ಕಂಬಾಲಪಲ್ಲಿ ನಾಟಕ ಪ್ರದರ್ಶನ 

kambalapalli-revoor
ಕಂಬಾಲಪಲ್ಲಿ ನರಮೇಧ ನಡೆದು ೧೬ ವರ್ಷವಾಗಿದೆ. ಕೋಲಾರ ಜಿಲ್ಲೆ ಚಿಂತಾಮಣಿ ತಾಲೂಕಿನ ಕಂಬಾಲಹಳ್ಳಿ ಗ್ರಾಮ ಕಂಬಾಲಹಳ್ಳಿ ಗ್ರಾಮದಲ್ಲಿ ಇಂದಿಗೂ ನೀರವ ಮೌನ ಅವರಿಗೆ ನ್ಯಾಯ ಸಿಕ್ಕಿಲ್ಲ. ಈ ಘಟನೆಗೆ ೧೬ ವರ್ಷ ತುಂಬಿದೆ. ೨೦೦೦ ಮಾರ್ಚ್ ೧೬ ರಂದು ನಡೆದ ಮಾರಣಹೋಮ ಇಡೀ ಮನುಕುಲವೇ ನಾಚುವಂತಹ ಘಟನೆ
ಈ ದೇಶದಲ್ಲಿ ಪ್ರತಿ ದಿನಕ್ಕೆ ೩ ದಲಿತ ಹೆಣ್ಣುಮಕ್ಕಳ ಅತ್ಯಾಚಾರವಾಗುತ್ತದೆ, ಇಬ್ಬರು ದಲಿತರನ್ನು ಹತ್ಯೆ ಮಾಡಲಾಗುತ್ತದೆ. ಮೂವರು ದಲಿತರನ್ನು ಥಳಿಸಲಾಗುತ್ತದೆ. ೬ ದಲಿತ ಮನೆಗಳಿಗೆ ಬೆಂಕಿ ಹಚ್ಚಲಾಗುತ್ತದೆ ಇದು ಸರಕಾರವೇ ನೀಡಿರುವ ಅಂಕಿಅಂಶ ಆಳುವ ಸರ್ಕಾರಗಳು ದೌರ್ಜನ್ಯ ಮಾಡುವರ ಪರವಾಗಿಯೇ ಇದ್ದಾರೆ ಎಂದು ಮತ್ತೆ ಮತ್ತೆ ಸಾಬೀತಾಗುತ್ತಿದೆ.
ಬದನವಾಳು ಹತ್ಯೆ, ಕಂಬಾಲಪಲ್ಲಿ, ನಾಗಮಾರಪಲ್ಲಿ ಮುಂತಾದ ಮಾರಣಹೋಮಗಳಿಗೆ ಇಂದಿಗೂ ನ್ಯಾಯ ಸಿಕ್ಕಿಲ್ಲ. ಇತ್ತೀಚೆಗೆ ನಡೆದ ಚಾಮರಾಜನಗರದ ಸರಣಿ ದಲಿತರ ಹತ್ಯೆಗಳು, ಸಂತೇಮರಳ್ಳಿ ಶಿರಚ್ಛೇದ ಪ್ರಕರಣ, ಪೌರ ಕಾರ್ಮಿಕೆ ಲಕ್ಷ್ಮಮ್ಮನ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಕೃತಿಕಾ ದೇವಿಯನ್ನು ಪ್ರಿಯಕರನೇ ಭೀಕರವಾಗಿ ಸುಟ್ಟು ಬೂದಿ ಮಾಡಿದ ಪ್ರಕರಣ ಮಳವಳ್ಳಿ ಗೌರಮ್ಮನ ಹತ್ಯೆ ಹೀಗೆ ಲೆಕ್ಕವಿಲ್ಲದಷ್ಟು ಥಳಿತ ಬಹಿಷ್ಕಾರ ಪ್ರಕರಣಗಳು ನಡೆಯುತ್ತಿವೆ. ಆದರೆ ನ್ಯಾಯ ಎಂಬುದು ಮಾತ್ರ ಇಂದಿಗೂ ಮರೀಚಿಕೆಯಾಗಿಯೇ ಉಳಿದಿದೆ.
ಸರಕಾರಗಳು ದಲಿತರನ್ನು ಓಟ್ ಬ್ಯಾಂಕ್ ಮಾಡಿಕೊಂಡಿವೆ. ಈ ನಿಟ್ಟಿನಲ್ಲಿ ಕಂಬಾಲಪಲ್ಲಿ ನಮ್ಮೊಳಗಿನ ದೊಡ್ಡ ನಿದರ್ಶನ ಇಂದು ಈ ಮನುಜರ ಮೇಲಿನ ದಔರ್ಜನ್ಯಗಳನ್ನು ಮನುಜಪರರು ಪ್ರಶ್ನಿಸುವ ತುರ್ತಿದೆ. ಪಟ್ಟಭದ್ರ ಹಿತಾಸಕ್ತಿಗಳನ್ನು ಎದುರಿಸಲು ಎಲ್ಲರೂ ಮುಂದೆ ಬರಬೇಕಿದೆ. ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಕಂಬಾಲಪಲ್ಲಿ ನಾಟಕ ಪ್ರದರ್ಶನ ಹಮ್ಮಿಕೊಳ್ಳಲಾಗಿದ್ದು ಖ್ಯಾತ ನಿರ್ದೇಶಕ ಅನಿಲ್ ರೇವೂರು ಅವರ ನಿರ್ದೇಶಿಸಿದ್ದು ಹಾಸನದ ರಂಗಸಿರಿ ಸಂಸ್ಥೆಯವರು ಅಭಿನಯಿಸುತ್ತಿದ್ದಾರೆ.
ಈ ನಾಟಕಕ್ಕೆ ಈ ರಾಷ್ಟ್ರ ಪ್ರಶಸ್ತಿ ಬಂದಿದ್ದು, ಈ ನಾಟಕವನ್ನು ಅಂಗಳ ಸಂಸ್ಥೆ-ಹಿಟ್ನಾಳ ಇವರು ದಿನಾಂಕ ೧೩/೦೪/೨೦೧೬ ರಂದು ಕೊಪ್ಪಳ ನಗರದ ಸಾಹಿತ್ಯ ಭವನದಲ್ಲಿ ಬೆಳಿಗ್ಗೆ ೧೧:೩೦ಕ್ಕೆ ಆಯೋಜಿಸುತ್ತಿದ್ದು, ಇದಕ್ಕೆ SಈI ಸಂಘಟನೆ ಮತ್ತು ಕೊಪ್ಪಳ ಜಿಲ್ಲೆಯ ದಲಿತ ಸಂಘಟನೆಗಳ ಸಹಕಾರದಲ್ಲಿ ಪ್ರದರ್ಶನ ನಡೆಯುತ್ತಿದ್ದು

Please follow and like us:
error