ಐ.ಎ.ಎಸ್.ಮತ್ತು ಯು.ಪಿ.ಎಸ್.ಸಿ ಹುದ್ದೆಗೆ ಹೈ.ಕ ಅನುದಾನದಲ್ಲಿ ಉಚಿತ ತರಬೇತಿಗೆ ಎಸ್.ಎಫ್.ಐ ಆಗ್ರಹ

ಕೊಪ್ಪಳ ; ಕೇಂದ್ರ ಸರ್ಕಾರವು ಇತ್ತಿಚಿಗೆ ಯು.ಪಿ.ಎಸ್.ಸಿ ಮತ್ತು ಐ.ಎಫ್.ಸಿ ಗೆ ಪೂರ್ವ ಪರೀಕ್ಷೆಗೆ ಪದವಿ ಮುಗಿಸಿದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ ಮಾಡಿದ್ದು ಅಗಸ್ಟ ೦೭-೨೦೧೬ ರಂದು ಪೂರ್ವ ತರಬೇತಿ ಪರೀಕ್ಷಾ ನಡೆಯಲಿದ್ದು ಈ ಒಂದು ಪರೀಕ್ಷೆಗೆ ಅರ್ಜಿ ಹಾಕಿದ ಅಭ್ಯರ್ಥಿಗಳಿಗೆ ಉಚಿತ ತರಬೇತಿ ಕೊಡಲು ಎಸ್.ಎಫ್.ಐ ಒತ್ತಾಯಿಸುತ್ತದೆ.

ಏಕೆಂದರೆ ದಿ: ೧sfi-koppal-karnataka೦-೦೫-೨೦೧೬ ರಂದು ಯು.ಪಿ.ಎಸ್.ಸಿ ಮೇನ್ಸ್ ಫಲಿತಾಂಶ ಬೀಡುಗಡೆ ಮಾಡಿದ್ದು ಇದರಲ್ಲಿ ಕೇವಲ ಸುಮಾರು ೪೫ ಅಭ್ಯರ್ಥಿಗಳು ಮಾತ್ರ ಉನ್ನತ ಹುದ್ದೆಗೆ ಹೊಗಲು ಅರ್ಹತೆ ಪಡೆದಿದ್ದಾರೆ ಹೈ.ಕ ಪ್ರದೇಶದ ಬೆರಳಣಿಕೆಯಷ್ಟು ಅಭ್ಯರ್ಥಿಗಳು ಮಾತ್ರ ಪರೀಕ್ಷೆ ಬರೆದದ್ದು ಅದರಲ್ಲಿ ಒಬ್ಬರು ಮಾತ್ರ ತೆರ್ಗಡೆ ಹೊಂದಿದ್ದಾರೆ.

ಆದ್ದರಿಂದ ೩೭೧ ಜೇ ಕಲಂ ಅನ್ವಯ ಹೈ.ಕ ಪ್ರದೇಶಕ್ಕೆ ಸಾವಿರಾರು ಕೋಟಿ ರೂಪಾಯಿ ಅನುದಾನ ಬಂದಿದ್ದು ಹೈ.ಕ ಪ್ರದೇಶ ಅಭಿವೃದ್ದಿ ಮಂಡಳಿಯಲ್ಲಿ ಕೋಟ್ಯಾಂತರ ರೂಪಾಯಿ ಹಣ ಖರ್ಚಾಗದೆ ಹಾಗೇ ಉಳಿದಿದೆ ಆ ಅನುದಾನದಲ್ಲಿ ಹೈ.ಕ ವ್ಯಾಪ್ತಿಯ ಪದವಿ ಮುಗಿಸಿದ ವಿದ್ಯಾರ್ಥಿಗಳಿಗೆ, ಐ.ಎ.ಎಸ್, ಯು.ಪಿ.ಎಸ್.ಸಿ, ಕೆ.ಎ.ಎಸ್ ಮತ್ತು ಬ್ಯಾಂಕಿಂಗ್ ವಿವಿಧ ಸ್ಫರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿ ಹೋಗಲು ಹಣ ಬಳಕೆ ಮಾಡಬೇಕೆಂದು ಹೈ.ಕ ಪ್ರದೇಶ ಅಭಿವೃದ್ದಿ ಮಂಡಳಿಯ ಅಧ್ಯಕ್ಷರು ಹಾಗೂ ವೈದ್ಯಕೀಯ ಶಿಕ್ಷಣ ಸಚಿವರಾದ ಡಾ|| ಶರಣಪ್ರಕಾಶ ಪಾಟೀಲ್ ರವರನ್ನು ಎಸ್.ಎಫ್.ಐ ಜಿಲ್ಲಾ ಸಂಘಟನೆಯು ಜಿಲ್ಲಾ ಅಧ್ಯಕ್ಷರಾದ ಅಮರೇಶ ಕಡಗತ, ಕಾರ್ಯದರ್ಶಿ ಬಾಳಪ್ಪ ಹುಲಿಹೈದರ್, ಜಿಲ್ಲಾ ಮುಖಂಡರಾದ ಶಿವಕುಮಾರ, ಹನುಮಂತ, ದೇವೇಂದ್ರಗೌಡ ಜಿರ್ಲಿ, ಮಾರುತಿ ಎಸ್.ಬಿ, ಪ್ರಶಾಂತ ಉಪ್ಪಾರ ಹಾಗೂ ಇತರರು ಪತ್ರಿಕಾ ಮುಖಾಂತರ ಒತ್ತಾಯಿಸಿದ್ದಾರೆ

Leave a Reply