ಒಮನ್ ದೇಶದಲ್ಲಿ ಕನ್ನಡ ರಾಜ್ಯೋತ್ಸವ  – ನೆರದಿದ್ದವರ ಮನಸೂರೆಗೊಂಡ ಜಾನಪದ, ಹಾಸ್ಯ 

-ನೆರದಿದ್ದ ಪ್ರೇಕ್ಷರಿಂದ ಚಪ್ಪಾಳೆಯ ಕರತಾಡನ
– ದೇಶಿಯ ಸಂಸ್ಕೃತಿಗೆ ಮಾರು ಹೋದ ಜನಸ್ತೋಮ
oman_salal_kannada oman_salal_kannada_jeevanasab
ಒಮನ್ ದೇಶದ ಸಲಾಲ ನಗರದಲ್ಲಿ ಮೊಟ್ಟಮೊದಲಿಗೆ  ಇಂಡಿಯನ್ ಸೋಶಿಯಲ್ ಕ್ಲಬ್ ಕರ್ನಾಟಕ ವಿ‘ಾಗ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
ಇಂಡಿಯನ್ ಸೋಶಿಯಲ್ ಕ್ಲಬ್ ಅ‘್ಯಕ್ಷ  ಮನ್ ಪ್ರೀತ್ ಸಿಂಗ್ ಅವರು ಉದ್ಘಾಟಿಸಿ, ಶು‘ಕೋರಿದರು.
ಬಳಿಕ ಕನ್ನಡ ರಾಜ್ಯೋತ್ಸವ ಕುರಿತು ಪತ್ರಕರ್ತ ಸೋಮರಡ್ಡಿ ಅಳವಂಡಿ ಅವರು ಮಾತನಾಡಿ, ಕನ್ನಡ ನಾಡಿನ ಹಿರಿಮೆಯನ್ನು ಅನ್ಯ ದೇಶದಲ್ಲಿಯೂ ಮೊಳಗಿಸುತ್ತಿರುವ ಹೊರನಾಡ ಕನ್ನಡಗಿರ ಕಾರ್ಯ ನಿಜಕ್ಕೂ ಶ್ಲಾಘನೀಯ. ಕನ್ನಡ ನಾಡಿನೊಳಗಿದ್ದರೂ ಕನ್ನಡತನ ಮರೆಯುವ ಈ ಕಾಲದಲ್ಲಿ ಹೊರಗಿದ್ದರೂ ಕನ್ನಡ ನಾಡು, ‘ಾಷೆ, ಸಂಸ್ಕೃತಿಯನ್ನು ಬೆಳಗಿಸುವ ಮತ್ತು  ಹೊರದೇಶದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡುತ್ತಿರುವುದು ಬಹುದೊಡ್ಡ ಕನ್ನಡ ಸೇವೆಯೇ ಸರಿ.
ಇಂದು ಕನ್ನಡ ನಾಡಿನಲ್ಲಿಯೇ ಕನ್ನಡದ ಸ್ಥಿತಿ  ಅ‘ೋಗತಿಗೆ ಹೋಗಿದೆ. ಕನ್ನಡ ಶಾಲೆಗಳು ಮುಚ್ಚುತ್ತಿವೆ. ಹಳ್ಳಿಗಳಿಗೂ ಆಂಗ್ಲಮಾ‘್ಯಮ ಶಾಲೆಗಳು ಕಾಲಿಟ್ಟಿವೆ. ರಾಜ‘ಾನಿ ಬೆಂಗಳೂರಿನಲ್ಲಿ ಅನ್ಯ ‘ಾಷೆಯವರ ಪ್ರ‘ಾವವೇ ಹೆಚ್ಚುತ್ತಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ.
ಕನಾರ್ಟಕ ರಾಜ್ಯ ರಚನೆ ಮತ್ತು   ಏಕೀಕರಣಕ್ಕಾಗಿ ನಡೆದ ಹೋರಾಟ ಮತ್ತೊಮ್ಮೆ ನಡೆಯುವ ಮೂಲಕ ಕನ್ನಡ ಕಾಪಾಡಬೇಕಾಗಿದೆ. ಕನ್ನಡ ನಾಡಿನಲ್ಲಿಯೇ ಕನ್ನಡದ ಸ್ಥಿತಿ ಅಷ್ಟು ಸರಿಯಾಗಿಲ್ಲದಂತೆ ಆಗಿದೆ. ಕಾರಣ ಸೃಜನ ಶೀಲ ಸಾಹಿತ್ಯದಲ್ಲಿ ಅನೇಕ ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದುಕೊಂಡಿರುವ ಹಿರಿಮೆ ಇದ್ದರೂ ವೃತ್ತಿಪರ ಸಾಹಿತ್ಯ ಇಲ್ಲದೆ ಕನ್ನಡ ಅನ್ನ ಕೋಡುವ ‘ಾಷೆಯಾಗುತ್ತಿಲ್ಲ.
