ಕಜಾಪ ದಿಂದ ಏ. ೨೩ ರಂದು ಜಾನಪದ ಗೀತೆ ಸ್ಪರ್ಧೆ.

ಕೊಪ್ಪಳ ಏ. ೧೯. ಜಿಲ್ಲಾ ಕನ್ನಡ ಜಾನಪದ ಪರಿಷತ್ತು ವತಿಯಿಂದ ಏಪ್ರಿಲ್ ೨೩ ರಂದು ನಗರದ ಸರ್ಕಾರಿ ಪದವಿ ಕಾಲೇಜಿನಲ್ಲಿ ಬೆಳಿಗ್ಗೆ ೯-೩೦ ರಿಂದ ಜಿಲ್ಲಾ ಮಟ್ಟದ ಜಾನಪದ ಸಮೂಹ ಗೀತೆ ಸ್ಪರ್ಧೆ ಏರ್ಪಡಿಸಲಾಗಿದೆ ಎಂದು ಜಿಲ್ಲಾಧ್ಯಕ್ಷ ಮಂಜುನಾಥ ಜಿ. ಗೊಂಡಬಾಳ ತಿಳಿಸಿದ್ದಾರೆ.
೧೫ ರಿಂದ ೨೫ ವಯಸ್ಸಿನ ಕನಿಷ್ಠ ೪ ಗರಿಷ್ಠ ೬ ಜನರ ಗುಂಪಿನ ಸಮೂಹ ಗೀತೆ ಸ್ಪರ್ಧೆ ಏರ್ಪಡಿಸಿದ್ದು, ಆಯ್ಕೆಯಾದ ತಂಡವನ್ನು ಇದೇ ೨೫ ರಂದು ಗೋಕರ್ಣದ ಕಡಲ ತೀರದಲ್ಲಿ ನಡೆಯುವ ರಾಜ್ಯಮಟ್ಟದ ಜಲ ಜನಪದೋತ್ಸವಕ್ಕೆ ಕಳುಹಿಸಿಕೊಡಲಾಗುವದು. ಗೀಗೀ ಪದ, ಲಾವಣಿ, ಸೋಬಾನೆ ಪದ, ರಾಗಿ ಬೀಸುವ ಪದ, ಜನಪದ ನೃತ್ಯ ಗೀತೆಗಳನ್ನು ಹಾಡಲು ಅವಕಾಶವಿಲ್ಲ, ತೀರ್ಪುಗಾರರು ವಯಸ್ಸಿನ ದೃಢೀಕರಣ ಕೇಳಿದರೆ ಹಾಜರುಪಡಿಸಬೇಕು. ಮೂಲ ಜಾನಪದ ಗೀತೆ ಆಗಿರಬೇಕು, ಸಾಹಿತ್ಯ, ಧ್ವನಿ, ದಾಟಿ, ಶೈಲಿ, ಹಿಮ್ಮೇಳ, ವೇಷ ಭೂಷಣಗಳನ್ನು ಪರಿಗಣಿಸಲಾಗುವದು. ಸಮೂಹ ಗೀತೆಯಲ್ಲಿ ಯುವಕರು ಯುವತಿಯರು ಒಟ್ಟಾಗಿ ಸೇರಿ ಭಾಗವಹಿಸಬಹುದು, ಪ್ರತ್ಯೇಕವಾಗಿ ಭಾಗವಹಿಸಬಹುದು.  ರಾಜ್ಯಮಟ್ಟದ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಥಮ ರೂ. ೬೦೦೦, ದ್ವಿತಿಯ ರೂ. ೪೦೦೦, ತೃತೀಯ ರೂ. ೨೦೦೦ ಮತ್ತು ಮೂರು ಸಮಾಧಾನಕರ ಬಹುಮಾನಕ್ಕೆ ೧೦೦೦ ರೂ. ನೆನಪಿನ ಕಾಣಿಕೆ ಪ್ರಶಸ್ತಿಪತ್ರವನ್ನೊಳಗೊಂಡ ಸನ್ಮಾನ ಇರುತ್ತದೆ. ರಾಜ್ಯ ಮಟ್ಟದಲ್ಲಿ ಪಾಲ್ಗೊಂಡವರಿಗೆ ಉಚಿತ ಊಟ, ವಸತಿ, ಪ್ರಮಾಣ ಪತ್ರ ಮತ್ತು ನೆನಪಿನ ಕಾಣಿಕೆ ನೀಡಲಾಗುವದು. ಹೆಚ್ಚಿನ ಮಾಹಿತಿಗೆ ಮೊ : ೯೪೪೮೩೦೦೦೭೦ ಸಂಪರ್ಕಿಸಬಹುದು.

Related posts

Leave a Comment