ತಿ ಲಭ್ಯವಾದರೆ, ಕಂಚಿನ ಪದಕ ಪ್ರಶಸ್ತಿ ಪಂಜಾಬ್ ರಾಜ್ಯ ಪೊಲೀಸ್ ಇಲಾಖೆಯ ಪಾಲಾಗಿದೆ. ಕರ್ನಾಟಕದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಭಾಸ್ಕರರಾವ್ ಅವರು ಬಂಗಾರದ ಪದಕವನ್ನು ಚಾಂದ್‌ಪಾಶಾ ಅವರಿಗೆ ಪ್ರದಾನ ಮಾಡಿದರು. ಬೆಂಗಳೂರಿನ ಬೆರಳಚ್ಚು ತಜ್ಞ ವಿಭಾಗದ ಐಪಿಸಿ ಡೈರೆಕ್ಟರ್ ರೋಹಿಣಿ ಕಟೋಚ್, ಡಿಸಿಆರ್‌ಇ ಪೊಲೀಸ್ ಅಧೀಕ್ಷಕರಾದ ಸಾರಾ ಫಾತಿಮಾ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Leave a Reply

Top