ಕನ್ನಡನ ನಾಡಿನಲ್ಲಿಯೇ ಪಿಯುಸಿ ವಿಜ್ಞಾನ ಪದವಿಯನ್ನು ಆಂಗ್ಲಮಾ‘್ಯಮದಲ್ಲಿ ಓದಬೇಕು. ಜಗತ್ತಿನ ಜ್ಞಾನವನ್ನು ಕನ್ನಡದಲ್ಲಿಯೇ ಸಿಗುವುದಾದರೇ ಮಾತ್ರ ಕನ್ನಡ ‘ಾಷೆ ಉಳಿಯಲು, ಬೆಳೆಯಲು ಸಾ‘್ಯವಾಗುತ್ತದೆ ಎಂದರು.
ಇಂಡಿಯನ್ ಸೋಶಿಯಲ್ ಕ್ಲಬ್ ಕರ್ನಾಟಕ ವಿ‘ಾಗದ ಸಂಚಾಲಕರಾದ ಸುಬ್ರಮಣ್ಯ ಅವರು ಮಾತನಾಡಿ, ಸಲಾಲಲದಲ್ಲಿ ಕನ್ನಡ ಸಂಘಟನೆ, ಕನ್ನಡಿಗರ ಶಕ್ತಿಯನ್ನು  ಪ್ರಸಂಶೆ ಮಾಡಿದರು.
ಒಮನ್ ದೇಶದಲ್ಲಿ ಜಾನಪದ ವೈ‘ವ
ಇಂಡಿಯನ್ ಸೋಶಿಯಲ್ ಕ್ಲಬ್ ಹಮ್ಮಿಕೊಂಡಿದ್ದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ  ಜಾನಪದ ಕಲಾವಿದ ಜೀವನಸಾಬ ಬಿನ್ನಾಳ ಅವರ ಜಾನಪದ ಹಾಡುಗಳು ನೆರೆದಿದ್ದವರ ಮನಸೂರೆಗೊಂಡವು. ಜಾನಪದ, ಗೀಗೀ ಪದ, ಶೋ‘ಾನೆ ಪದ, ಲಾವಣಿ ಪದ, ಬೀಸೋ ಕಲ್ಲಿನಪದಗಳನ್ನು ಹಾಡಿ, ಬಳಿಕ ಜಾನಪದಲ್ಲಿ ಹಾಸ್ಯವನ್ನು ಉಣಬಡಿಸಿದರು.
ಪ್ರಾರಂ‘ದಲ್ಲಿ ಇಂಡಿಯನ್ ಸೋಶಿಯಲ್ ಕ್ಲಬ್ ಕರ್ನಾಟಕ ವಿ‘ಾಗದ ಪದಾಧಿಕಾರಿಗಳು ಹಚ್ಚೇವು ಕನ್ನಡದ ದೀಪ ಹಾಡನ್ನು ಹಾಡಿದರು.
ಕಾರ್ಯಕ್ರಮದಲ್ಲಿ  ಉಮಾ ಕುಲಕರ್ಣಿ  ಹಾರ್ಮೋನಿಯಂ ನುಡಿಸಿದರು. ದಿನೇಶ ಕುಲಕರ್ಣಿ ತಬಲಾ ಸಾಥ್ ನೀಡಿದರು.
ಮತ್ತೋರ್ವ ಕಲಾವಿದ ಬಸವರಾಜ ಪಾಗದ ಅವರ ಹಾಸ್ಯ, ಮಿಮಿಕ್ರಿಗೆ ಸೇರಿದ್ದವರು ಅಬ್ಬಾ ಎಂದರು.
ವೇದಿಕೆಯಲ್ಲಿ ಎಚ್. ಎಸ್. ಸುಬ್ರಮಣ್ಯ, ರಾಮದಾಸ ಕಾಮತ್, ಗಿರೀಶ ಕುಲಕರ್ಣಿ, ರಮೇಶ ಪೂಜಾರಿ, ರವಿಕುಮಾರ ಪಾಟೀಲ, ಗಣಪತಿ ಶಟ್ಟಿಗಾರ, ಶಕೀಲ್ ಮಹ್ಮದ್, ಸುರೇಶ ಪಳಾರಿಮಠ, ಪ್ರತಿಮಾ ಪುತ್ರನ್ ಇದ್ದರು.

 

Please follow and like us:
error