ಕಜಾಪ ದಿಂದ ಮಹಿಳಾ ಕಲಾವಿದರ ತರಬೇತಿಗೆ ಅರ್ಜಿ

kajapa-manjunath-gondabalಕೊಪ್ಪಳ ಮೇ. ೬. ಕೊಪ್ಪಳ ಜಿಲ್ಲೆಯಲ್ಲಿ ನಾಲ್ಕೂ ತಾಲೂಕಿನಲ್ಲಿ ಡೊಳ್ಳು ಮತ್ತು ವೀರಗಾಸೆ ತಂಡ ರಚನೆ ಮಾಡಿ ತರಬೇತಿ ನೀಡಿ, ಉಪಕಸುಬಾಗಿ ತೆಗೆದುಕೊಳ್ಳುವ ಸಲುವಾಗಿ ೧೫ ರಿಂದ ೩೦ ವರ್ಷದ ಆಸಕ್ತ ಮಹಿಳೆಯರಿಂದ ಅರ್ಜಿ ಕರೆಯಲಾಗಿದೆ.
ಈ ಕುರಿತು ಪ್ರಕಟಣೆ ನೀಡಿರುವ ಜಿಲ್ಲಾ ಕನ್ನಡ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಮಂಜುನಾಥ ಜಿ. ಗೊಂಡಬಾಳ, ಒಂದು ತಂಡದಲ್ಲಿ ೧೫ ಜನರಿಗೆ ಅವಕಾಶ ನೀಡಲಾಗುವದು, ಅದರಂತೆ ಪ್ರತಿ ತಾಲೂಕಿನಲ್ಲಿ ೨ ತಂಡದ ೩೦ ಮಹಿಳೆಯರಿಗೆ ೧೦ ದಿನಗಳ ಪೂರ್ಣಾವಧಿ ತರಬೇತಿಯನ್ನು ನುರಿತ ಹಿರಿಯ ಕಲಾವಿದರು ನೀಡುವರು. ತರಬೇತಿ ನಂತರ ಕನ್ನಡ ಜಾನಪದ ಪರಿಷತ್ ತಂಡವಾಗಿ ಕಾರ್ಯನಿರ್ವಹಿಸಬೇಕಾಗುತ್ತದೆ, ಜಿಲ್ಲೆ ಸೇರಿದಂತೆ ರಾಜ್ಯ ಹಾಗೂ ಹೊರರಾಜ್ಯಗಳಲ್ಲಿ ಅವಕಾಶ ಕಲ್ಪಿಸಲಾಗುವದು, ಮಹಿಳಾ ತಂಡಗಳಿಗೆ ಎಲ್ಲೆಡೆ ಬೇಡಿಕೆ ಇದ್ದು ತಂಡದ ಸದಸ್ಯರು ಆರ್ಥಿಕವಾಗಿಯೂ ಮುಂದೆ ಬರಲು ಹಾಗೂ ತಮ್ಮ ಪ್ರತಿಭೆ ಅನಾವರಣಗೊಳಿಸಿಕೊಳ್ಳಲು ಸುಸಂದರ್ಭವಾಗಿದೆ ಎಂದು ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿ ಹಾಗೂ ಹೆಸರನ್ನು ದಿನಾಂಕ ೧೫-೫-೨೦೧೬ ರೊಳಗೆ ಮಂಜುನಾಥ ಜಿ. ಗೊಂಡಬಾಳ ಅಧ್ಯಕ್ಷರು, ಕಜಾಪ, ವಿಶ್ವ ಆಫ್‌ಸೆಟ್ ಪ್ರಿಂಟರ‍್ಸ್ ಆಂಡ್ ಪಬ್ಲಿಷರ‍್ಸ್, ತಾಲೂಕ ಪಂಚಾಯತ ಕಾಂಪ್ಲೆಕ್ಸ್, ಕೊಪ್ಪಳ ಮೊ : ೯೪೪೮೩೦೦೦೭೦ ಇವರನ್ನು ಸಂಪರ್ಕಿಸಬಹುದು.

Leave a Reply