ಎಸ್‌ಎಂಎಸ್ ಮೂಲಕ ಪಡಿತರ ಮತ್ತು ಸೀಮೆಎಣ್ಣೆ ಕೂಪನ್ ಪಡೆದುಕೊಳ್ಳುವ ವಿಧಾನ

how_to_get_ration_card

: ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯು ಕೊಪ್ಪಳ ಜಿಲ್ಲೆಯ ಪಡಿತರ ಚೀಟಿದಾರರಿಗೆ ಐವಿಆರ್‌ಎಸ್ ವ್ಯವಸ್ಥೆಯಲ್ಲಿ ಮೊಬೈಲ್ ಮೂಲಕ ಆಹಾರಧಾನ್ಯ ಮತ್ತು ಸೀಮೆ ಎಣ್ಣೆ ಕೂಪನ್ ಪಡೆದುಕೊಳ್ಳಲು ಅವಕಾಶ ಕಲ್ಪಿಸಿದೆ.
ಎಸ್‌ಎಂಎಸ್ ಮೂಲಕ ಕೂಪನ್ ಪಡೆದುಕೊಳ್ಳುವ ವಿಧಾನ: ಪಡಿತರ ಚೀಟಿದಾರರು ತಮ್ಮ ಆಧಾರ ರಜಿಸ್ಟರ್ಡ್ ಮೊಬೈಲ್‌ನಿಂದ ೧೬೧ ಎಂದು ಡೈಯಲ್ ಮಾಡಿ ಸಂಪರ್ಕ ದೊರೆತ ತಕ್ಷಣ ೪ ನ್ನು ಒತ್ತಿ ನಂತರ ತಮ್ಮ ಆಧಾರ ಕಾರ್ಡಿನ ೧೨ ಸಂಖ್ಯೆಗಳನ್ನು ಒತ್ತಿ * (ಸ್ಟಾರ್) ಅನ್ನು ಒತ್ತಿದಾಗ ಸ್ವಲ್ಪ ಸಮಯದ ನಂತರ ತಮ್ಮ ಮೊಬೈಲ್‌ಗೆ ಒಂದು ( ಉದಾ: ಆತ್ಮೀಯ ನಾಗರಿಕ, ನಿಮ್ಮ ಆಹಾರ ಕೋಪನ್ ಕೋಡ್ ೧೨೩೪೫ ಮತ್ತು ಸೀಮೆಎಣ್ಣೆ ಕೂಪನ್ ಕೋಡ್ ೧೨೩೪೫ ) ಎಂದು ಸಂದೇಶ ಬರುತ್ತದೆ. ಈ ಸಂದೇಶವನ್ನು ನಿಮ್ಮ ಪಡಿತರ ಅಂಗಡಿಯವರಿಗೆ ತೋರಿಸಿ ಪಡಿತರ/ಸೀಮೆಎಣ್ಣೆ ಪಡೆದುಕೊಳ್ಳಬಹುದು. ಇದರಿಂದ ಫೋಟೋ ಸೇವಾ ಕೇಂದ್ರಕ್ಕೆ ಹೋಗಿ ಸರದಿಯಲ್ಲಿ ನಿಂತು ಕೂಪನ್ ಪಡೆದುಕೊಳ್ಳುವುದನ್ನು ತಪ್ಪಿಸಬಹುದಾಗಿದೆ.
ಒಂದು ವೇಳೆ ಎಸ್‌ಎಂಎಸ್ ಮೂಲಕ ಕೂಪನ್ ಪಡೆಯಲು ಆಗದವರು, ಫೋಟೋ ಸೇವಾ ಕೇಂದ್ರದಿಂದಲೂ ತಮ್ಮ ಬಯೋ ದೃಢೀಕರಣ ಹೆಬ್ಬೆಟ್ಟಿನ ಗುರುತನ್ನು ನೀಡಿ, ಬಾರ್ ಕೋಡೆಡ್ ಕೂಪನ್ ಉಚಿತವಾಗಿ ಪಡೆದುಕೊಳ್ಳಬಹುದು. ತಮಗೆ ಕೂಪನ್ ನೀಡಿದ್ದಕ್ಕೆ ಒಂದು ಸಲ ಬಯೋ ಹೆಬ್ಬೆಟ್ಟಿನ ಗುರುತನ್ನು ನೀಡಿ, ಕೂಪನ್ ಪಡೆಯುವುದಕ್ಕೆ ಸರ್ಕಾರದಿಂದ ಸೇವಾ ಕೇಂದ್ರದವರಿಗೆ ೦೩ ರೂ. ನೀಡಲಾಗುತ್ತದೆ. ಆದ್ದರಿಂದ ಪಡಿತರ ಚೀಟಿದಾರರು ಯಾವುದೇ ಕಾರಣಕ್ಕೂ ಸೇವಾ ಕೇಂದ್ರದವರಿಗೆ ಹಣ ನೀಡದೇ, ಉಚಿತವಾಗಿ ಪಡೆದುಕೊಳ್ಳಬೇಕು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಉಪನಿರ್ದೇಶಕ ವೈ.ಹೆಚ್. ಲಂಬು  ತಿಳಿಸಿದ್ದಾರೆ.

Leave a Reply