ಕರವೇ ಕಾರ್ಯಕರ್ತರ ಬಂಧನ ಬಿಡುಗಡೆ

1 2 3ಸಂಸದ ಕರಡಿಯವರ ಮನೆಗೆ ಮುತ್ತಿಗೆ ಹಾಕಿ ರಾಜಿನಾಮೆಗೆ ಅಗ್ರಹ
ಕರವೇ ಕಾರ್ಯಕರ್ತರ ಬಂಧಂನ ಬಿಡುಗಡೆ
ಕೊಪ್ಪಳ :
ಮಹದಾಯಿ ನ್ಯಾಯಧಿಕರಣ ತೀರ್ಪು ವಿರೋಧಿಸಿ ಕೊಪ್ಪಳ ಅಶೋಕ ವೃತ್ತದಲ್ಲಿ ಕರವೇ ಯುವಸೈನ್ಯ ಕಾರ್ಯಕರ್ತರು ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರದ ವಿರೋದ್ಧ ಘೋಷನೆಗಳನ್ನು ಕೂಗುತ್ತಾ ಟೈಯರಿಗೆ ಬೆಂಕಿ ಹಚ್ಚಿ ಅಕ್ರೋಶ ವ್ಯಕ್ತ ಪಡಿಸಿದರು.
ಹೋರಾಟವನ್ನು ಉದ್ದೇಶಿಸಿ ಮಾತನಾಡಿದ ರಾಜ್ಯಧ್ಯಕ್ಷ ಕೆ.ಎಸ್.ಕೊಡತಗೇರಿ ಮಾತನಾಡಿ ಕೇಂದ್ರ ಸರಕಾರ ಉತ್ತರ ಕರ್ನಾಟಕಕ್ಕೆ ಮಲತಾಯಿ ಧೋರಣೆ ತೋರುತಿದ್ದು ಈ ಭಾಗದ ಜನತ ಭಾವನೆಗಳನ್ನು ಅರ್ಥ ಮಾಡಿಕೊಳ್ಳುವಲ್ಲಿ ವಿಫಲವಾಗಿದೆ ನರಗುಂದ ಮತ್ತು ನವಲಗುಂದದಲ್ಲಿ ವರ್ಷಾನುಗಟ್ಟಲೆ ಹೋರಾಟ ಮಾಡಿದರು ಯಾವುದೇ ಪ್ರಯೋಜನೆ ಇಲ್ಲದಾಗಿದೆ ನ್ಯಾಯಧಿಕರಣಕ್ಕು ಕಣ್ಣು ಇದ್ದು ಕುರಾಡಗಿದೆ ಆದ್ದರಿಂದ ರಾಜ್ಯದ ಎಲ್ಲ ಸಂಸದರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ಸಂಸದ ಕರಡಿ ಸಂಗಣ್ಣನವರ ಮನೆಗೆ ಮುತ್ತಿಗೆ ಹಾಕಿ ರಾಜಿನಾಮೆಗೆ ಅಗ್ರಹ :
ನಂತರ ಕರವೇ ಯುವಸೈನ್ಯ ಕಾರ್ಯಕರ್ತರು ಸಂಸದ ಕರಡಿ ಸಂಗಣ್ಣನವರ ಮನೆಗೆ ಮುತ್ತಿಗೆ ಹಾಕಿ ರಾಜ್ಯದ ಜನರ ಸಮಸ್ಯೆಗೆ ಕೇಂದ್ರ ಸರಕಾರ ಸರಿಯಾಗಿ ಸ್ಪಂದಿಸುತ್ತಿಲ್ಲ ಆದ್ದರಿಂದ ಕೂಡಲೆ ತಾವು ತಮ್ಮ ಸಂಸದ ಸ್ಥಾನಕ್ಕೆ ರಾಜಿನಾಮೆ ನೀಡಿ ರೈತರ ಪರ ಹೋರಾಟಕ್ಕೆ ಧುಮಕಬೇಕು ಎಂದರು ಸಂಸದರು ನಾವು ಈಗಾಗಲೇ ಪ್ರಧಾನಿಯವರ ಜೋತೆ ನಾವೇಲ್ಲ ರಾಜ್ಯದ ಸಂಸದರು ಕೂಡಿ ಮಾತನಾಡಿದ್ದೇವೆ ನಮ್ಮ ರಾಜ್ಯಕ್ಕೆ ಅನ್ಯಾಯವಾದರೆ ನಾನು ಖಂಡಿತ ರಾಜಿನಾಮೆ ನೀಡುತ್ತೇವೆ ಎಂದರು.
ಜಿಲ್ಲಾಧಿಕಾರಿಗಳ ಕಚೇರಿ ಮುತ್ತಿಗೆ ಹಾಕಲು ಯತ್ನ ಬಂಧನ ಬಿಡುಗಡೆ :
ನಂತರ ಜಿಲ್ಲಾಡಳಿತ ಭವನದಲ್ಲಿ ಪ್ರಗತಿ ಪರಿಶಿಲನಾ ಸಭೆ ನೇಡಸುತ್ತಿರುವ ಉಸ್ತುವಾರಿ ಸಚಿವ ಬಸವರಾಜ ರಾಯರಡ್ಡಿ ಹಾಗೂ ಕಂದಾಯ ಸಚಿವರು ಆದ ಕಾಗೋಡ ತಿಮ್ಮಪ್ಪ ಅವರನ್ನು ಘೇರಾವ ಹಾಕಲು ಪ್ರಯತ್ನಸಿದ ಕಾರ್ಯಕರ್ತರನ್ನು ಪೋಲಿಸರು ಬಂಧಿಸಿ ಬಿಡುಗಡೆ ಮಾಡಿದರು.
ಹೋರಾಟದಲ್ಲಿ ಕರವೇ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಮಚಂದ್ರ ಗಾರವಾಡ,ಯಲಬುರ್ಗಾ ತಾಲೂಕ ಅಧ್ಯಕ್ಷ ನಾಗರಾಜ ಹಾಲಳ್ಳಿ,ಕುಷ್ಠಗಿ ತಾಲೂಕ ಅಧ್ಯಕ್ಷ ನಾಗರಾಜ ಉಪ್ಪಾರ,ಕೊಪ್ಪಳ ತಾಲೂಕ ಅಧ್ಯಕ್ಷ ಚಂದ್ರು ಚಲವಾದಿ,ಗಂಗಾವತಿ ತಾಲೂಕ ಅಧ್ಯಕ್ಷ ಅನಿಸ್ ಮತ್ತು ಜಿಲ್ಲಾ ಉಪಾಧ್ಯಕ್ಷ ಜಗದೀಶ ಹೋಗಾರ,ಕೃಷ್ಣಾ ಅಬ್ಬಿಗೇರಿ,ಮರಿಸ್ವಾಮಿ ಮಣ್ಣಿನವರ,ಮರಿಸ್ವಾಮಿ,ಸೇರಿದಂತೆ ಹೋರಾಟದಲ್ಲಿ ಭಾಗವಹಿಸಿದ್ದರು.

Please follow and like us:
error