ಐಟಿ ಸೋಗಿನಲ್ಲಿ ಕೋಟಿ ಲೂಟಿ..!

ಬೆಂಗಳೂರು, ನ.25: ಇತ್ತೀಚಿಗೆ ಎಲ್ಲೆಡೆ ನಡೆದ ಆದಾಯ ತೆರಿಗೆ(ಐಟಿ) ಅಧಿಕಾರಿಗಳ ದಾಳಿಯ ಸುದ್ದಿಗಳನ್ನೆ ಗುರಿಯಾಗಿಸಿಕೊಂಡ ದರೋಡೆಕೋರರು, ನಗರ ವ್ಯಾಪ್ತಿಯಲ್ಲಿ ವಾಹನವನ್ನು ಐಟಿ ಅಧಿಕಾರಿಗಳ ಸೋಗಿನಲ್ಲಿ ನಿಲ್ಲಿಸಿ 1 ಕೋಟಿ ರೂ.ನಗದು ಲೂಟಿ ಮಾಡಿರುವ ಘಟನೆ ತಡವಾಗಿ ಇಲ್ಲಿನ ತಲಘಟ್ಟಪುರ ಪೊಲೀಸ್ ಠಾಣೆ ವ್ಯಾಪ್ತಿ ಬೆಳಕಿಗೆ ಬಂದಿದೆ.

  ಘಟನೆ ಹಿನ್ನಲೆ: ನ.22ರಂದು ಮುಂಜಾನೆ 4:30 ಸುಮಾರಿಗೆ ತಮಿಳುನಾಡಿನ ತಿರುಚಿಯಿಂದ ಕ್ಯಾಂಟರ್‌ನಲ್ಲಿ new-500-1000_currencyಒಂದು ಕೋಟಿ ಹಣದೊಂದಿಗೆ ಪೀಣ್ಯಾದಲ್ಲಿ ವಿವಿಧ ವಸ್ತುಗಳನ್ನು ಖರೀದಿಸಲೆಂದು ಚಾಲಕ ಸೇರಿ ಮೂವರು ಬೆಂಗಳೂರಿಗೆ ಬರುತ್ತಿದ್ದರು.

 ಈ ವೇಳೆ ನಗರದ ನೈಸ್‌ರಸ್ತೆಯ ನಾಗೇಗೌಡನಪಾಳ್ಯದ ಬಳಿ ಈ ಕ್ಯಾಂಟರ್ ಬರುತ್ತಿದ್ದಂತೆ ಕಾರಿನಲ್ಲಿ ಬಂದ ಮೂವರು ಅಪರಿಚಿತರು, ಕ್ಯಾಂಟರ್ ವಾಹನವನ್ನು ಅಡ್ಡಗಟ್ಟಿ ನಾವು ಆದಾಯ ತೆರಿಗೆ ಅಧಿಕಾರಿಗಳು, ಎಲ್ಲಿಂದ ಬರುತ್ತಿದ್ದೀರಿ, ವಾಹನದಲ್ಲಿ ಏನಿದೆ, ದಾಖಲೆ ನೀಡಿ ಎಂದು ಪ್ರಶ್ನಿಸಿದ್ದಾರೆ. ಬಳಿಕ ವಾಹನದಲ್ಲಿದ್ದ ಹಣವನ್ನು ತಮ್ಮ ಕಾರಿನಲ್ಲಿಟ್ಟುಕೊಂಡಿದ್ದಾರೆ.

 ತದನಂತರ ನೀವು ನಮ್ಮನ್ನು ಹಿಂಬಾಲಿಸಿ ಕಚೇರಿಗೆ ಬನ್ನಿ ಎಂದು ಹೇಳಿ ಹೊರಟ್ಟಿದ್ದಾರೆ. ಬಳಿಕ ಸ್ಪಲ್ಪ ದೂರು ಹೋಗುತ್ತಿದ್ದಂತೆಯೇ ನಕಲಿ ಐಟಿ ಅಧಿಕಾರಿಗಳ ಕಾರು ಮಾಯವಾಗಿದೆ. ಇದನ್ನು ಗಮನಿಸಿ ವಾಹನದಲ್ಲಿದ್ದ ಆರೋಗ್ಯರಾಜ್ ಎಂಬುವರು ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲು ಮಾಡಿದ್ದಾರೆ. ಪ್ರಕರಣ ಸಂಬಂಧ ತಲಘಟ್ಟಪುರ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Please follow and like us:
error