ಕನ್ನಡ ಶಾಲೆ ಹೆಚ್ಚು ಹೆಚ್ಚು ಆರಂಭಿಸಲಿ ಸ್ವಾಮೀಜಿ ಸಲಹೆ

ಕೊಪ್ಪಳ-05- ರಾಜ್ಯದಲ್ಲಿ ಆಂಗ್ಲ ಭಾಷೆಗೆ ಮಾರು ಹೋಗಿ ಪಾಲಕರು ಮಕ್ಕಳಿಗೆ ಕನ್ನಡ ಕಲಿಸುವಲ್ಲಿ ಹಿಂದೇಟು ಹಾಕುತ್ತಿದ್ದಾರೆ. ಕನ್ನಡಕ್ಕೆ ಪುರಾತನ ಕಾಲದ ಇತಿಹಾಸವಿದೆ. ಆಗಾಗಿ ಎಲ್ಲೇಡೆ ಕನ್ನಡ ಶಾಲೆಗಳನ್ನು ಹೆಚ್ಚು ಹೆಚ್ಚು ಆರಂಭಿಸುವಂತೆ ಮನಗುಂಡಿಯ ಗುರುಬಸವ ಮಹಾಮನೆಯ ಶ್ರೀಬಸವಾನಂದ ಸ್ವಾಮೀಜಿ ಹೇಳಿದರು.  ನಗರದ ಸಾಹಿತ್ಯ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ತಾಲೂಕು ಘಟಕ ಆಯೋಜಿಸಿದ್ದ ನೂತನ ಪದಧಿಕಾರಿಗಳ ಪದಗ್ರಹಣ ಹಾಗೂ ಕನ್ನಡ ಸಾಹಿತ್ಯ ಪರಿಷDSC_0229ತ್ ೧೦೧ ನೇ ಸಂಸ್ಥಾಪನಾ ದಿನಾಚರಣೆಯ ಸಾನಿಧ್ಯ ವಹಿಸಿ ಗುರುವಾರ ಮಾತನಾಡಿದರು.
ಆಂಗ್ಲ ಭಾಷೆ ಅನಿವಾರ್ಯ ಮಾಡಿಕೊಂಡಿದ್ದು, ಪಾಲಕರು ಮಕ್ಕಳ ಜತೆ ಮಾತೃ ಭಾಷೆ ಕನ್ನಡದಲ್ಲಿ ಮಾತನಾಡಿ, ಕನ್ನಡ ಬಗ್ಗೆ ಜ್ಞಾನ ತುಂಬುವ ಕೆಲಸ ಮಾಡಬೇಕು. ಇತ್ತೀಚೆನ ಮಕ್ಕಳಿಗೆ ಕನ್ನಡ ಹಾಗೂ ಆಂಗ್ಲ ಭಾಷೆಯ ವ್ಯಾಕರಣ ಬರುವುದಿಲ್ಲ. ಇನ್ನು ೧ ರಿಂದ ೮ ತರಗತಿಯವರೆ ಕಡ್ಡಾಯ ಕನ್ನಡ ಶಿಕ್ಷಣವಾಗಬೇಕು. ಈಗಾಗಲೇ ಸಂಸ್ಕೃತ ಭಾಷೆಯನ್ನು ಮೂಲೆ ಸೇರಿಸಲಾಗಿದೆ. ಆದರೆ, ಕನ್ನಡ ಉಳಿದಿದ್ದು, ವಚನ ಸಾಹಿತ್ಯ ಹಾಗೂ ದಾಸ ಸಾಹಿತ್ಯದಿಂದ ಮಾತ್ರವಾಗಿದೆ. ಇದರಿಂದ ಜಗತ್ತು ಈಗಾಗಲೇ ಬಸವತತ್ವವನ್ನು ಅಪ್ಪಿಕೊಳ್ಳುತ್ತಿದೆ. ಕನ್ನಡಕ್ಕೆ ಹೆಚ್ಚು ಭವಿಷ್ಯವಿದೆ. ಇನ್ನೂ ಒತ್ತಾಯ ಪೂರ್ವಕವಾಗಿ ಸಾಹಿತ್ಯ ರಚನೆಗೂ ಸಹಜವಾಗಿ ಬರೆದ ಸಾಹಿತ್ಯ ರುಚಿಯಾಗಿರುತ್ತದೆ. ಇದರಿಂದ ಹೆಚ್ಚು ಹೆಚ್ಚು ಕನ್ನಡ ಸಾಹಿತ್ಯ ಗ್ರಂಥಗಳು ಹೊರಗಲಿ ಎಂದರು.
