ಏಷ್ಯಾದ ಪ್ರಪ್ರಥಮ ರೈಲ್ವೆ ಚಾಲಕಿ ಮುಮ್ತಾಜ್ ಗೆ ರಾಷ್ಟ್ರಪತಿಯಿಂದ ನಾರಿ ಶಕ್ತಿ ಪುರಸ್ಕಾರ

ಸುದ್ದಿಯಾಗದ ಸುದ್ದಿ :

ಮುಂಬೈ: 25 ವರ್ಷಗಳ ಹಿಂದೆ ಪುರುಷರ ಏಕಸ್ವಾಮ್ಯ ಮುರಿದು ಏಷ್ಯಾದ ಮೊಟ್ಟಮೊದಲ ಡೀಸೆಲ್ ಎಂಜಿನ್ ರೈಲು ಚಾಲಕಿ ಎನಿಸಿಕೊಂಡಿದ್ದ ಮುಂಬೈ ಮೂಲದ ಮುಮ್ತಾಜ್ ಎಂ.ಖಾಝಿ ಅವರಿಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರು ಅಂತರರಾಷ್ಟ್ರೀಯ ಮಹಿಳಾ ದಿನಾmumtaz-train-driverಚರಣೆ ಸಮಾರಂಭದಲ್ಲಿ ನಾರಿ ಶಕ್ತಿ ಪುರಸ್ಕಾರ ಪ್ರದಾನ ಮಾಡಿದರು. ಇವರ ಜತೆಗೆ ಇತರ ಆರು ಮಂದಿ ಕೂಡಾ ಈ ಅತ್ಯುನ್ನತ ಗೌರವಕ್ಕೆ ಪಾತ್ರರಾದರು.

ಮುಮ್ತಾಜ್ ಇದುವರೆಗೆ ವಿವಿಧ ಬಗೆಯ ರೈಲುಗಳನ್ನು ಚಾಲನೆ ಮಾಡಿದ್ದು, ಲಕ್ಷಾಂತರ ಮಹಿಳೆಯರಿಗೆ ಸ್ಫೂರ್ತಿ ತುಂಬಿದ್ದಾರೆ. “ಎಲ್ಲರ ಸಕ್ರಿಯ ಪಾಲ್ಗೊಳ್ಳುವಿಕೆಯಿಂದ ಅಭಿವೃದ್ಧಿ ಸಾಧಿಸುವ ಗುರಿ ಹೊಂದಿದ ಆಧುನಿಕ ಭಾರತದಲ್ಲಿ ಲಿಂಗ ತಾರತಮ್ಯಕ್ಕೆ ಅವಕಾಶವಿಲ್ಲ” ಎಂದು ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ಮುಖರ್ಜಿ ಬಣ್ಣಿಸಿದರು.

45 ವರ್ಷ ವಯಸ್ಸಿನ ಮುಮ್ತಾಜ್, ಮುಂಬೈನ ಸೆಂಟ್ರಲ್ ರೈಲ್ವೆಯ ಉಪನಗರ ಸ್ಥಳೀಯ ರೈಲುಗಳ ಮೋಟರ್‌ವುಮನ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕಾಕತಾಳೀಯವೆಂದರೆ ಇವರು ರೈಲು ಚಲಾಯಿಸುವ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್- ಥಾಣೆ ವಿಭಾಗವು ಭಾರತದ ಮೊಟ್ಟಮೊದಲ ಹಾಗೂ ಇಕ್ಕಟ್ಟಾದ ರೈಲ್ವೆ ಹಳಿಯಾಗಿದೆ.

ಸಂಪ್ರದಾಯಸ್ಥ ಮುಸ್ಲಿಂ ಕುಟುಂಬದಲ್ಲಿ ಜನಿಸಿದ ಮುಮ್ತಾಜ್, 1989ರಲ್ಲಿ ರೈಲ್ವೆಯಲ್ಲಿ ಉದ್ಯೋಗಕ್ಕೆ ಅರ್ಜಿ ಸಲ್ಲಿಸಿದಾಗ, ಸ್ವತಃ ರೈಲ್ವೆ ಉದ್ಯೋಗಿಯಾಗಿದ್ದ ತಂದೆ ಅಲ್ಲಾರಖು ಇಸ್ಮಾಯಿಲ್ ಖಾತಾವಾಲಾ ಅವರಿಂದ ವಿರೋಧ ಎದುರಿಸಬೇಕಾಯಿತು. ಸ್ನೇಹಿತರು ಹಾಗೂ ಕುಟುಂಬದವರು ಮನವೊಲಿಸಿದ ಬಳಿಕ, ಆಕೆಯ ಕನಸಿನ ಉದ್ಯೋಗಕ್ಕೆ ಸಮ್ಮತಿ ಸೂಚಿಸಿದರು. ಮುಮ್ತಾಜ್ ಅವರು ಮಸೂದ್ ಕಾಜಿ ಜತೆ ವಿವಾಹವಾಗಿದ್ದು, ಪತಿ ಎಲೆಕ್ಟ್ರಿಕಲ್ ಎಂಜಿನಿಯರ್ ಆಗಿದ್ದಾರೆ. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.

1995ರಲ್ಲಿ ಇವರ ಹೆಸರು ಲಿಮ್ಕಾ ದಾಖಲೆ ಪುಸ್ತಕದಲ್ಲಿ ಮೊಟ್ಟಮೊದಲ ಡೀಸೆಲ್ ಲೋಕೊಮೋಟಿವ್ ಚಾಲಕಿ ಎಂಬ ದಾಖಲಾಯಿತು. 2015ರಲ್ಲಿ ಅವರಿಗೆ ರೈಲ್ವೆ ಪ್ರಧಾನ ವ್ಯವಸ್ಥಾಪಕರ ಪ್ರಶಸ್ತಿ ಸಂದಿತ್ತು.

Please follow and like us:
error

Related posts

Leave a Comment