ಕಡ್ಡಾಯವಾಗಿ ಬೆಳೆವಿಮೆ ಮಾಡಿಸಿ ಶಾಸಕ – ಕೆ.ರಾಘವೇಂದ್ರ ಹಿಟ್ನಾಳ

koppal_mla koppal_mla_worksಕೊಪ್ಪಳ:ಡಿ-೨೩, ಗಿಣಿಗೇರಿ ಜಿಲ್ಲಾ ಪಂಚಾಯತಿ ವ್ಯಾಪ್ತಿಯ ಗ್ರಾಮಗಳಾದ ಹಳೆಕನಕಾಪೂರ, ಹೊಸ ಕನಕಾಪೂರ, ಕನಕಾಪೂರ ತಾಂಡಾ, ಗಿಣಗೇರಿ ಹಾಗೂ ಗುಡದಳ್ಳಿ ಗ್ರಾಮಗಳಲ್ಲಿ ಹೆಚ್.ಕೆ.ಆರ್.ಡಿ.ಬಿ., ಲೋಕೋಪಯೋಗಿ ಇಲಾಖೆ ಹಾಗೂ ಕರ್ನಾಟಕ ನೀರಾವರಿ ಯೋಜನೆಗಳ ಅಡಿಯಲ್ಲಿ ಅಂದಾಜು ಮೊತ್ತ ರೂ.೨.೫ ಕೋಟಿಯ ಸಿ.ಸಿ. ರಸ್ತೆ, ಶಾಲಾ ಕೊಠಡಿ ಹಾಗೂ ಸಮುದಾಯ ಭವನಗಳ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಅವರು ಕ್ಷೇತ್ರದಲ್ಲಿ ಭೀಕರ ಬರಗಾಲ ಆವರಿಸಿದ್ದು ಕ್ಷೇತ್ರದ ಎಲ್ಲಾ ರೈತರು ಮುಂಗಾರು ಮತ್ತು ಹಿಂಗಾರು ಬೆಳೆಯ ಕಡ್ಡಾಯವಾಗಿ ವಿಮೆ ಮಾಡಿಸಬೇಕು. ರಾಜ್ಯ ಸರಕಾರವು ಇನ್‌ಪುಟ್ ಸಬ್ಸಿಡಿ ಮುಖಾಂತರ ರೈತರ ಖಾತೆಗೆ ನೇರವಾಗಿ ಹಣ ಸಂದಾಯ ಮಾಡುತ್ತಿದ್ದು ಪ್ರತಿಯೊಬ್ಬ ರೈತರು ಈ ಯೋಜನೆಯ ಸದುಪಯೋಗ ಮಾಡಿಕೊಳ್ಳಬೇಕು. ಕಾಂಗ್ರೆಸ್ ಪಕ್ಷದ ಯು.ಪಿ.ಎ. ಸರಕಾರವು ದೇಶದ ರೈತರ ೭೦ ಲಕ್ಷ ಕೋಟಿ ರೈತರ ಸಾಲವನ್ನು ಮನ್ನಾ ಮಾಡಿದ್ದು ಆದರೆ ಪ್ರಧಾನಿ ನರೇಂದ್ರ ಮೋದಿಯವರು ರೈತರ ಸಾಲ ಮನ್ನಾಕ್ಕೆ ಕಿಂಚತ್ತು ಕಾಳಜಿ ತೋರುತ್ತಿಲ್ಲ. ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಕೇಂದ್ರ ಸರಕಾರವು ಶೇಕಡಾ ೫೦% ರಷ್ಟು ರೈತರ ಸಾಲ ಮನ್ನಾ ಮಾಡಲು ಸಿದ್ದವಾದರೆ ಉಳಿದ ಸಾಲವನ್ನು ನಾವು ಮನ್ನಾ ಮಾಡಲು ಸಿದ್ದರಿದ್ದೇವೆಂದು ಹೇಳುತ್ತಿದ್ದರೂ ಅವರಿಗೆ ರೈತರ ಪರ ಯಾವುದೇ ಚಿಂತೆಯಿಲ್ಲ. ಕೇವಲ ಕಾಳ ಧನಿಕರಿಗಾಗಿ ದೇಶದ ಬಡ ಜನರ ರೈತರ, ವ್ಯಾಪಾರಿಗಳ, ಮದ್ಯಮ ವರ್ಗದ ಜನರ ಜೊತೆಗೆ ಚಲ್ಲಾಟವಾಡುತ್ತಿರುವ ಕೇಂದ್ರ ಸರಕಾರವು ಮೂರು ವರ್ಷ ಗತಿಸಿದರೂ ಇವರ ಅಚ್ಚೇದಿನ್ ದೇಶಕ್ಕೆ ಇನ್ನೂ ಬರುತ್ತಿಲ್ಲ. ಪ್ರಧಾನಿಯ ಕೈಗೊಂಬೆಯಾಗಿರುವ ಆರ್.ಬಿ.ಐ. ದೇಶದ ಹಣಕಾಸು ವ್ಯವಸ್ಥೆಯಲ್ಲಿ ಪ್ರತಿನಿತ್ಯ ಹೊಸ ಕಾನೂನು ತರುತ್ತಿದ್ದು ಸ್ವತಃ ಬ್ಯಾಂಕ್ ಅಧಿಕಾರಿಗಳೇ ಬರುವ ೨೮ಕ್ಕೆ ಪ್ರತಿಭಟನೆ ಹಮ್ಮಿಕೊಂಡಿರುವ ಮತ್ತೊಂದು ಉದಾಹರಣೆ ಈ ದೇಶದಲ್ಲಿ ಯಾವತ್ತು ಕಂಡುಬಂದಿಲ್ಲ. ಡಿಜಿಟಲ್ ಇಂಡಿಯಾ, ಮೇಕ್ ಇನ್ ಇಂಡಿಯಾ ಹೇಳುವ ಪ್ರಧಾನಿಯವರಿಗೆ ದೇಶದ ರೈತರಾಗಲಿ, ಬಡವರಾಗಲಿ ಕಾಣುವುದು ಯಾವಾಗ ಎಂದು ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಹರಿಹಾಯ್ದರು.