ಬೀಳಿಗಿಯ ಸಾಹಿತಿ ಸಿದ್ದಪ್ಪ ಬಿದರಿ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಜಾನಪದದಿಂದಲೇ ಸಾಹಿತ್ಯ ರಚನೆಗೊಂಡಿವೆ. ಜಾನಪದ ಸಾಹಿತ್ಯದ ಬೇರು ಹಿಡಿದುಕೊಂಡು ಸಾಹಿತ್ಯ ರಚನೆಯಾಗುತ್ತವೆ. ಜಾನಪದಕ್ಕೆ ಅಷ್ಟು ಶಕ್ತಿ ಇದೆ. ಕನ್ನಡದ ತೇರು ಎಳಿಯುವ ಕೆಲಸ ಮಾಡಬೇಕು. ಕನ್ನಡಕ್ಕೆ ಹೆಚ್ಚು ಆದ್ಯತೆ ನೀಡಬೇಕು. ಅಲ್ಲದೆ ಇತ್ತೀಚೆನ ದಿನಗಳಲ್ಲಿ ಕೇವಲ ಜಾತಿಯಿಂದ ಜನರು ಹೊರಟಿದ್ದಾರೆ. ಜಾತಿ ಜಾತಿ ಕೂಡಿದರೆ ಜಾತ್ರೆಯಾಗುತ್ತದೆ. ಒಂದೇ ಜಾತಿ ಸೇರಿದರೆ ಜಗಳವಾಗುತ್ತದೆ. ದೊಡ್ಡವರು ಚಿಕ್ಕವರು ಎನ್ನದೇ ಕನ್ನಡ ತೇರು ಎಳೆಯಬೇಕು ಎಂದರು.  ಸಾಹಿತಿ ವಿಠ್ಠಪ್ಪ ಗೋರಂಟ್ಲಿ ಅವರು ಶಾಂತಾದೇವಿ ಹಿರೇಮಠ ರಚಿಸಿದ ಮಗಳೇ ಮಗಳೆ ಸಂಕಲನದ ಬಗ್ಗೆ ಮಾತನಾಡಿದರು.  ನಿಕಟ ಪೂರ್ವ ಅಧ್ಯಕ್ಷ ವೀರಪ್ಪ ನಿಂಗೋಜಿ ಮಾತನಾಡಿದರು.  ಕಸಾಪ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಶೇಖರಗೌಡ ಪಾಲಿಪಾಟೀಲ್ ಅಧ್ಯಕ್ಷತೆ ವಹಿಸಿದರು.  ಜಿಲ್ಲಾ ಕಸಾಪ ಅಧ್ಯಕ್ಷ ರಾಜಶೇಖರ ಅಂಗಡಿ ಅವರಿಗೆ ನಿಕಟ ಪೂರ್ವ ಅಧ್ಯಕ್ಷ ವೀರಪ್ಪ ನಿಂಗೋಜಿ ಅಧಿಕಾರ ಹಸ್ತಾಂತರಿಸಿದರು.  ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ರಾಘವೇಂದ್ರ ಪಾನಘಂಟಿ, ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ನಾಗರಾಜ ಜುಮ್ಮಣ್ಣನವರ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶರಣೇಗೌಡ ಪೊಲೀಸ್‌ಪಾಟೀಲ್, ಗೌರವಕಾರ್ಯದರ್ಶಿಗಳಾದ ಈಶಪ್ಪ ಮಳಗಿ, ಬಸವರೆಡ್ಡಿ ಆಡೂರು, ಗೌರವ ಕೋಶಾಧ್ಯಕ್ಷ ಸಂತೋಷ ದೇಶಪಾಂಡೆ, ತಾಲೂಕು ಅಧ್ಯಕ್ಷರಾದ ಗಿರೀಶ ಪಾನಘಂಟಿ, ಎಸ್.ಬಿ.ಗೊಂಡಬಾಳ, ಲಕ್ಷ್ಮಣ ಹಿರೇಮನಿ, ನಟರಾಜ ಸೋನಾರ, ಮಹೆಬೂಬ್ ಹುಸೇನ್, ಮುಖಂಡರಾದ ಸುರೇಶ್ ಸಿಂಗನಾಳ, ತೋಟಪ್ಪ ಕಾಮನೂರು ಇತರರು ಇದ್ದರು.  ಗೌರವ ಕೋಶಾಧ್ಯಕ್ಷ ಸಂತೋಷ ದೇಶಪಾಂಡೆ ಸ್ವಾಗತಿಸಿದರು. ಸಂಸ್ಕೃತಿ ಸಮಿತಿ ಸದಸ್ಯ ಬಸವರಾಜ ಕರುಗಲ್ ನಿರೂಪಿಸಿದರು. ಸೋಮರೆಡ್ಡಿ ಅಳವಂಡಿ ಉದ್ಘಾಟಕರ ಪರಿಚಯಿಸಿದರು.

Leave a Reply