ಈ ಸಂದರ್ಭದಲ್ಲಿ ಜಿ.ಪಂ.ಅಧ್ಯಕ್ಷ ಎಸ್.ಬಿ.ನಾಗರಳ್ಳಿ, ತಾ.ಪಂ.ಅಧ್ಯಕ್ಷ ಬಾಲಚಂದರ್, ಜಿ.ಪಂ.ಸದಸ್ಯರಾದ ಕೆ.ರಾಜಶೇಖರ ಹಿಟ್ನಾಳ, ಗೂಳಪ್ಪ ಹಲಗೇರಿ, ಸುರೇಶ ಭೂಮರಡ್ಡಿ, ಪಿ.ಎಲ್.ಡಿ. ಬ್ಯಾಂಕ್ ಅಧ್ಯಕ್ಷ ಕರಿಯಪ್ಪ ಮೇಟಿ, ಮಾರುತೆಪ್ಪ ಹಲಗೇರಿ, ನಾಗರಾಜ ಚಳ್ಳೊಳ್ಳಿ, ಎ.ವಿ.ರವಿ, ಬಸವರಾಜ ಆಗೋಲಿ, ರವಿಕುಮಾರ ಹಲಗೇರಿ, ಯಮನೂರಪ್ಪ ಕಟಿಗಿ, ಹನುಮಂತಪ್ಪ ಅಬ್ಬಿಗೇರಿ, ಪಂಪಣ್ಣ, ದೊಡ್ಡಬಸಪ್ಪ ಗುಡದಳ್ಳಿ, ಶಂಕ್ರಪ್ಪ, ದಾದಾಪೀರ, ಉಮೇಶ ಪೂಜಾರ, ವಿಜಯ ಅಗಸಿಮನಿ, ಮಾರುತಿ ಪೂಜಾರ, ನಾಗರಾಜ ಕುರಟ್ಟಿ, ಯಂಕಪ್ಪ ಬನ್ನಿಗಿಡದ, ವಕ್ತಾರ ಅಕ್ಬರ್‌ಪಾಷಾ ಪಲ್ಟನ್ ಉಪಸ್ಥಿತರಿದ್ದರು.

Please follow and like us:
error